ಇಂಡಿ: ರಂಗು ರಂಗಿನಾ ರಂಗಪಂಚಮಿ ಆಚರಣೆ

ರಂಗು ರಂಗಿನಾ ರಂಗಪಂಚಮಿ ಆಚರಣೆ


ಇಂಡಿ: ರಂಗ ಪಂಚಮಿ ನಿಮಿತ್ಯ ಪಟ್ಟಣದಲ್ಲಿ ಯುವಕರು, ಮಹಿಳೆಯರು, ಮಕ್ಕಳು ಗಂಡು ಹೆಣ್ಣು ಎಂಬ ಭೇದ ಭಾವ ಇಲ್ಲದೆ ಪರಸ್ಪರ ಬಣ್ಣದಲ್ಲಿ ಮಿಂದೆದ್ದು ಅದ್ದೂರಿ ರಂಗಪಂಚಮಿ ಆಚರಿಸಿದರು.

ಮಧ್ಯಾಹ್ನದ ಭೀಕರ ಸೂರ್ಯನ ಪ್ರಖರತೆ ನೆತ್ತಿಯನ್ನು ಸುಡುತ್ತಿದ್ದರೂ ಯಾವದನ್ನು ಲೆಕ್ಕಿಸದೆ ಸನಾತನ ಪೂರ್ವಜರಿಂದ ಬಂದ ಸಂಸ್ಕೃತಿ ಬಣ್ಣದ ಹಬ್ಬವನ್ನು ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಸೇರಿ ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ಬಣ್ಣದಾಟವಾಡಿ ಸಂಭ್ರಮಿಸಿದರು.

ಸಿಂದಗಿ ರಸ್ತೆಯಿಂದ  ಪ್ರಾರಂಭವಾದ ಮೆರವಣಿಗೆ ಮಿನಿ ವಿಧಾನಸೌಧ ಮುಂಭಾಗದಿಂದ ಬಸವೇಶ್ವರ ವೃತ್ತ, ವಿಜಯಪೂರ ರಸ್ತೆಯ ಪ್ರವಾಸಿ ಮಂದಿರ ಹಾಗೂ ಕೆಇಬಿ ದಿಂದ ಮರಳಿ ಬಸವೇಶ್ವರ ವೃತ್ತದಲ್ಲಿ ಬಂದು 1 ತಾಸುಗಳವರೆಗೆ  ಪರಸ್ಪರ ಬಣ್ಣ ಎರಚುತ್ತಾ ನಂತರ ಅಂಬೇಡ್ಕರ ವೃತ್ತ, ಶಿವಾಜಿ ವೃತ್ತ, ಮುಖಾಂತರ ರಸ್ತೆಯುದ್ದಕ್ಕೂ ಯುವಕರು ಬೊಬ್ಬೆ ಹಾಕುತ್ತಾ ರಂಗ ರಂಗಿನ ರಂಗು ಪಂಚಮಿಯಲ್ಲಿ ಮಿಂದೆದ್ದರು.

ಅನೀಲಗೌಡ ಬಿರಾದಾರ, ಅಪ್ಪು ಪವಾರ, ಪ್ರವೀಣ ಅಚ್ಚೇಗಾಂವ, ಭೀಮು ಪ್ರಚಂಡಿ, ಬಾಳು ಮುಳಜಿ, ಬಸವರಾಜ ಪಾಟೀಲ, ಶಾಂತು ಹದಗಲ್, ಉಮೆಶ ಲಚ್ಯಾಣ, ಉಮೇಶ ದೇಗಿನಾಳ, ದೇವೆಂದ್ರ ಕುಂಬಾರ, ಮಹೇಶ ಕುಂಬಾರ, ಜಗು ಕುಂಬಾರ, ಪ್ರವೀಣ ಮಠ, ಗಿರೀಶ ಪಾಟೀಲ, ಮಚ್ಚೇಂದ್ರ ಕದಂ,  ಸಂತೋಷ ಪಾಟೀಲ, ಬುದ್ದುಗೌಡ ಪಾಟೀಲ, ಸೋಮು ನಿಂಬರಗಿಮಠ, ಶಾಂತು ಶಿರಕನಹಳ್ಳಿ, ಶಿವಾನಂದ ಕುಂಬಾರ, ಸಿದ್ದಾರ್ಥ ಅರಳಿ, ಕಿರಣ ಮಠ, ಪ್ರವೀಣ ಪೋದ್ದಾರ, ಅಮೀತಗೌಡ ಬಿರಾದಾರ, ಅಮೀತ ಪೋದ್ದಾರ,  ಆನಂದ ದೇವರ, ಶ್ರೀಶೈಲ ಕೋರಳ್ಳಿ, ಅರುಣ ಕುಸುಗಲ್, ಅಶೋಗೌಡ ಬಿರಾದಾರ, ಅನೀಲ ಅವಜಿ ಸೇರಿದಂತೆ ಅನೇಕ ಯುವಕರು ಮುಖಂಡರು ಬಣ್ಣದೋಕುಳಿಯಲ್ಲಿ ಪಾಲ್ಗೊಂಡಿದ್ದರು.