ಇಂಡಿ 29 : ಸುಕ್ಷೇತ್ರ ಉಜ್ಜೇನ್ನಿ ಮರುಳಸಿದ್ದೇಶ್ವರ ದೇವರ ದರ್ಶನ ಪಡೆಯಲು ಭಕ್ತರ ಬೇಡಿಕೆಯಂತೆ ಹಾಗೂ ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಆದೇಶದಂತೆ ಇದೆ ದಿನಾಂಕ 29-12-2024 ರಂದು ಇಂಡಿ ಉಜ್ಜೇನ್ನಿ ಬಸ್ಸು ಮತ್ತೆ ಪುನರಾರಂಭ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ರಸ್ತೆ ಇಲಾಖೆ ಇಂಡಿ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಮೊದಲು ಇಂಡಿ ಉಜ್ಜೇನ್ನಿ ಬಸ್ಸು ಸಂಚಾರ ಮಾಡುತ್ತಿತ್ತು ಆದರೆ ಕಾರಣಾಂತರದಿಂದ ಬಂದ ಮಾಡಲಾಯಿತು.ಇದೆ ದಿನಾಂಕ 25-12-2024 ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಕಾರ್ತಿಕ ಮಾಸದ ಮರುಳಸಿದ್ದೇಶ್ವರ ಜಾತ್ರೆ ನಿಮಿತ್ತವಾಗಿ ಸರ್ವಧರ್ಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ ಉಜ್ಜೇನ್ನಿ ಜಗದ್ಗುರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಗಮನಕ್ಕೆ ತಂದ್ದಿದರು ಇದಕ್ಕೆ ಸ್ಪಂದಿಸಿದ ಶಾಸಕರು ಮತ್ತೆ ಇಂಡಿ ಉಜ್ಜೇನ್ನಿ ಬಸ್ಸು ಪ್ರಾರಂಭಿಸಲು ಆದೇಶಿಸಿದ್ದರು. ಅದರಂತೆ ಇಂದು ಬಸ್ಸು ಪ್ರಾರಂಭಿಸಲಾಗಿದೆ. ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮಕ್ಕೆ ಇಂಡಿ ಉಜ್ಜೇನ್ನಿ ಬಸ್ಸು ಜೋಡಗುಡಿ ಬರುತ್ತಿದ್ದಂತೆ ನೂರಾರು ಜನ ಸೇರಿ ಮರುಳಸಿದ್ದೇಶ್ವರ ದೇವಾಸ್ಥಾನದ ಹತ್ತಿರ ಬಸ್ಸು ತಡೆದು ಬಸ್ಸಿಗೆ ವೀಶಷ ಪೂಜೆ ಸಲ್ಲಿಸಿ, ಜೋಡಗುಡಿ ಸಾರಿಗೆ ನಿಯಂತ್ರಣ ಅಧಿಕಾರಿ ಸುರೇಶ ಚನಗೊಂಡ,ಬಸ್ಸು ಚಾಲಕ ಮಲ್ಲಿಕಾರ್ಜುನ ಲೋಣಿ ಹಾಗೂ ನಿರ್ವಾಹಕ ಪಂಡಿತ ರಾಠೋಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಬಸ್ಸು ಪ್ರತಿ ನಿತ್ಯ ಇಂಡಿ ಯಿಂದ ಬೆಳಿಗ್ಗೆ 07-30 ಹೋರಟು ತಡವಲಗಾ ವಿಜಯಪೂರ ಆಲಮಟ್ಟಿ ಇಲಕಲ್ ಕುಷ್ಟಗಿ ಹೊಸಪೇಟೆ ಮಾರ್ಗವಾಗಿ ಉಜ್ಜೇನ್ನಿ ತಲುಪುವುದು, ಮಾರನೇದಿನ ಬೆಳಿಗ್ಗೆ 07-30 ಗಂಟೆಗೆ ಉಜ್ಜೇನ್ನಿ ಯಿಂದ ಹೊರಟು ಸಂಜೆ ನಾಲ್ಕು ಗಂಟೆಗೆ ಇಂಡಿ ತಲುಪುವುದು.ಈ ಸಂದರ್ಭದಲ್ಲಿ ಬಾಬುಸಾಹುಕಾರ ಮೇತ್ರಿ, ತಮ್ಮಣ್ಣ ಪೂಜಾರಿ, ಅಶೋಕ ಮಿರ್ಜಿ,ಸಾಹೇಬಗೌಡ ಇಂಡಿ, ಲಕ್ಷ್ಮಣ್ ಖಸ್ಕಿ, ರಾಜು ಮಿರ್ಜಿ, ಚನ್ನಪ್ಪ ಮಿರಗಿ, ಶಂಕ್ರ್ಪ ರೂಗಿ,ಸುರೇಶ ಗೊಳ್ಳಗಿ, ಬಸವರಾಜ ಚವಡಿಹಾಳ, ಪ್ರಕಾಶ್ ಮಿರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.