ಕೋಲ್ಕತಾ, ಜ 23 : ಚುನಾವಣೆಗೆ ಒಂದು ವಾರ ಬಾಕಿ ಇರುವಾಗಲೇ ಭಾರತೀಯ ಆರ್ಚರಿ ಒಕ್ಕೂಟಕ್ಕೆೆ ವಿಶ್ವ ಆರ್ಚರಿ ಒಕ್ಕೂಟ ಸಿಹಿ ಸುದ್ದಿ ನೀಡಿದೆ. ರಾಷ್ಟ್ರೀಯ ಆರ್ಚರಿ ಒಕ್ಕೂಟ ಮೇಲೆ ವಿಧಿಸಿದ್ದ ಅಮಾನತು ಶಿಕ್ಷೆೆಯನ್ನು ವಿಶ್ವ ಆರ್ಚರಿ ಫೆಡರೇಷನ್ ಷರತ್ತುಬದ್ದವಾಗಿ ತೆರವುಗೊಳಿಸಿದೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆೆ ತಯಾರಿ ನಡೆಸಲು ಭಾರತೀಯ ಆರ್ಚರಿಪಟುಗಳಿಗೆ ವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ.
ನಿಷೇಧ ತೆರವುಗೊಳಿಸುವ ವೇಳೆ ವಿಶ್ವ ಆರ್ಚರಿ ಒಕ್ಕೂಟ ರಾಷ್ಟ್ರೀಯ ಒಕ್ಕೂಟಕ್ಕೆೆ ತಮ್ಮ ಸದಸ್ಯತ್ವದ ಬಗೆಗಿನ ನಿಯಮವನ್ನು ಬದಲಾಯಿಸಬೇಕು ಹಾಗೂ ಆಡಳಿತದ ಸಮಸ್ಯೆೆಗಳನ್ನು ಪರಿಹರಿಸಿ ಆರ್ಚರಿ ಕ್ರೀಡೆಯನ್ನು ಇನ್ನಷ್ಟು ಬೆಳವಣಿಗೆ ಸಾಧಿಸಲು ನೂತನ ಯೋಜನೆಗಳನ್ನು ರೂಪಿಸಬೇಕು ಎಂದು ಷರತ್ತು ವಿಧಿಸಿದೆ.
‘‘ಇದೇ 18 ರಂದು ದೆಹಲಿಯಲ್ಲಿ ನಡೆಯುವ ಚುನಾವಣೆ ನಿಮಿತ್ತ ಭಾರತ ಆರ್ಚರಿ ಒಕ್ಕೂಟ ಮೇಲೆ ಹೇರಿದ್ದ ನಿಷೇಧ ಶಿಕ್ಷೆೆಯನ್ನು ಷರತ್ತುಬದ್ಧವಾಗಿ ತೆರವುಗೊಳಿಸಲಾಗುತ್ತಿದೆ. ಕಾರ್ಯನಿರ್ವಾಹಕ ಮಂಡಳಿಯ ಅಂಚೆ ಮತದಾನದ ಪ್ರಕ್ರಿಯೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,’’ ಎಂದು ವಿಶ್ವ ಆರ್ಚರಿ ಒಕ್ಕೂಟ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
‘‘2020ರ ಜನವರಿ 23 ರಿಂದ ಭಾರತದ ಆರ್ಚರಿ ಪಟುಗಳು ವಿಶ್ವ ಆರ್ಚರಿ ಒಕ್ಕೂಟ ಎಲ್ಲ ಸ್ಫರ್ಧೆಗಳಲ್ಲಿ ಭಾಗವಹಿಸಬಹುದು. ಆಡಳಿತದಲ್ಲಿ ಉದ್ಭವವಾಗಿರುವ ಸಮಸ್ಯೆೆಗಳನ್ನು ಪರಿಹರಿಸಿ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸುವಂತೆ ಹಾಗೂ ಅಥ್ಲಿಟ್ ಸದಸ್ಯತ್ವದ ಬಗ್ಗೆೆ ಇರುವ ಅನುಮಾನಗಳನ್ನು ಅರ್ಥೈಸಿ ಅದಕ್ಕೆೆ ಪೂರಕವಾಗಿರುವ ನೂತನ ನಿಯಮಗಳನ್ನು ರೂಪಿಸುವಂತೆ ಭಾರತ ಆರ್ಚರಿ ಒಕ್ಕೂಟಕ್ಕೆೆ ನಿರ್ದೇಶಿಸಲಾಗಿದೆ,’’ ಎಂದು ತಿಳಿಸಿದೆ.
ಕಳೆದ ವರ್ಷ ಆಗಸ್‌ಟ್ 5 ರಂದು ಭಾರತ ಆರ್ಚರಿ ಒಕ್ಕೂಟ ಅಮಾನತು ಶಿಕ್ಷಗೆ ಒಳಗಾಗಿತ್ತು. ಆದ್ದರಿಂದ, ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಸ್ಫರ್ಧೆಯಲ್ಲಿ ಮಾತ್ರ ಭಾರತ ಧ್ವಜವಿಲ್ಲದೇ ಭಾಗವಹಿಸಬೇಕು ಎಂಬ ಷರತ್ತು ಇತ್ತು. ಇದೀಗ ಈ ಶಿಕ್ಷೆೆಯಿಂದ ಭಾರತ ಮುಕ್ತವಾಗಿದೆ.