ಭಯೋತ್ಪಾದನೆ ನಿಗ್ರಹಿಸಲು ಭಾರತಕ್ಕೆ ವಿಶ್ವದ ಸಹಕಾರವಿದೆ : ರಾಜನಾಥ್‍ ಸಿಂಗ್

  ನವದೆಹಲಿ, ಫೆ 28 :  ಭಯೋತ್ಪಾದನೆಯನ್ನು ನಿಗ್ರಹಿಸುವ ಭಾರತದ ಕಾರ್ಯಕ್ಕ ಸಹಕಾರ ನೀಡಲು ವಿಶ್ವ ಬದ್ಧವಾಗಿದ್ದು, ಉಗ್ರ ಸಂಘಟನೆಗಳ ಮುಖಂಡರನ್ನು ನ್ಯಾಯದ ಪರಿಧಿಗೆ ತರುವಂತೆ ಪಾಕಿಸ್ತಾನದಂತಹ ದೇಶಗಳನ್ನು ಒತ್ತಾಯಿಸಲು ಹೆಗಲಿಗೆ ಹೆಗಲು ನೀಡಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ

  ಸಾಮೂಹಿಕ ರಾಜತಾಂತ್ರಿಕತೆ ಮತ್ತು ಆರ್ಥಿಕ ಒತ್ತಡದಿಂದ ಇತ್ತೀಚೆಗೆ ಪಾಕಿಸ್ತಾನದ ಮೇಲಾದ ಪರಿಣಾಮವನ್ನು ನಾವು ಗಮನಿಸಬಹುದು ಎಂದಿದ್ದಾರೆ.

  ಏರ್ ಪವರ್ ಸ್ಟಡೀಸ್ ಸೆಂಟರ್ ಆಯೋಜಿಸಿದ್ದ ಸೆಮಿನಾರ್ ಉದ್ದೇಶಿಸಿ ಅವರು ಮಾತನಾಡಿ, ಬಾಲಕೋಟ್ ವಾಯುದಾಳಿಯಲ್ಲಿ ಭಾಗವಹಿಸಿದ್ದ ಎಲ್ಲ ಧೀರ ಯೋಧರ ಬಗ್ಗೆ ಮೆಚ್ಚುಗೆ ಇದೆ.  ಅದರಲ್ಲೂ ವಾಯುಸೇನೆಯ ಯೋಧರ ಯೋಜನೆ, ನಿರ್ವಹಣೆ ಶ್ಲಾಘನೀಯ ಎಂದರು.

  “ಹಫೀಜ್ ಸಯೀದ್ ನಂತಹ ಗಣ್ಯಾತಿಗಣ್ಯ ಆತಿಥ್ಯ ಸ್ವೀಕರಿಸುತ್ತಿದ್ದ ಉಗ್ರರು ಇದೀಗ ಕಂಬಿ ಹಿಂದೆ ಇದ್ದಾರೆ. ಆದಾಗ್ಯೂ ಪಾಕಿಸ್ತಾನ ಹಳೆಯ ಚಾಳಿ ಬಿಟ್ಟಿಲ್ಲ  ಪ್ರಾಕ್ಸಿ ದಾಳಿಗೆ ಪ್ರಚೋದನೆ ನೀಡುತ್ತಲೇ ಇದೆ” ಎಂದರು.

  ಭಾರತೀಯ ಸೇನೆ ಕೈಗೊಂಡ ಬಾಲಕೋಟ್ ದಾಳಿ ಕಾರ್ಯಾಚರಣೆಯ ಪರಿಣಾಮ, ದೇಶದ ವಿರುದ್ಧ ಅತ್ಯಂತ ಕಡಿಮೆ ಖರ್ಚಿನಲ್ಲಿ ಭಯೋತ್ಪಾದನೆಯ ಉದ್ಯೋಗ ಸೃಷ್ಟಿ ನಿಂತಿದೆ.  ಗಡಿ ನಿಯಂತ್ರಿ ರೇಖೆಯ ಬಳಿಯಿದ್ದ ಉಗ್ರರು, ಉಗ್ರರ ಮೂಲಸೌಕರ್ಯಗಳು ,ಮತ್ತು ಉಗ್ರ ತರಬೇತಿ ಸೌಲಭ್ಯಗಳ ನಾಶವಾಗಿದೆ ಎಂದರು.

  ರಕ್ಷಣಾ ಪಡೆಗಳ ರಚನಾತ್ಮಕ ಬದಲಾವಣೆಗಳನ್ನು ಬಗ್ಗೆ ವಿವರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರಕ್ಕೆ ಎದುರಾಗುವ ಬೆದರಿಕೆ ನಿಭಾವಣೆಯ ಉದ್ದೇಶದಿಂದ ಕೆಲವು ಪ್ರಮುಖ ರಚನಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ಇದರ ಕಾರ್ಯಸಾಮರ್ಥ್ಯವನ್ನು  ಹೊಂದಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಎಂದು ಹೇಳಿದರು.