ಲೋಕದರ್ಶನ ವರದಿ
ಇಂಡಿ: ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಿಂಟಿಂಗ್ ಮಶೀನ್ ಸಮೇತ ಇಂಡಿ ನಗರ ಹಾಗೂ ಗ್ರಾಮೀಣ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖೋಟಾ ನೋಟು ಚಲಾವಣೆ ಮಾಡುವ ಉದೇಶದಿಂದ ತಾಲೂಕಿನ ಹೀರೆರೋಗಿಯಿಂದ ಇಂಡಿ ಕಡೆಗೆ ಬರುತಿದ್ದ ಸ್ಕಾಪರ್ಿಯೋ ವಾಹನ ಎಮ್.ಹೆಚ್. 12 ಸಿವೈ 0475 ದಲ್ಲಿ ಬರುತ್ತಿದ ವ್ಯಕ್ತಿ ಓರ್ವವನನ್ನು ನ್ಯೂ ಕಾವೇರಿ ದಾಬಾದ ಹತ್ತಿರ ಇಂಡಿ ಪೋಲಿಸರು ಬಂಧಿಸಿದ್ದಾರೆ.
ಆರೋಪಿಯನ್ನು ಕಲ್ಲಪ್ಪ ಸುಭಾಷ ಹರಿಜನ (27) ಸಾ.ಹೀರೆರೂಗಿ ತಾಲೂಕು ಇಂಡಿ ಎಂದು ಗುರುತಿಸಲಾಗಿದೆ. ಆರೋಪಿತ ಇಂಡಿ ಪಟ್ಟಣದ ನೂರಾನಿ ನಗರದಲ್ಲಿರುವ ಮನೆಯಲ್ಲಿ ಕಲರ್ ಪ್ರಿಂಟರನಲ್ಲಿ 100 ರೂ ಮುಖ ಬೆಲೆಯ 119ಖೋಟಾ ನೋಟಗಳನ್ನು ಹಾಗೂ 200 ಮುಖ ಬೆಲೆಯ 21 ಖೋಟಾ ನೋಟುಗಳನ್ನು ಇದೆತರಹ ಪ್ರೀಂಟಮಾಡಿದ 100 ರೂ ಮುಖ ಬೆಲೆಯ 4 ಖೋಟಾ ನೋಟುಗಳನ್ನು ತನ್ನ ಬಳಿ ಇಟ್ಟುಕೊಂಡು ಬರುವಾಗ ಪೋಲಿಸರು ಬೀಸಿದ ಬಲೆಗೆ ಸಿಕ್ಕಿಬಿದಿದ್ದಾನೆ.
ಆತನಿಂದ ಖೋಟಾ ನೋಟು ತಯಾರಿಸುವ ಪ್ರಿಂಟರ ಹಾಗೂ ಇತರ ಉಪಕರಣಗಳ ಸಮೇತ ಆರೋಪಿಯನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.