ಇಂಡಿ 12: ನಗರದ ಸಿ ವಿ ರಾಮನ್ ಕಾಲೇಜನ ವಿದ್ಯಾರ್ಥಿಗಳು ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಿ ಶುಭ ಹಾರೈಸಲಾಯಿತು.
ಈ ಬಾರಿ ಮಂಜುನಾಥ್ ಬಾಬಳಗಾವ್ ( ಲಚ್ಯಾಣ ) ಶೇಕಡಾ 91ಅ ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಹಾಗೂ ತೇಜಸ್ವಿನಿ ಸುರೇಶ ಗೋಳ್ಳಗಿ ( ತಡವಲಗಾ ) 90ಅ ಅಂಕ ಪಡೆದು ದ್ವಿತೀಯ ಸ್ಥಾನ, ವಿಕಾಸ್ ಭಜಂತ್ರಿ 87ಅ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಶಿವಾನಂದ್ ಕಾಮಗೊಂಡ, ಸಂಸ್ಥೆಯ ಉಪಾಧ್ಯಕ್ಷರಾದ ಶೈಲೇಶ್ ಬೀಳಗಿ ಕಾರ್ಯದರ್ಶಿಗಳಾದ ವರ್ಧಮಾನ್ ಮಹಾವೀರ್, ಸನ್ಮತಿ ಹಳ್ಳಿ, ಪ್ರಸನ್ನ ಕುಮಾರ್ ನಾಡಗೌಡ, ಡಾಕ್ಟರ್ ಸೋಮಶೇಖರ್ ಹುದ್ದಾರ್, ಶೋಭಾ ನಾರಾಯಣಕರ, ಶೈಲಜಾ ಜಾಗಿರಾದಾರ, ವೆಂಕಟೇಶ್ ಬಾಬು ಖೇಡಗಿ ಶಿಕ್ಷಕ ವರ್ಗ ವಿದ್ಯಾರ್ಥಿಗಳ ಸಾಧನೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸೋಮಶೇಖರ್ ಹುದ್ದಾರ ಅವರು ಪರೀಕ್ಷೆ ಕಡಿಮೆ ಅಂಕ ಗಳಿಸಿರುವ ಮತ್ತು ಫೇಲಾದ ವಿದ್ಯಾರ್ಥಿಗಳಿಗೆ ಏನೇ ಬರಲಿ ಇದು ಕೊನೆ ಅಲ್ಲ ಹಾಗಾಗಿ ಯಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಬಾರದು ಎಂದು ಮಕ್ಕಳಿಗೆ ಧೈರ್ಯ ಹೇಳಿದರು.