ಭಾರತ- ಚೀನಾ ಉನ್ನತ ಸೇನಾಧಿಕಾರಿಗಳ ಮಾತುಕತೆ ?

ನವದೆಹಲಿ,  ಜೂನ್ 2,ಲಡಾಕ್ ಗಡಿ ವಿವಾದ ಮತ್ತು ಅಲ್ಲಿ ಸದ್ಯ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಕುರಿತು ಭಾರತ-  ಚೀನಾ ಸೇನಾ ಕಮಾಂಡರ್ ಗಳಉನ್ನತ   ಮಟ್ಟದ ಮಾತುಕತೆ ಇಂದು ನಡೆಯಲಿದೆ ಎಂದು ಹೇಳಲಾಗಿದೆ.  ಎರಡೂ ದೇಶಗಳ ಮೇಜರ್ ಜನರಲ್  ಮಟ್ಟದ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಮೂರನೇ ಹೈಕಮಾಂಡರ್ ಮಟ್ಟದ ಮಾತುಕತೆ ಇದಾಗಿದೆ ಎನ್ನಲಾಗಿದೆ. ಲಡಾಕ್ ನಲ್ಲಿ ಮೇ 5-6ರ ಮಧ್ಯರಾತ್ರಿ ಚೀನಾ ತನ್ನ ಸೈನ್ಯ ನಿಯೋಜಿಸಿತ್ತು, ಬಳಿಕ ಎರಡು ದೇಶಗಳ ಸೈನಿಕರ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದ್ದರ ನಡುವೆ  ಮಾತುಕತೆ ನಡೆಯುತ್ತಿರುವುದು  ಬಹಳ  ಮಹತ್ವವಾಗಿದೆ.