ಕರ್ನಾಟಕದಲ್ಲಿ ಹಲವಾರು ಸ್ವಾತಂತ್ರ್ಯ ಪ್ರೇಮಿಗಳು ಅಸಕಾರ ಚಳುವಳಿ, ಖಿಲಾಪಥ ಚಳುವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ಭಾಗವಹಿಸಿದ ಮಹನಿಯರು ಅಸಂಖ್ಯಾತ. ಗಾಂಧಿಯಜಿಯವರ ಹಾಗೂ ಮೌಲಾನಾ ಶೌಕತ್‌ಲಿ, ಮಹಮದಲಿ ಜಿನ್ನಾರವರು ಕರ್ನಾಟಕ ಪ್ರದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಜಾಗ್ರತೆ ಮುಡಿಸಲು ಆಗಮಿಸಿದಾಗ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟವು. ದತ್ತೊಪಂತ್ ಪುಜಲಿ, ಕೃಷ್ಣರಾವ್, ಜಯರಾವ್ ದೇಶಪಾಂಡೆ, ರಂಗರಾವ್ ತಿಲ್‌ಗಲ್, ಹನುಮಂತರಾವ್ ಕೌಜಲಗಿ, ಅನಂತರಾವ ಜಾಲಿಕಾರ, ವೆಂಕಟೇಶ ಕುಲಕರ್ಣಿ, ಸದಾಶಿವರಾವ್ ಕರ್ನಾಡ್, ಕೆ. ಆರ್. ರಾಹತ್, ಕಾಕಾ ಕಾಳೇಕರ್, ಚನ್ನಪ್ಪ ವಾಲಿ, ಎಂ. ಎಸ್. ಹರ್ಡೇಕರ್, ಆರ್. ಆರ್, ದಿವಾಕರ್, ಆಲೂರು ವೆಂಕಟರಾವ್, ಕಡಪಾ ರಾಘವೇಂದ್ರರಾವ್, ಮುದವಿಡು ಕೃಷ್ಣರಾವ್ ಹೀಗೆ ಮುಂತಾದವರೆಲ್ಲ ನ್ಯಾಯಾಲಯಗಳನ್ನು ಬಹಿಷ್ಕರಿಸಿದರು. ಮದ್ಯದ ಅಂಗಡಿ, ವಿದೇಶಿ ವಸ್ತ್ರದ ಪಿಕೆಟಿಂಗ್ ನಡೆಸಿದರು. ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟ, ಶಿರಿಸಿ, ಸಿದ್ದಾಪೂರ, ಅಂಕೋಲಗಳಲ್ಲಿ ಚಳುವಳಿ ತೀವ್ರಗೊಂಡು ಅನೇಕರು ಬಂಧನಕ್ಕೊಳಗಾದರು.
1924 ರ ಬೆಳಗಾವಿ ಕಾಂಗ್ರೇಸ್ ಅಧಿವೇಶದಲ್ಲಿ ರಾಷ್ಟ್ರಮಟ್ಟದ ನಾಯಕರಾದ ಮಹಾತ್ಮಾಗಾಂಧಿಜೀ, ರಾಜಗೋಪಾಲಚಾರ್ಯ, ವಲ್ಲಭಾಯಿ ಪಟೇಲ್, ಜವಾಹರಲಾಲ ನೆಹರು, ಬಾಬುರಾಜೇಂದ್ರ ಪ್ರಸಾದ, ಅಲಿ ಸಹೋದರರು ಹಾಗೂ ಸುಮಾರು 25 ಸಾವಿರ ಕನ್ನಡಿಗರು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು. ಪ್ರಮುಖರಾದ ಯಶೋಧರಾ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ಎನ್. ಎಸ್. ಸುಬ್ಬರಾವ್, ಭಾರದ್ವಾಜ್, ರಾಮಯ್ಯ, ವಾಲಿ ಚನ್ನಪ್ಪ, ಜಯದೇವರಾವ್ ಕುಲಕರ್ಣಿ, ಶ್ರೀರಂಗ ಕಾಮತ, ಡಾ. ಯಾಳಗಿ, ವಾಮನ ಬಿದರಿ, ಕೆ. ಸಿ. ರೆಡ್ಡಿ, ಟಿ. ಸಿದ್ಧಲಿಂಗಯ್ಯ, ವಾಲಿ ಮರಿಯಪ್ಪ ಮುಂತಾದವರು ದೇಶಕ್ಕಾಗಿ ್ರಾಣಾರೆ್ಪಣ ಮಾಡಲು ಈ ಅಧಿವೇಶದಲ್ಲಿ ಪ್ರತಿಜ್ಞ ಕೈಕೊಂಡರು. ಈ ಅಧಿವೇಶನದ ಅಧ್ಯಕ್ಷರಾದ ಮಹಾತ್ಮಾ ಗಾಂಧಿಯವರು ಖಾದಿ ಉತ್ಪಾದನೆ ಬಗ್ಗೆ, ಮದ್ಯಪಾನ್ ನಿಷೇಧದ ಬಗ್ಗೆ, ಅಸ್ಪೃಶ್ಯತೆಯ ಬಗ್ಗೆ ಒತ್ತುಕೊಟ್ಟು ಹೇಳಿ ಜನತೆಯಲ್ಲಿ ಜಾಗೃತೆ ಮೂಡಿಸಿದರು. ಮಹಾತ್ಮಾಜಿಯವರ ಪ್ರಥಮ ಹಾಗೂ ಕೊನೆಯ ಅಧ್ಯಕ್ಷತೆಯನ್ನು ಹೊಂದಿದ ಬೆಳಗಾವಿಯು ದೇಶದಲ್ಲಿಯೇ ಪ್ರಖ್ಯಾತ ಹೊಂದಿತು.
