ನವದೆಹಲಿ, ಸೆ 7: ಇದೇ 9 ರಿಂದ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಆರಂಭವಾಗುವ ಭಾರತ ಕಿರಿಯರ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ 33 ಆಟಗಾರರ ಸಂಬಾವ್ಯಪಟ್ಟಿಯನ್ನು ಹಾಕಿ ಇಂಡಿಯಾ ಇಂದು ಪ್ರಕಟಿಸಿದೆ. ಆಯ್ಕೆಯಾಗಿರುವ 33 ಸಂಭಾವ್ಯ ಆಟಗಾರರು ಇಂದು ಬೆಂಗಳೂರು ಸಾಯಿ ಕೇಂದ್ರಕ್ಕೆ ಹಾಜರಾಗಿದ್ದಾರೆ. ಸೋಮವಾರದಿಂದ ಒಟ್ಟು ನಾಲ್ಕು ವಾರಗಳ ಕಾಲ ಶಿಬಿರ ನಡೆಯಲಿದೆ. ಅಕ್ಟೋಬರ್ 9 ರಂದು ಜೋಹರ್ ಕಪ್(ಪುರುಷರ) ಟೂರ್ನಿ ಆಡಲು ಭಾರತ ಕಿರಿಯರು ಮಲೇಷ್ಯಾಗೆ ತೆರಳಲಿದೆ. ವಾರ್ಷಿಕ ಟೂರ್ನಿಯು ಅಕ್ಟೋಬರ್ 12 ರಂದು ಆರಂಭವಾಗಲಿದ್ದು, ಭಾರತದ ಜತೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್ ಹಾಗೂ ಆತಿಥೇಯ ಮಲೇಷ್ಯಾ ಭಾಗವಹಿಸಲಿದೆ. ಕೋರ್ ಸಂಭಾವ್ಯಪಟ್ಟಿ: ಗೋಲ್ ಕೀಪರ್ಗಳು: ಪವನ್, ಪ್ರಶಾಂತ್ ಕುಮಾರ್ ಹಾಗೂ ಸಹಿಲ್ ಕುಮಾರ್ ನಾಯಕ್ ಡಿಫೆಂಡರ್ಗಳು: ಸುಮನ್ ಬೆಕ್, ಪ್ರತಾಪ್ ಲಕ್ರ, ಸಂಜಯ್, ಯಶ್ದೀಪ್ ಸಿವಾಚ್, ಮಂದೀಪ್ ಮೊರ್, ಪರಂಪ್ರೀತ್ ಸಿಂಗ್, ದಿನಚಂದ್ರ ಸಿಂಗ್, ನಬಿನ್ ಕುಜೂರ್, ಶಾರದಾ ನಂದ್ ತಿವಾರಿ, ನೀರಜ್ ಕುಮಾರ್ ವಾರಿಬಾಮ್ ಮಿಡ್-ಫೀಲ್ಡರ್ಗಳು: ಸುಖ್ಮಾನ್ ಸಿಂಗ್, ಗ್ರೆಗೊರಿ ಕ್ಸೆಸ್, ಅಂಕಿತ್ ಪಾಲ್, ಆಕಾಶ್ದೀಪ್ ಸಿಂಗ್ ಜೂನಿಯರ್, ವಿಷ್ಣು ಕಾಂತ್ ಸಿಂಗ್, ಗೋಪಿ ಕುಮಾರ್ ಸೋಂಕರ್, ವಿಶಾಲ್ ಆಂಟಿಲ್, ಸೂರ್ಯ ಎನ್.ಎಂ, ಮನಿಂದರ್ ಸಿಂಗ್, ರವಿಚಂದ್ರ ಸಿಂಗ್ ಮುಂಚೂಣಿ ಆಟಗಾರರು: ಸುದೀಪ್ ಚಿರ್ಮಕೊ, ರಾಹುಲ್ ಕುಮಾರ್ ರಾಜ್ಭರ್, ಉತ್ತಮ್ ಸಿಂಗ್, ಎಸ್. ಕಾರ್ತ್, ದಿಲ್ಪ್ರೀತ್ ಸಿಂಗ್, ಅರಜೀತ್ ಸಿಂಗ್ ಹುಂಡಾಲ್, ಅಮಂದೀಪ್ ಸಿಂಗ್, ಪ್ರಬ್ಜೋತ್ ಸಿಂಗ್, ಶಿವಮ್ ಆನಂದ್, ಅಷರ್್ದೀಪ್ ಸಿಂಗ್.