ಭಾರತದ ಸಂವಿಧಾನ ವಿಶ್ವ ಶ್ರೇಷ್ಠ: ಮುಖಂಡ ಜೈಭೀಮ

ಅಂಬೇಡ್ಕರ್ ವೃತ್ತದಲ್ಲಿರುವ ಲುಂಬಿನಿ ಉದ್ಯಾನವನದಲ್ಲಿ ಸಂವಿಧಾನ ದಿನಾಚರಣೆ

ತಾಳಿಕೋಟಿ 26: ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಕೊಟ್ಟುಹೋದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ.ಇದು ವಿಶ್ವ ಶ್ರೇಷ್ಠ ಸಂವಿಧಾನ ಸೂರ್ಯ- ಚಂದ್ರ ಇರುವವರೆಗೂ ಇದರ ಬದಲಾವಣೆ ಅಸಾಧ್ಯ ಎಂದು ದಲಿತ ಮುಖಂಡ ಜೈ ಭೀಮ್ ಮುತ್ತಗಿ ಹೇಳಿದರು.  

ಮಂಗಳವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಲುಂಬಿನಿ ಉದ್ಯಾನವನದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅಂಬೇಡ್ಕರ್ ಅವರು ಈ ಗ್ರಂಥದ ರಚನೆಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದರು,ರಚನೆಯ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡರೂ ಅವರು ಯೋಚಿಸಲಿಲ್ಲ, ರಚನಾ ಸಮಿತಿಯ ಎಲ್ಲ ಸದಸ್ಯರು ಕೈಬಿಟ್ಟರೂ ಅವರು ಏಕಾಂಗಿಯಾಗಿ ಈ ಶ್ರೇಷ್ಠ ಕಾರ್ಯವನ್ನು ಮಾಡಿ ಮುಗಿಸಿದರು ಇದು ನಮ್ಮ ದೇಶದ ಆತ್ಮವಾಗಿದೆ. ಇದರ ಎಲ್ಲ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಅಗತ್ಯವಿದೆ ಆಗ ಮಾತ್ರ ಒಂದು ಸದೃಢ ದೇಶವನ್ನು ಕಟ್ಟಲು ಸಾಧ್ಯ ಎಂದರು. ಕಾರ್ಯಕ್ರಮಕ್ಕೆ ಮುನ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಮೂರ್ತಿಗೆ ತಾಲೂಕಾಡಳಿತದ ವತಿಯಿಂದ ಪುಷ್ಪ ನಮನ ಅರ​‍್ಿಸಿ ಗೌರವ ಸಲ್ಲಿಸಲಾಯಿತು.ಸಿರಸ್ತೆದಾರ ಜೆ.ಆರ್‌.ಜೈನಾಪೂರ ಸಂವಿಧಾನ ಪೀಠಿಕೆ ಭೋಧಿಸಿದರು. ನಿಲಯ ಪಾಲಕ ಎನ್‌.ವಿ.ಕೋರಿ ಸ್ವಾಗತಿಸಿ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ,ತಾಪಂ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಬಿ.ಕಟ್ಟಿಮನಿ,ಮುಖಂಡರಾದ ಮುತ್ತಪ್ಪ ಚಮಲಾಪೂರ, ಮಾಸುಮಸಾಬ ಕೆಂಭಾವಿ, ಮಂಜುನಾಥ ಶೆಟ್ಟಿ,ಬಸವರಾಜ ಕಟ್ಟಿಮನಿ,ಇಬ್ರಾಹಿಂ ಮನ್ಸೂರ,ಎಂ.ಕೆ.ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಹುಸೇನ ಜಮಾದಾರ, ಶಫೀಕ ಇನಾಮದಾರ, ಅಬೂಬಕರ ಲಾಹೋರಿ, ರಿಯಾಜ್ ಡೋಣಿ, ಗೋಪಾಲ ಕಟ್ಟಿಮನಿ, ನದೀಮ್ ಕಡು, ಆಸೀಫ್ ಕೆಂಭಾವಿ, ಕೃಷಿ ಅಧಿಕಾರಿ ಮಹೇಶ ಜೋಷಿ, ಸಿಆರ​‍್ಿ, ರಾಜು ವಿಜಾಪೂರ, ಬಾಲಾಜಿ ವಿಜಾಪುರ, ಅಗ್ನಿಶಾಮಕ ಅಧಿಕಾರಿ ಹುಸೇನಸಾಬ ಬುರಾನಗೋಳ, ಗ್ರಂಥಪಾಲಕ ಕೃಷ್ಣಾ ಕುಲಕರ್ಣಿ, ಎಂ.ಬಿ.ಜಾಯವಾಡಗಿ, ಮುನ್ನಾ ಅತ್ತಾರ,ಸಮಾಜ ಕಲ್ಯಾಣ ಇಲಾಖೆಯ ಎಸ್‌.ಎಂ.ಕಲಬುರ್ಗಿ, ಎಸ್‌.ಎನ್‌.ಮಲ್ಲಾಡೆ, ಅನ್ನಪೂರ್ಣ ಪಾಟೀಲ, ಎಂ.ಸಿ.ಗುಡಗುಂಟಿ, ವಿಶ್ವನಾಥ ಮಳಗಿ, ಪುರಸಭೆ, ಕಂದಾಯ, ಹೆಸ್ಕಾಂ, ಸಮಾಜ ಕಲ್ಯಾಣ ಹಾಗೂ ಪೊಲೀಸ ಇಲಾಖೆ ಸಿಬ್ಬಂದಿಗಳು ಇದ್ದರು.