ಉಪ್ಪಿನ ಸತ್ಯಾಗ್ರಹ 1930 ಎಪ್ರಿಲ್ 12 ರಂದು ಗುಜರಾತಿನ ಸಾಬರಮತಿ ಆಶ್ರಮದಿಂದ ದಂಡಿಯವರೆಗೆ ಪ್ರಯಾಣ ಕೈಕೊಂಡಾಗ 78 ಜನರು ಭಾಗವಹಿಸಿದ್ದರು. ಅದರಲ್ಲಿ ಕರ್ನಾಟಕದಿಂದ 18 ವರ್ಷದ ಮೈಲಾರದ ಮಹಾದೇವಪ್ಪ ಭಾಗವಹಿಸಿದ್ದರು. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ತೀವ್ರರೂಪ ತಾಳಿತು. ಆರ್. ಆರ್. ದಿವಾಕರ ಬಿಜಾಪೂರದಲ್ಲಿ, ಸದಾಶಿವ ಕಾರ್ನಾಡ್ ಮಂಗಳೂರಿನಲ್ಲಿ, ಹಣಮಂತರಾವ್ ಕೌಜಲಗಿ ಗುಳವಾಡಿಯಲ್ಲಿ ಸತ್ಯಾಗ್ರಹ ಕೈಕೊಂಡರು. ಅಂಕೋಲಾದ ಸಮುದ್ರ ತೀರದಲ್ಲಿ 40 ಸಾವಿರ ಜನರು ಸೇರಿ 45 ದಿನಗಳವರೆಗೆ ಕಾನೂನನ್ನು ಉಲ್ಲಘಿಸಿ ಉಪ್ಪು ತಯಾರಿಸಿದರು. ಮಂಗಳೂರು, ಉಡುಪಿ, ಕುಂದಾಪೂರ, ಪುತ್ತೂರು, ಮಲ್ಪೆ, ಮೂಡಬಿದರೆ, ಮಂಜೇಶ್ವರ ಮುಂತಾದವುಗಳ ಕಡೆಗೆ ಅಕ್ರಮವಾಗಿ ಉಪ್ಪು ತಯಾರಿಸಿದರು.
ಉಪ್ಪಿನ ಸತ್ಯಾಗ್ರಹ ಮತ್ತು ಕರನ ನಿರಾಕರಣೆಯ ಸಂದರ್ಭದಲ್ಲಿ 1935 ಏಪ್ರಿಲ್ 26, 27 ರಂದು ಬೆಳಗಾವಿ ಜಿಲ್ಲೆಯಲ್ಲಿ 800 ಜನರನ್ನು, ಉತ್ತರ ಕನ್ನಡ ಹಾಗೂ ಬಿಜಾಪೂರ ಜಿಲ್ಲೆಗಳಲ್ಲಿ 160 ರಂತೆ, ಕೊಡುಗಿನಲ್ಲಿ 40 ಮಂದಿಯನ್ನು ಸೆರಮನೆಗೆ ತಳ್ಳಲಾಯಿತು. ಲಾಠಿಚಾರ್ಜ ಗೋಲಿಬಾರ ನಡೆದವು. ಸಿಂದಿಯ ಗಿಡಗಳನ್ನು ಕಡೆದು ಪಾನ ನಿಷೇದ ಕರನಿರಾಕರಣೆ, ಮಧ್ಯ ಮಾರಾಟ ಅಂಗಡಿಗಳನ್ನು ದ್ವಂಸಗೊಳಿಸುವುದು ಧಾರವಾಡ, ಅಂಕೋಲಾ, ಸಿದ್ಧಾಪೂರ, ಶಿರಿಸಿ ಮುಂತಾದ ಸ್ಥಳಗಳಲ್ಲಿ ನಡೆಯಿತು. ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಗಾಂಧಿಜಿಯವರನ್ನು ಹಾಗೂ ಪ್ರಮುಖ ನಾಯಕರನ್ನು ಬಂಧಿಸಲಾಯಿತು. ನಂತರ ಮಣೆಲಾಲಗಾಂಧಿ ಮತ್ತು ಶ್ರೀಮತಿ ಸರೋಜಿನಿ ನಾಯ್ಡು ನೇತೃತ್ವದಲ್ಲಿ ವರಸನ ಉಪ್ಪು ತಯಾರಿಕಾ ಕೇಂದ್ರ ತಲುಪಿದರು. ಅಲ್ಲಿ ಬ್ರಿಟಿಷ ಅಧಿಕಾರಿಗಳು ಮತ್ತು 400 ಜನ ಸೂರತ ನಗರದ ಪೊಲೀಸರು ಕಾವಲಿದ್ದರು. ಉದ್ದದ ಲಾಠಿ ಮತ್ತು ರೈಫಲ್‌ನೊಡನೆ ಸತ್ಯಾಗ್ರಹಗಳನ್ನು ಹಿಮ್ಮಟಿಸಲು ಸಿದ್ಧರಾಗಿದ್ದರು. ಯಾರೂ ಮುಂದೆ ಹೋಗುತ್ತಾರೋ ಅವರನ್ನು ತಳಿಸ ತೊಡಗಿದರು. ಯಾರೋಬ್ಬ ಸತ್ಯಾಗ್ರಹಿಯು ಪ್ರತಿಭಟಿಸಲಿಲ್ಲ. 2-3 ನಿಮಿಷಗಳಲ್ಲಿ ಹೆಣಗಳ ರಾಸಿಯಾಯಿತು. ರಕ್ತದ ಕೋಡಿ ಹರಿಯಿತು ಎಂದು ಅಮೇರಿಕ ಪತ್ರಕರ್ತನಾದ ವೆಬ್ ಮಿಲ್ಲರ್ ‘ನಾನು ವರದಿಗಾರನಾಗಿ 18 ವರ್ಷಗಳಿಂದ 22 ದೇಶಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಧರಸಾನದಲ್ಲಿ ಚಳುವಳಿಗಾರರ ತಲೆಗಳನ್ನು ಹೊಡೆಯುವ ದೃಶ್ಯವನ್ನು ನಾನು ಎಲ್ಲಿಯೂ ಕಂಡಿಲ್ಲ’ ಎಂದು ಉದ್ಗಾರ ವ್ಯಕ್ತಪಡಿಸಿದ್ದಾನೆ.
ಕರ್ನಾಟಕದ ಮಂಡ್ಯ ಜಿಲ್ಲೆಯ ಶಿವಪೂರದಲ್ಲಿ ರಾಷ್ಟ್ರ ಧ್ವಜ ಸತ್ಯಾಗ್ರಹವನ್ನು ಟಿ. ಸಿದ್ಧಲಿಂಗಯ್ಯ ನೇತೃತ್ವದಲ್ಲಿ, ಸಾವಕಾರ ಚನ್ನಯ್ಯನವರ ಅಧ್ಯಕ್ಷತೆಯಲ್ಲಿ ಎಸ್. ನಿಜಲಿಂಗಪ್ಪ, ಸುಬ್ರಮಣ್ಯ, ಕೆ.ಸಿ. ರೆಡ್ಡಿ, ಹೆಚ್.ಸಿ. ದಾಸಪ್ಪ, ಕೆ.ಟಿ. ಬಾಷ್ಯಂ, ಬಳ್ಳಾರಿ ಸಿದ್ದಮ್ಮ, ಯಶೋಧರ ದಾಸಪ್ಪ, ಜುಬ್ಬಮ್ಮ ಜೋಯಿಸ್ ಇವರೊಂದಿಗೆ ನೂರಾರು ಜನರು ಸೇರಿ ರಾಷ್ಟ್ರ ಧ್ವಜವನ್ನು ಹಾರಿಸಲು ಮುಂದಾದರು. ಶಿವಪುರದಲ್ಲಿ ಸುಮಾರು 25 ಜನರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಈ ಸಮಯದಲ್ಲಿ ಹಲವಾರು ಮುಖಂಡರನ್ನು ಬಂಧಿಸಲಾಯಿತು. ‘ಮಾಡು ಇಲ್ಲವೇ ಮಡಿ’ ಎಂಬ ಮಹಾತ್ಮಾಜೀಯವರ ಕರೆಗೆ ಓಗೊಟ್ಟು ಕರ್ನಾಟಕದಲ್ಲಿ ಬೆಳಗಾವಿ, ಧಾರವಾಡ, ಈಸೂರು, ಭದ್ರಾವತಿ, ಶಿವಮೊಗ್ಗ, ಹಾಸನ, ಬೆಂಗಳೂರು, ಮಂಡ್ಯ, ಮೈಸೂರುಗಳಲ್ಲಿ ತುಂಬ ತೀವ್ರವಾಗಿತ್ತು. ಸರ್ಕಾರದ ಆದೇಶಗಳನ್ನು ದಿಕ್ಕರಿಸುವುದು, ರೈಲು ಕಂಬಿಗಳನ್ನು ಕಿಳುವುದು, ಟೆಲಿಪೋನ್ ತಂತಿಗಳನ್ನು ಕಡಿಯುವುದು, ರೈಲ್ವೆ ಸ್ಟೇಷ್ನ, ಪೋಸ್ಟ್ ಆಫೀಸಗಳಿಗೆ, ಪಂಚಾಯತಿ ಚಾವುಡಿಗಳಲ್ಲಿ ಬೆಂಕಿ ಹಚ್ಚುವುದು, ಸರ್ಕಾರದ ಖಜಾನೆಗಳನ್ನು ಲೂಟಿ ಮಾಡುವುದು ಹೀಗೆ ಮಿತಿಮಿರಿದ ಚಳುವಳಿಯು ಕರ್ನಾಟಕದಲ್ಲಿ ನಡೆಯಿತು. ಆಗ ಎಂಟುಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ವಿದ್ಯಾರ್ಥಿಗಳು ಶಾಲಾ ಕಾಲೇಜಗಳನ್ನು ಬಹಿಷ್ಕರಿಸಿದರು. ಚಳುವಳಿಗಾರರು ರೈಲಿನಲ್ಲಿ ಟಿಕೇಟ ಇಲ್ಲದೆ ಪ್ರಯಾಣ, ಕಾನೂನು ಉಲ್ಲಂಗನೆಯಿಂದ ಸರ್ಕಾರ ರೊಚ್ಚಿಗೆದ್ದು ಬೆಂಗಳೂರಿನ ಮೈಸೂರ ಬ್ಯಾಂಕ ಸರ್ಕಲ್‌ನಲ್ಲಿ 150 ಜನ, ದಾವಣಗೇರಿಯಲ್ಲಿ 6 ಜನ, ಕೊಡುಗಿನಲ್ಲಿ 5 ಜನ, ನಿಪ್ಪಾಣಿಯಲ್ಲಿ 7 ಜನ, ಬೈಲಹೊಂಗಲದಲ್ಲಿ 7 ಜನರನ್ನು ಗುಂಡಿಟ್ಟು ಕೊಂದರು. ಹೀಗೆ ಚಲೇ ಜಾವ್ ಚಳುವಳಿ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿ ಹೊಂದಿತು. ಶಿವಮೊಗ್ಗ ಜಿಲ್ಲೆಯ ಶಿಕಾರಪುರ ತಾಲೂಕಿನ ಈಸೂರನಲ್ಲಿ ವೀರಭದ್ರಸ್ವಾಮಿ ದೇವಾಲಯದ ಮೇಲೆ 1942 ಸೆಪ್ಟೆಂಬರ್ 26 ರಂದು ರಾಷ್ಟ್ರ ಧ್ವಜವನ್ನು ಹಾರಿಸಿ ‘ಈಸೂರು ಸ್ವತಂತ್ರ ಗ್ರಾಮ’ವೆಂದು ಘೋಷಣೆ ಮಾಡಿ ವೀರಾವೇಶ ಹೋರಾಟ ಕೈಕೊಂಡು ಗ್ರಾಮಕ್ಕೆ ಆಗಮಿಸಿದ ಅಮಲ್ದಾರ ಸಬ್ ಇನ್‌ಸ್ಪೇಕ್ಟರನ್ನು ಕೊಂದು ಹಾಕಿದರು. ಅನೇಕರು ಓಡಿ ಹೋದರು. ಆಗ ಬ್ರಿಟಿಷ ಸರ್ಕಾರ ಈಸೂರ ಜನತೆಯ ಮೇಲೆ ಕ್ರಮ ಕೈಕೊಂಡು ಅನೇಕ ಜನರನ್ನು ಬಂಧಿಸಿ ನೇಣುಗಂಬಕ್ಕೇರಿಸಿದರು.
ಕರ್ನಾಟಕದಲ್ಲಿ ಸ್ವತಂತ್ರಕ್ಕಾಗಿ ಚನ್ನಪ್ಪ ವಾಲಿಯಂತವರು, ಗಂಗಾಧರರಾವ ದೇಶಪಾಂಡೆಯಂತವರು, ಟಿ.ಸಿದ್ಧಲಿಂಗಯ್ಯ, ಎಸ್. ನಿಜಲಿಂಗಪ್ಪ, ಕೆಂಗಲ ಹನುಮಂತಯ್ಯ, ಸ್ವಾಮಿ ರಮಾನಂದತೀರ್ಥರು ಹೀಗೆ ಅನೇಕರ ತ್ಯಾಗ ಬಲಿದಾನದ ಪ್ರತಿಕವೇ ನಮ್ಮ ಸ್ವಾತಂತ್ರ್ಯ!.
