ಅಥಣಿ 11: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನ ಸಾಮಾನ್ಯರ ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಿ ದಿನಂ ಪ್ರತಿ ತೈಲ ಬೆಲೆ ಹೆಚ್ಚಿಸುತ್ತಿದ್ದು ಜನರ ಬದುಕು ದುಸ್ತರವಾಗಿದೆ ಎಂದು ತಾಲೂಕಾ ಜೆಡಿಎಸ್ ಅದ್ಯಕ್ಷ ಗಿರೀಶ ಬುಟಾಳಿ ಹೇಳಿದರು.
ಅವರು ಕಾಂಗ್ರೆಸ್ ಪಕ್ಷವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಭಾರತ ಬಂದಗೆ ಕರೆ ನೀಡಿದ ಹಿನ್ನಲೆಯಲ್ಲಿ ಪಕ್ಷದ ಪರವಾಗಿ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡುತ್ತಿದ್ದರು. ಜನಸಾಮಾನ್ಯನ ಜೆಬಿಗೆ ಕನ್ನಾಹಾಕಿ ವಿದೇಶಗಳಿಗೆ ಅಗ್ಗದ ದರದಲ್ಲಿ ತೈಲನ್ನು ಪೂರೈಕೆ ಮಾಡಲಾಗುತ್ತಿದೆ. ಜನಸಾಮಾನ್ಯರ ಹಣ ಲೂಟಿಮಾಡಿ ದೇಶದ ಅಭಿವೃದ್ಧಿಗೆ ಬಳಕೆಮಾಡಲಾಗುತ್ತಿದ್ದಿವೆ ಎಂದು ಬೊಗಳೆ ಬೀಡುತ್ತಿರುವ ಕೇಂದ್ರ ಸರಕಾರ ಸುಮಾರು 11 ಲಕ್ಷ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಕಿರಣಕುಮಾರ ಪಾಟೀಲ ಮಾತನಾಡಿ ಸುಮಾರು 350 ರೂ. ರಷ್ಟಿಂದ ಅಡುಗೆ ಅನೀಲ ಸಿಲಿಂಡರ ಬೆಲೆ ಇಂದು ರೂ. 850 ರಷ್ಟಾಗಿದೆ. ಬಹುತೇಕ ಎಲ್ಲ ವಸ್ತುಗಳ ಬೆಲೆ ಗಗನಕ್ಕೆರಿದ್ದು, ಶ್ರಿಸಾಮಾನ್ಯ ಈ ಹೊರೆಗಳಿಂದ ದಿನ ನಿತ್ಯದ ಬದುಕು ನಡೆಸುವುದು ಕಷ್ಟವಾಗಿದೆ. ತೈಲ ಬೆಲೆ ನಿಂತ್ರಿಸುವಲ್ಲಿ ಮೋದಿ ಸರಕಾರ ವಿಫಲವಾಗಿದ್ದು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಜನರು ಬುದ್ಧಿ ಕಲಿಸಲಿದ್ದಾರೆ ಎಂದರು.
ಈ ವೇಳೆ ಎರಡು ಪಕ್ಷದ ಮುಖಂಡರುಗಳಾದ ಅರ್ಷದ ಗದ್ಯಾಳ, ಶಾಮ ಪೂಜಾರಿ, ಅಯಾಜಅಮೀನ ಮಾಸ್ಟರ್, ಸತ್ಯಾಪ್ಪ ಬಾಗೆನ್ನವರ, ಸುನೀಲ ಸಂಕ, ಚಂದ್ರಕಾಂತ ಇಮ್ಮಡಿ, ಶಿವಗೊಂಡ ಜಗದೇವ, ವೀಲಿನ ಎಳಮಲ್ಲಿ, ವಿನಯ ಪಾಟೀಲ, ಲೆನೀನ ಹಳಿಂಗಳಿ,ಬಸು ಬುಟಾಳಿ, ಪ್ರಕಾಶ ಪೂಜಾರಿ,ದಿಲೀಪ ಕಾಂಬಳೆ ಸೇರಿದಂತೆ ಅನೇಕರಿದ್ದರು.