ಭಾರತ – ಚೀನಾ ವಿಶೇಷ ಪ್ರತಿನಿಧಿಗಳ ಸಭೆ

ನವದೆಹಲಿ, ಡಿ 21 ಭಾರತ – ಚೀನಾ ಗಡಿ ಪ್ರಶ್ನೋತ್ತರ ಕುರಿತ ವಿಶೇಷ ಪ್ರತಿನಿಧಿಗಳು ನವದೆಹಲಿಯಲ್ಲಿ ಶನಿವಾರ ಸಭೆ ಸೇರಲಿದ್ದಾರೆ.  ಉಭಯ ದೇಶಗಳ ನಡುವಿನ 22 ನೇ ಸಭೆ ಇದಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ನಡುವಣ ಚೆನ್ನೈ ನಲ್ಲಿ ನಡೆದ ಎರಡನೇ ಅನೌಪಚಾರಿಕ ಸಭೆಯ ನಂತರ ನಡೆಯುತ್ತಿರುವ ವಿಶೇಷ ಪ್ರತಿನಿಧಿಗಳ ಮೊದಲ ಸಭೆ ಇದಾಗಿದೆ.