ಭಾರತದ ಇತಿಹಾಸದಲ್ಲಿ ಕರ್ನಾಟಕದ ಪಾತ್ರ ಅಗಮ್ಯವಾಗಿದೆ. ಇನ್ನೂ ಅನೇಕರ ಹೆಸರುಗಳನ್ನು, ಅನೇಕ ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಲು ಆಗಿಲ್ಲ. ಅದಕ್ಕೆ ಕ್ಷಮೆ ಇರಲಿ. ಕೊನೆಯದಾಗಿ ಹೇಳುವುದೆನಂದರೆ ಈಗ ದೇಶ ಸದೃಡವಾಗಿದೆ. ಬಲಾಢ್ಯ ನಾಯಕನ ನೇತೃತ್ವದಲ್ಲಿ ರಾಷ್ಟ್ರ ಮುನ್ನಡೆಯುತ್ತಿದೆ. 75 ವರ್ಷಗಳಲ್ಲಿ ಸಾಕಷ್ಟು ನೋವು ಕಂಡ ದೇಶ ಈಗ ನೆರೆಹೊರೆಯ ರಾಷ್ಟ್ರಗಳಿಗೆ ಸಿಂಹದಂತೆ ಘರ್ಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಮೇಲೆ ಭಯೋತ್ಪಾದಕರು ಗುಡ್ಡುಗಾಡು ಸೇರಿದ್ದಾರೆ. ನಮ್ಮ ಮಿಲ್ಟ್ರಿ ಅತ್ಯಂತ ಸದೃಢವಾಗಿದೆ. ಸ್ವಾತಂತ್ರ್ಯದ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಪ್ರಧಾನಿ ಸದಾ ಜಾಗೃತ ಆಗಿದ್ದಾರೆ. 70 ವರ್ಷದಿಂದ ದೇಶದ ಸಂಪತ್ತನ್ನು ಲೂಟಿಗೊಳಿಸುತ್ತ ನಕಲಿ ನೋಟುಗಳನ್ನು ಚಲಾವಣೆಗೆ ತಂದು ರೂಪಾಯಿಯ ಮೌಲ್ಯವನ್ನು ಕುಸಿಯುವಂತೆ ಮಾಡುವ ದೇಶ ದ್ರೋಹಿಗಳಿಗೆ, ಭ್ರಷ್ಟ ರಾಜಕಾರಣಿಗಳಿಗೆ ಚಳ್ಳೆಹಣ್ಣು ತಿನ್ನಿಸಲು ನೋಟು ಅಮಾನ್ಯೀಕರಣ ಮಾಡಿದ್ದು, ಕಪ್ಪು ಹಣದ ವಿರುದ್ಧ ಕ್ರಮ ಕೈಕೊಂಡದ್ದು ಸಾಧಾರಣ ಕೆಲಸವಲ್ಲ. ಸುಮಾರು ಐದುನೂರು ವರ್ಷಗಳಕಾಲ ನೆನಗುದಿಗೆ ಬಿದ್ದಂತಹ ರಾಮ ಜನ್ಮಭೂಮಿ ವಿಷಯವನ್ನು ಅತ್ಯಂತ ಚಾಣಾಕ್ಷತೆಯಿಂದ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿದ್ದು ಒಂದಾದರೆ ಹಿಂದುಸ್ಥಾನ ಮಾಯಿಯ ಪುಣ್ಯನದಿ, ಪಾವನ ನದಿಯಾದ ಪವಿತ್ರ ಗಂಗಾ ನದಿಯ ಸ್ವಚ್ಛತೆಗಾಗಿ ಕ್ರಮ ಕೈಕೊಂಡು ‘ನಮಾಮಿ ಗಂಗೆ ಯೋಜನೆ” ಜಾರಿ ತಂದ ಮೋದಿ ಈ ಭಾರತ ಮಾತೆಯ ಮುದ್ದಿನ ಪುತ್ರ.
