ಇಂಡಿ : 11ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ

ಲೋಕದರ್ಶನ ವರದಿ

ಇಂಡಿ 18: ನಮ್ಮ ಈ ನಾಡು ಮಠಾಧೀಶರ ಆಗಮನದಿಂದ, ಅವರ ಪಾದಸ್ಪರ್ಶದಿಂದ ಪುನೀತವಾಗಿದೆ. ನಮ್ಮಲ್ಲಿಯ ಅನೇಕ ಮಠ ಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರನ್ನು ಧರ್ಮದ ಹಾದಿಯಲ್ಲಿ ನಡೆಸುತ್ತಿವೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ತಡವಲಗಾ ಗ್ರಾಮದಲ್ಲಿ ಶ್ರೀಗುರು ರಾಚೋಟೇಶ್ವರ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 11ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮಸಭೆಯಲ್ಲಿ ಮಾತನಾಡಿದರು.

ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಠ ಮಂದಿರಗಳು ಸಮಾಜದ ಎಲ್ಲ ವರ್ಗದ ಜನರಿಗೆ ಸಂಸ್ಕಾರ ಕೊಡುವ ಕೇಂದ್ರಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿರುವ ವಧುವರರಿಗೂ ಆದರ್ಶ ಬದುಕನ್ನು ಸಾಗಿಸಿ ಸಮಾಜಕ್ಕೆ ಸುಪುತ್ರರನ್ನು ಕೊಡುವ ಮೂಲಕ ತಮ್ಮ ಗ್ರಹಸ್ಥಾಶ್ರಮವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಕಾಂತು ಇಂಡಿ, ಕಲ್ಯಾಣಿ ಗಣವಲಗಾ, ಬಸವರಾಜ ಖಾಸಬಾಗ, ಬಾಬುಸಾಹುಕಾರ ಮೇತ್ರಿ, ಜಿ ಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಭಾಜಪ ಮುಖಂಡ ಶಂಕರಗೌಡ ಪಾಟೀಲ, ಶೀಲವಂತ ಉಮರಾಣಿ, ಸಚಿನ್ ಇಂಡಿ, ರವಿಕುಮಾರ ಚವ್ಹಾಣ, ಎಸ್.ಎಸ್. ಜಂಗಮಶೆಟ್ಟಿ, ಜಿ.ಪಿ.ಬಿರಾದಾರ, ಎಸ್.ಜಿ. ಪಾಟೀಲ, ಎಸ್.ಎಲ್. ನಿಂಬರಗಿಮಠ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ಚನಮಲ್ಲಪ್ಪ ಮರಡಿ, ಸಂಪತ್ ಹಿಳ್ಳಿ, ರಾಮಸಿಂಗ ಕನ್ನೊಳ್ಳಿ, ಶಾಂತಯ್ಯ ಹಿರೇಮಠ, ಸಿದ್ದು ಕಪ್ಪೇನವರ, ಮಡಿವಾಳ ಇಂಡಿ, ರಾಜುಗೌಡ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.