ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ: ದೇವೇಗೌಡ

ಬೆಂಗಳೂರು, ಅ 21: ರಾಜ್ಯದಲ್ಲಿ ಪುರಸಭೆ, ನಗರಸಭೆ, ನಗರಪಾಲಿಕೆ ಗಳಿಗೆ ಚುನಾವಣೆಗೆ ಘೋಷಣೆಯಾಗಿದ್ದು,  

ಒಟ್ಟು 418 ಕ್ಷೇತ್ರಗಳ ಚುನಾವಣೆಗೆ ಪಕ್ಷ ಸಜ್ಜಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. 

 ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ, ತಾಲೂಕು ಪಂಚಾಯತ್ ಗಳಲ್ಲಿ  ಖಾಲಿ ಇರುವ ಕಡೆಗಳಲ್ಲಿ ಸ್ಪರ್ದೇ ಮಾಡುತ್ತೇವೆ ಎಂದರು. 

ಕರಾವಳಿಯ ಮಂಗಳೂರಿನಲ್ಲಿ ನಾವು ಎಲ್ಲಾ ಕಡೆ ಸ್ಪರ್ಧಿಸಲಿದ್ದು, 3-4 ಕಡೆ ನಾವು ಗೆಲ್ಲುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ನಾನೇ ಹೋಗಿ ಪ್ರಚಾರ ಮಾಡುತ್ತೇವೆ. ಕರಾವಳಿಗೆ ಹೆಚ್ಚಾಗಿ ಹೋಗದ ಕಾರಣ ಜೆಡಿಎಸ್ ಸಂಘಟನೆ ಮಂಗಳೂರಿನಲ್ಲಿ ಹಿಂದೆ ಬಿದ್ದಿದೆ ಎಂದರು.  

ದಾವಣಗೆರೆ ಯಲ್ಲಿ ಸಂಪೂರ್ಣವಾಗಿ ನಮಗೆ ಬಲ ಇದೆ ಎಂದು ಹೇಳುವುದಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ ಸ್ವಂತತ್ರವಾಗಿ ಸ್ಪರ್ದೇ  ಮಾಡುತ್ತೇವೆ ಎಂದು ಹೇಳಿದರು. 

ಯಾದಗಿರಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪೋಲಿಸರು ದೌರ್ಜನ್ಯ ನಡೆಸಿದ್ದಾರೆ. ಮುಖ್ಯಮಂತ್ರಿ ಕಾರಿಗೆ ಮುತ್ತಿಗೆ ಹಾಕಿದ್ದಾರೆ ಎಂದು ಪೋಲಿಸರು ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ತೊಂದರೆಯಾದರೆ ಸುಮ್ಮನೆ ಇರುವುದಿಲ್ಲ.  

ಸುಮ್ಮನೆ ಇರುವ ಜಾಯಮಾನವೂ ತಮ್ಮದಲ್ಲ ಎಂದರು.