ಲೋಕದರ್ಶನ ವರದಿ
ಇಂಡಿ 08: ಅಡುಗೆ ಮಾಡುವ ವೇಳೆ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗಲಿ ಓರ್ವ ಮಹಿಳೆ ಹಾಗೂ ಒಂದು ಕುರಿ ಸುಟ್ಟು ಕರಕಲಾದ ಘಟನೆ ಇಂಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಹಿರೇಬೇವನೂರ ಗ್ರಾಮದ ತೋಟದ ವಸತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತ ಮಹಿಳೆಯನ್ನು ಅಶ್ವಿನಿ ಮಾದೇವ ಜೀರಗಿ (26) ಎಂದು ಗುರುತಿಸಲಾಗಿದೆ. ಗುಡಿಸಲಿಗೆ ಬೆಂಕಿ ಹತ್ತಿದ್ದನ್ನು ಕಂಡಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ.
ಮಹಿಳೆ ಸಜೀವ ದಹನಳಾಗಿದ್ದಾಳೆ, ಗುಡಿಸಲಿನಲ್ಲಿದ್ದ ಒಂದು ಕುರಿ, ಗೋದಿ, ಜೋಳ, ಸೇರಿದಂತೆ ಇನ್ನಿತರ ದಿನ ಬಳಕೆಯ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಕುರಿತು ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.