1962ರಲ್ಲಿ ಜವಾಹರಲಾಲ ನೆಹರೂ ಅವರ ಮುಖಂಡತ್ವದಲ್ಲಿ ಹೀನಾಯವಾಗಿ ಚೀನಾದ ಎದುರು ಸೋತ ಸೈನಕರ ಸ್ಥಿತಿಗತಿ ಏನಿತ್ತು? ಅವರು ಯಾಕೆ ಸೋತರು? ಎಂಬುದನ್ನು ಅಧ್ಯಯನ ಮಾಡಿದ ರಾಷ್ಟ್ರಭಕ್ತ ನರೇಂದ್ರ ಮೋದಿಯವರು ಸೈನಿಕರಿಗೆ ಧೈರ್ಯ ಸ್ಥೈರ್ಯ ತುಂಬಲು ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಬರವಸೆ ಮೂಡಿಸಲು ದೀಪಾವಳಿ ಹಬ್ಬವನ್ನು ಅವರೊಂದಿಗೆ ಆಚರಿಸುತ್ತಾ ಇರುವುದು. ಅಲ್ಲದೇ ಬಲಿಷ್ಠ ಸೈನ್ಯ ಪಡೆಯನ್ನು ಕಟ್ಟುವಲ್ಲಿ ಖಾಲಿ ಇರುವ 57 ಸಾವಿರ ಹುದ್ದೆಗಳನ್ನು ತುಂಬಿಕೊಂಡು ‘ನಾನು ಕೂಡಾ ದೇಶ ಕಾಯುವ ಚೌಕಿದಾರ’ ಎಂದು ಹೆಮ್ಮೆಯಿಂದ ಹೇಳಿದ ಭೂಪ. ಅಧುನಿಕ ಶಸ್ತ್ರಾಸ್ತ್ರಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದಿಸುವ ಕಾರ್ಯ ಕೈಕೊಂಡನು. ಸೈನಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಿದ್ದು, ಸೈನಿಕರ ಮಕ್ಕಳಿಗೆ ವಸತಿ ಮತ್ತು ವಿದ್ಯಾಭ್ಯಾಸದಲ್ಲಿ ಮೀಸಲಾತಿ, ಸೈನಿಕರ ಮುಖ್ಯಸ್ಥರಿಗೆ ಪೂರ್ಣ ಸ್ವಾತಂತ್ರ್ಯ ನೀಡಿ ತುರ್ತು ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಮೂರು ವರ್ಷದಲ್ಲೇ ಬಾಕಿ ಇದ್ದ ಸೈನ್ಯದ ಅತ್ಯಗತ್ಯ ವಸ್ತುಗಳ ಪೂರೈಸಲು ನಾಲ್ಕು ಲಕ್ಷಕೋಟಿ ಹಣ ಖರ್ಚುಮಾಡಿ ಸೈನ್ಯ ಸಜ್ಜುಗೊಳಿಸಿದ ಧೀಮಂತ ನಾಯಕ ಈ ಮೋದಿಯನ್ನಬಹುದು. ಮೂರು ವಿಭಾಗಗಳ ಸೈನ್ಯಕ್ಕೆ ಹೊಸ ರೈಫಲ್ (ಮಾರಕ) ಹಾಗೂ ಸೇನೆಗೆ ಆಧುನಿಕ 5,719 ಹೊಸ ಸ್ನೈಫರ್ ರೈಫಲ್ ಅಲ್ಲದೆ 9,100 ಕೋಟಿ ಹಣದಿಂದ ಆಧುನಿಕ ಆಕಾಶ ಕ್ಷಿಪಣಿ ಖರೀದಿಸಿ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾ ಗಡಿಯಿಂದ ನುಸುಳಕೊರರನ್ನು ನಿಯಂತ್ರಿಸಿದ್ದು, ಂಊ-64 ಎ ಅಪಾಚೆ ಮಾರಕ ಸಾಮರ್ಥ್ಯದ 22 ಹೆಲಿಕ್ಯಾಪ್ಟರ ಮತ್ತು 8.7 ಬಿಲಿಯನ್ ಮೊತ್ತದ 36 ಯುದ್ಧಕ್ಕೆ ಸಜ್ಜಾದ ವಿಮಾನಗಳ ಖರೀದಿ ಒಪ್ಪಂದ, 