ಹುನಗುಂದ೨೯: ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದೆ. ಈ ದೇಶದಲ್ಲಿ ಹಲವಾರು ಧರ್ಮ, ಜಾತಿ, ಮತ, ಪಂಥಗಳು ಅನೇಕ ಆಚರಣೆ, ಸಂಸ್ಕೃತಿ, ಸಂಪ್ರದಾಯದೊಂದಿಗೆ ಭಾವೈಕ್ಯತೆಯಿಂದ ಬದುಕುತ್ತಿದ್ದು ಇದಕ್ಕೆಲ್ಲ ಡಾ.ಬಾಬಾಸಾಹೇಬ ಅಂಬೇಡ್ಕರ ನೀಡಿದ ಸಂವಿಧಾನ ಕಾರಣವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಟಿ.ಸಿ.ಎಚ್.ಕಾಲೇಜ ಮೈದಾನದಲ್ಲಿ ತಾಲೂಡಾಳಿತ ಹಮ್ಮಿಕೊಂಡಿದ್ದ 71 ನೆಯ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಸಂವಿಧಾನ ಮುಂಚಿತವಾಗಿ ಮಹಾತ್ಮಾ ಗಾಂಧೀಜಿ ಸೇರಿದಂತೆ ಅನೇಕ ಮಹಾನ್ ನಾಯಕರುಗಳು ತ್ಯಾಗ ಬಲಿದಾನದ ಮೂಲಕ ಬ್ರಿಟೀಷರನ್ನು ಓಡಿಸಿ ಈ ದೇಶವನ್ನು ಪರಕೀಯರಿಂದ ಮುಕ್ತಗೊಳಿಸಿದ ಬಳಿಕ ಈ ದೇಶವನ್ನು ಸುವ್ಯವಸ್ಥಿತವಾಗಿ ಆಡಳಿವನ್ನು ನಡೆಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಜಗತ್ತ ಪ್ರಸಿದ್ಧ ಲಿಖಿತ ಸಂವಿಧಾನವನ್ನು ರಚಿಸಿದರು.ಆ ಸಂವಿಧಾನದ ನೀತಿ ನಿಯಮಕ್ಕೆ ಅನುಗುಣವಾಗಿ ಮತ್ತು ಭಾಷೆಯ ಆಧಾರ ಮೇಲೆ ರಾಜ್ಯಗಳನ್ನು ರಚಿಸಿಲಾಯಿತು.
ಸ್ವಾತಂತ್ರ್ಯ ನಂತರ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶಗಳಿಂದ ಹಿಂದುಗಳ ಮೇಲೆ ಧಾರ್ಮಿಕ ಹಿಂಸಾಚಾರ ದೌರ್ಜನ್ಯಕ್ಕೆ ನಡೆಸಿದಾಗ ದೌರ್ಜನ್ಯಕ್ಕೆ ಒಳಗಾದ ಸಾವಿರಾರು ಜನ ನಿರಾಶ್ರಿತರು ಪ್ರಾಣ ಉಳಿಸಿಕೊಳ್ಳಲು ನಮ್ಮ ಭಾರತ ದೇಶಕ್ಕೆ ಬಂದಿದ್ದಾರೆ. ಮನೆ.ಮಠ, ಆಸ್ತಿ ಪಾಸ್ತಿಗಳನ್ನು ಬಿಟ್ಟು ಹುಟ್ಟ ಬಟ್ಟೆಯಲ್ಲಿ ಈ ದೇಶಕ್ಕೆ ಬಂದಂತವರಿಗೆ ಪೌರತ್ವ ನೀಡುವ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ದೌರ್ಜನ್ಯಕ್ಕೆ ಒಳಗಾದ ಜನಾಂಗಕ್ಕೆ ನಮ್ಮ ದೇಶದ ಪೌರತ್ವ ನೀಡುವದು ತಪ್ಪಾ ? ಕಾಂಗ್ರೆಸ್ ಪಕ್ಷ ಆದಿಯಾಗಿ ಕೆಲವು ನಾಯಕರು ಪೌರತ್ವದ ಬಗ್ಗೆ ಮುಸ್ಲಿಂರನ್ನು ದಾರಿ ತಪ್ಪಿಸುತ್ತಿದ್ದಾರೆ. ಮತಿಗೇಡಿ ರಾಜಕಾರಣಿಗಳ ಹೇಳಿಕೆಗೆ ಯಾರೂ ಕಿವಿಗೊಡಬೇಡಿ. ಮುಸ್ಲಿಂ ಬಂಧುಗಳೆ ಪೌರತ್ವ ಕಾಯ್ದೆಯಿಂದ ನಿಮಗೆ ಯಾವುದೇ ರೀತಿ ಅನ್ಯಾಯವಾಗದು.ನಿಮ್ಮ ಹಿಂದೆ ನಾವಿದ್ದೇವೆ ಎದೆಗುಂದಬೇಡಿ ಎಂದು ಹೇಳಿದರು.
ತಹಶೀಲ್ದಾರ ಬಸವರಾಜ ನಾಗರಾಳ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ನಾವೆಲ್ಲರೂ ತಾಯಿ ಭಾರತಾಂಭೆಯ ಮಕ್ಕಳಾಗಿ ಸಮಾನತೆ, ಸಹೋದರ, ಭಾತೃತ್ವ ಬದುಕುಬೇಕು. ಉತ್ತಮ ಸಮಾಜ ನಿರ್ಮಾಣದ ಹೊಣೆ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗಳ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ತಹಶೀಲ್ದಾರ ಬಸವರಾಜ ನಾಗರಾಳ ಅವರು ಪೊಲೀಸ್ ಮತ್ತು ವಿವಿಧ ಶಾಲೆಗಳ ಎನ್ಸಿಸಿ ತಂಡಗಳಿಂದ ಗೌರವ ವಂದನೆಯನ್ನು ಸ್ವೀಕರಿಸಿದರು.
ಜಿಪಂ ಸದಸ್ಯ ವೀರೇಶ ಉಂಡೋಡಿ, ಪುರಸಭೆ ಸದಸ್ಯರಾದ ಚಂದಪ್ಪ ಕಡಿವಾಲ,ಮಹೇಶ ಬೆಳ್ಳಿಹಾಳ, ಮಲ್ಲಿಕಾಜರ್ುನ ಹಳಪೇಟಿ, ನಿಂಬಣ್ಣ ಮುಕ್ಕಣ್ಣವರ, ಅಜ್ಜಪ್ಪ ನಾಡಗೌಡ, ಗುರಣ್ಣ ಗೋಡಿ, ಸಾಂತಪ್ಪ ಹೊಸಮನಿ, ಸುಬಾಸ ಮುಕ್ಕಣ್ಣವರ, ಹನಮಂತಗೌಡ ಬೆನಕನಡೋಣಿ, ತಾಲೂಕ ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ, ಶಾಂತಯ್ಯ ಮಠ, ಅಪ್ಪು ಆಲೂರ, ಸಿದ್ದಣ್ಣ ಗದ್ದನಕೇರಿ, ಸಿಪಿಐ ಅಯ್ಯನಗೌಡ ಪಾಟೀಲ, ಆನಂದ ಗದ್ದನಕೇರಿ ಸ್ವಾಗತಿಸಿ ನಿರೂಪಿಸಿದರು. ಬಿಇಒ ಗುರುರಾಜ ದಾಶ್ಯಾಳ ವಂದಿಸಿದರು.ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.