ಭಾರತ- ಬಾಂಗ್ಲಾ ಮಾತುಕತೆ ಫಲಪ್ರದ: ಜೈಶಂಕರ್

ಢಾಕಾ, ಆಗಸ್ಟ್ 20                 ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಮಂಗಳವಾರ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಗೌರವ ನಮನ ಸಲ್ಲಿಸಿ  ಬಾಂಗ್ಲಾದೇಶದೊಂದಿಗೆ ಪಾಲುದಾರಿಕೆ ಹೊಂದಲು ಭಾರತ ಹೆಮ್ಮೆಪಡಲಿದೆ ಎಂದು  ಹೇಳಿದರು. 

 ಬಾಂಗ್ಲಾದೇಶದೊಂದಿಗೆ ಪಾಲುದಾರರಾಗಲು ಮತ್ತು ಅವರ ದೂರದೃಷ್ಟಿ ಕಲ್ಪನೆಗಳನ್ನು ಈಡೇರಿಸಲು ಭಾರತ  ಬದ್ದವಾಗಿದೆ  ಎಂದು ಡಾ.ಜೈಶಂಕರ್ ಬಂಗಬಂಧು ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ನಂತರ ಪುಸ್ತಕದಲ್ಲಿ ಬರೆದಿದ್ದಾರೆ. 

ರೆಹಮಾನ್ ಅವರ  ಮೂವರು ಗಂಡು ಮಕ್ಕಳು ಸೇರಿದಂತೆ ಅವರ  18 ಕುಟುಂಬದ  ಸದಸ್ಯರನ್ನು 1975 ರಲ್ಲಿ 'ಬಲಪಂಥೀಯ' ಮಿಲಿಟರಿ ಅಧಿಕಾರಿಗಳು ನಿರ್ದಯವಾಗಿ  ಹತ್ಯೆಮಾಡಿದ್ದರು.  

ಬಾಂಗ್ಲಾದೇಶದ ಸಚಿವ  ಡಾ.ಕೆ.ಅಬ್ದುಲ್ ಮೊಮೆನ್ ಅವರೊಂದಿಗಿನ ಮಾತುಕತೆ ಫಲಪ್ರದವಾಗಿದೆ  ಎಂದು  ಅವರು  ದ್ವಿಪಕ್ಷೀಯ ಸಭೆಯ ಬಳಿಕ  ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಜೈಶಂಕರ್ ಅವರು  ಹೇಳಿದರು.     

ಪ್ರಧಾನಿ ಶೇಖ್ ಹಸೀನಾ ಅವರಿಗೆ  ಅಕ್ಟೋಬರ್ನಲ್ಲಿ ನವದೆಹಲಿಯಲ್ಲಿ ಆತಿಥ್ಯ ನೀಡಲು  ಭಾರತ ಎದುರು ನೋಡುತ್ತಿದೆ ಎಂದೂ ಸಚಿವರು  ಹೇಳಿದರು.