ನವದೆಹಲಿ 23: ರಾಷ್ಟ್ರ ರಾಜಧಾನಿಯಲ್ಲಿಂದು ಚೀನಾ ರಕ್ಷಣಾ ಸಚಿವ ಜನರಲ್ ವೈ ಫೆಂಗ್ ಹಾಗೂ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ನಿಯೋಗದೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಕುರಿತ ಸಭೆ ನಡೆಯಿತು.
ಉಭಯ ದೇಶಗಳ ರಕ್ಷಣಾ ಸಚಿವರ ನೇತೃತ್ವದಲ್ಲಿನ ಸಭೆಯಲ್ಲಿ ರಕ್ಷಣಾ ಸಹಕಾರ ಬಲವರ್ಧನೆ ಹಾಗೂ ಕಾರ್ಯತಂತ್ರ ಕುರಿತಂತೆ ಒಪ್ಪಂದವೇರ್ಪಟ್ಟಿತ್ತು.ರಕ್ಷಣಾ ಸಹಕಾರ ಬಲವರ್ಧನೆಗೆ ಭಾರತ ಹಾಗೂ ಚೀನಾ ಸಮ್ಮತಿ ವ್ಯಕ್ತಪಡಿಸಿವೆ.
ಭಾರತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟರ್ ನಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ದಕ್ಷಿಣ ಬ್ಲಾಂಕ್ ನಲ್ಲಿ ಜನರಲ್ ವೈ ಫೆಂಗ್ ಅವರಿಗೆ ಬೀಳ್ಗೊಡಲಾಯಿತು.
ಆಗಸ್ಟ್ 21 ರಂದು ಜನರಲ್ ವೈ ಫೆಂಗ್ ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ರಕ್ಷಣಾ ಪ್ರದೇಶ ವ್ಯಾಪ್ತಿಯಲ್ಲಿನ ಸೈನಿಕರ ವಿನಿಮಯ ಸೇರಿದಂತೆ ಭಾರತ ಮತ್ತು ಚೀನಾ ನಡುವಿನ ಉನ್ನತ ಮಟ್ಟದ ಸಂಪರ್ಕತೆ ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಚೀನಾ ರಕ್ಷಣಾ ಸಚಿವ ಜನರಲ್ ವೈ ಫೆಂಗ್ ಆಗಸ್ಟ್ 21 ರಂದು ನಾಲ್ಕು ದಿನಗಳ ಭಾರತ ಭೇಟಿ ಕೈಗೊಂಡಿದ್ದರು.