ಇಂಡಿ: ಪರಶೇನವರ ಸೇವೆ ಶ್ಲ್ಯಾಘನೀಯ: ಬಡಿಗೇರ

ಲೋಕದರ್ಶನ ವರದಿ

ಇಂಡಿ 02:  ಸರಕಾರಿ ಸೇವೆ ದೇವರ ಸೇವೆ ಎಂದು ತಿಳಿದು ಸುಮಾರು 36 ವರ್ಷಗಳ ಸೇವೆ ಅತ್ಯಂತ ಪ್ರಮಾಣಿವಾಗಿ ಮಾಡಿದ ಪರಶೇನವರ ಸೇವೆ ಶ್ಲ್ಯಾಗನೀಯ ಎಂದು ಬಿ.ಬಿ ಬಡಿಗೇರ ಹೇಳಿದರು.

      ತಾಲೂಕಿನ ನಾದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು  ಸರಕಾರಿ ಸೇವೆಯಲ್ಲಿ ಸೇವಾ ಅವಧಿಯ ನಂತರ ಪ್ರತಿಯೋಬ್ಬರು ನಿವೃತ್ತಿ ಎಂಬುದು ಸವರ್ೆ ಸಾಮಾನ್ಯವಾಗಿದ್ದು ಆದರೆ ಕೆಲಸ ಮಾಡುವ ದಿನಗಳಲ್ಲಿ ನಾವು ಸಾರ್ವಜನಿಕ ಬದುಕಿನಲ್ಲಿ ನಾವು ನಡೇದ ಬಂದ ದಾರಿ ಎಂತಹದ್ದು ಮತ್ತು ನಮ ಬಗ್ಗೆ ಇತರರು ಗೌರವ ಹೊಂದಿದ್ದಾರೆಯೇ ಎಂಬುದು ಮುಖ್ಯ.  ಮಕ್ಕಳು ದೇವರ ಸಮಾನ ಅವರ ಪ್ರೀತಿ ವಿಶ್ವಾಸ ಭಗವಂತನ ಸೇವೆ ಮಾಡಿದಷ್ಠೆ ಪವಿತ್ರವಾದುದ್ದು.  ಸುಮಾರು 36 ವರ್ಷಗಳ ಸುದೀರ್ಘ ಅವಧಿಯಲ್ಲಿ  ಪರಶೇನವರ ಅಂಗನವಾಡಿ ಕಾರ್ಯಕರ್ತೆಯಾಗಿ ಒಳ್ಳೆಯ ಸೇವೆ ಮಾಡಿದ್ದಾರೆ. ನಿವೃತ್ತಿಯ ನಂತರ ಆಯಸ್ಸು ಮುಗಿಯಿತು ಎಂದು ಕೈ ಕಟ್ಟಿ ಕುಳಿತುಕೊಳ್ಳದೆ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ತೋಡಗಬೇಕು . ನಿವೃತ್ತಿ ಎಂಬುದು ವಯಸ್ಸಿಗೆ ಮುಗಿದರಬೇಕು ವಿನಹ; ಮಾನಸಿಕವಾಗಿ ಅಲ್ಲ ಸದಾ ನಿರಂತರ  ಕಾಯಕದಲ್ಲಿ ತೋಡಗಬೇಕು ಎಂದರು. 

ಬಿ.ಬಿ ಬಡೀಗೇರ, ಧಾನಮ್ಮಾ ಗುಗ್ಗರಿ, ಎಲ್.ಎಂ ಭಾಸಗಿ , ಟಿ,ಎಲ್ ಜಾಧವ, ಶೋಭಾ ಧರೇನವರ, ಜೆ.ಎನ್ ಚವ್ಹಾಣ ಸೇರಿದಂತೆ ಅನೇಕ ಸಿಂಬ್ಬಂದಿಗಳಿದ್ದರು.