2 ಬಿಲಿಯನ್ ವೆಚ್ಛದಲ್ಲಿ ಇಸ್ರೇಲ್ನಿಂದ ಮಿಸೈಲ್, 750 ಕೋಟಿ ವೆಚ್ಛದಲ್ಲಿ 145 ಅತಿ ಹಗುರ ಹೌವಿತ್ಜರ್ ಆರ್ಟಿಲಾರಿ, 100 0-9 ವಜ್ರ ಆರ್ಟಿಲರಿ ಬಂದುಕು ಖರೀದಿಸಲು ಮುಂದಾಗಿರುವುದಲ್ಲದೆ ಕ್ರಿವಾಕ್-111 ಶ್ರೇಣಿ 2ರ ಯುದ್ಧ ನೌಕೆ ಖರೀದಿಸಲು ಒಪ್ಪಂದ, ಅಲ್ಲದೇ ಇದೇ ದಿನಾಂಕ 04-06-2021 ರಂದು ರಕ್ಷಣಾ ವ್ಯವಸ್ಥೆಗೆ 50 ಸಾವಿರ ಕೋಟಿ ಮೌಲ್ಯದ 6 ಜಲಾಂತರ್ಗಾಮಿ ನೌಕೆಗಳನ್ನು ಹೊಂದಲು 43 ಸಾವಿರಕೋಟಿ ಹಾಗೂ 6.800 ಕೋಟಿ ಮೌಲ್ಯಗಳ ಯುದ್ಧೋಪಕರಣ ಸಂಗ್ರಹದ ಯೋಜನೆಗೂ ರಕ್ಷಣಾ ಸಚಿವ ರಾಜನಾರ್ಥಸಿಂಗ್ ಅವರಿಗೆ ಒಪ್ಪಿಗೆ ನೀಡಿದ್ದು, ಮೇಕ್ ಇನ್ ಇಂಡಿಯಾ ಪ್ರಾಜೆಕ್ಟ ನಡಿಯಲ್ಲಿ ನೌಕಾಪಡೆಯ ಸಬ್-ಮರಿನ್ ಖರೀದಿ, 24 ಹೊಸ ಜಲಾಂತರ್ಗಾಮಿಗಳನ್ನು ಖರೀದಿಸುವ ಯೋಜನೆ, ಆರು ನೌಕೆಗಳು ಅಣ್ವಸ್ತ್ರ ದಾಳಿ ನಡೆಸಬಲ್ಲ ಸಾಮರ್ಥ್ಯಯುಳ್ಳ ಸ್ವದೇಶಿ ರಕ್ಷಣಾ ಉತ್ಪಾದಕರ ನೆರವಿನೊಂದಿಗೆ ನಿರ್ಮಿಸಲು ಮೋದಿ ಸರ್ಕಾರ ಉದ್ದೇಶಿಸಿದೆ. ಚೀನಾದ ದಾಳಿಯನ್ನು ಏದುರಿಸಲು ಹೊಸ ಅತ್ಯಾಧುನಿಕ ಸಬ್ ಮೆರಿನ್ ಐ.ಎನ್.ಎಸ್ ಚಕ್ರ ಎಂಬ ಹೆಸರಿನಲ್ಲಿ 300 ಕೋಟಿ ಡಾಲರ್ ಒಪ್ಪಂದದಂತೆ 2025ಕ್ಕೆ ನೌಕಾಪಡೆಗೆ ಸೇರೆ್ಡಯಾಗಲಿದೆ. ಹೀಗೆ ಹಲವಾರು ಕನಸುಗಾರ ನಮ್ಮ ಮೋದಿ ಸಾಮಾನ್ಯನಲ್ಲ.
1962ರಲ್ಲಿ ಸೈನಿಕರಿಗೆ ಆದ ತೊಂದರೆ ಎಳ್ಳಷ್ಟು ಆಗಬಾರದೆಂಬ ದೂರದೃಷ್ಟಿವುಳ್ಳ ಮೋದಿ ಸೈನಿಕರಿಗೆ ಗುಂಡು ನಿರೋಧಕ ಜಾಕೇಟ (1,86,138 ಸೈನಿಕರಿಗೆ), ಇನ್ನೂ 1,58000 ಸೈನಿಕರಿಗೆ ಗುಂಡು ನಿರೋಧಕ ಹೆಲ್ಮೆಟ್ ಒದಗಿಸಿದ್ದಾನೆ.
ಸೈನಿಕರಿಗೆ ಶೀತ ನಿರೋಧಕ ಆಧುನಿಕ ಉಡುಪು, ಸತ್ವಭರಿತ ಆಹಾರ ನೀಡುವುದು ದೇಶಿ ನಿರ್ಮಿತ ಗನ್ ನಿರ್ಮಾಣ, 6,700 ಕೋಟಿ ಮೊತ್ತದ 4 ಜಲಾಂರ್ಗಾಮಿ ನಿರೋಧಕ ಬೋಯಿಂಗ್ ಈಗಾಗಲೆ ಸೈನ್ಯದಲ್ಲಿ ಇದೆ. ಹೀಗೆ ಸಹಸ್ರಾರು ಕೋಟಿ ಹಣವನ್ನು ನೀರಿನಂತೆ ಖರ್ಚುಮಾಡಿ ನಾಗಾ ಉಗ್ರರನ್ನು, ಪಾಕಿಸ್ತಾನಿ ಉಗ್ರರನ್ನು ಬಗ್ಗು ಬಡೆದಿದ್ದು ಒಂದು ದಾಖಲೆ. ಡೊಕ್ಲಂನಿಂದ ಚೀನಾ ಸೈನ್ಯವನ್ನು ಹಿಮ್ಮೆಟ್ಟಿಸಿ ಅರುಣಾಚಲ ಪ್ರದೇಶವನ್ನು ಸುರಕ್ಷಿತ ಮಾಡಿದ್ದು ಮತ್ತು ಲಡಾಖನ್ನು ನುಂಗಬೇಕೆಂಬ ಚೀನಾದ ಕನಸನ್ನು ನುಚ್ಚುನೂರು ಮಾಡಿದ್ದು ಹಾಗೂ ಕಳೆದ ವರ್ಷ ಎಪ್ರೀಲ್-ಮೇ ತಿಂಗಳಲ್ಲಿ ಪ್ಯಾಂಗಾಂಗ್ ಸರೋವರದ ದಂಡೆಯಗುಂಟ ಸುಮಾರು 50 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಲ್ಲಿಸಿದ್ದು, ಕಾಲು ಕೆರೆದು ಗಡಿಯನ್ನು ಛೇದಿಸಿ ನಮ್ಮ ಪ್ರದೇಶಗಳಲ್ಲಿ ಒಳಬರಲು ಹವಣಿಸಿದ್ದು ನಮ್ಮ ಸೈನಿಕರು ಅದನ್ನು ತಡೆದು ಚೀನಾದ 20 ಸೈನಿಕರನ್ನು ಹತ್ಯೆಗೈದದ್ದು ಒಂದು ಮೈಲಿಗಲ್ಲು ಎನ್ನಬಹುದು. ಇನ್ನು ನಕ್ಸಲರನ್ನು ಹಣ್ಣು ಮಾಡಿದ್ದು, ಮುಖ್ಯವಾಗಿ ಹೇಳಬೇಕೆಂದರೆ ಮಹಿಳೆಯರ ಮಾನ ಪ್ರಾಣ ಕಾಪಾಡಲು ಅತ್ಯಾಚಾರಿಗಳಿಗೆ ಮರಣ ದಂಡನೆಯಂತಹ ಕಠಿಣ ಕಾನೂನು ತಂದದ್ದು, ಮುಸ್ಲಿಮ್ ಹೆಣ್ಣುಮಕ್ಕಳಿಗೆ ಸ್ವಯಂ ಹಜ್‌ಯಾತ್ರೆಗೆ ಅವಕಾಶ ಮಾಡಿಕೊಟ್ಟ ಪರಧರ್ಮ ಸಹಿಷ್ಟು ನಮ್ಮ ಪ್ರಧಾನಿ. ಅಲ್ಲದೆ ಹಲವಾರು ಶತಮಾನಗಳಿಂದ ಶರಿಯತ್ ಕಾನೂನಿನ ಪ್ರಕಾರ ಮುಸ್ಲಿಮ್ ಹೆಣ್ಣುಮಕ್ಕಳಿಗೆ ತ್ರಿವಳಿ ತಲ್ಲಾಕ್ ಕೊಡುವ ಅಮಾನುಷ್ಯ ಕಾಯ್ದೆಯನ್ನು ತೆಗೆದು ಹಾಕಿದ್ದು ಒಂದಾದರೆ, ಜಮ್ಮು-ಕಾಶ್ಮೀರದಲ್ಲಿ ಇದ್ದ 370ರ ಸಂವಿಧಾನದ ಪರಿಚ್ಛೆದವನ್ನೂ ಹಾಗೂ 35 ಂಛಿಣ ಂ ಕಾನೂನನ್ನೂ ತೆಗೆದುಹಾಕಿ ಲಡಾಖ, ಜಮ್ಮು, ಕಾಶ್ಮೀರಗಳನ್ನು ವಿಂಗಡಿಸಿ ರಾಜ್ಯಗಳ ಸ್ಥಾನಮಾನ ನೀಡಿ ಇಡೀ ಹಿಂದುಸ್ಥಾನಕ್ಕೆ ಒಂದೇ ಕಾನೂನನ್ನು ಜಾರಿಗೊಳಿಸಿದ್ದು ಗಂಡೆದೆಯ ಗಂಡಿಗೆ ಮಾತ್ರ ಸಾಧ್ಯ. ಅಷ್ಟು ಕಠಿಣ ಹೃದಯದ, ಸದೃಢ ಮನಸ್ಸಿನ ಪ್ರಖ್ಯಾತ ರಾಜಕಾರಣಿ ನಮ್ಮ ಪ್ರಧಾನಿ ಮೋದಿ ಎಂಬುದನ್ನು ನಾವು ತಿಳಿದು ನಡೆಯಬೇಕು. ಚೀನಾದ ಹಮ್ಮನ್ನು ಬಗ್ಗು ಬಡೆದ ಧೀರ, ಪಾಪಿ ಪಾಕಿಸ್ತಾನದ ಉಪಟಳಕ್ಕೆ ಕೊನೆ ಇಲ್ಲವೇ? ಎಂದು ಹಲಬುತ್ತಿದ್ದ ರಾಷ್ಟ್ರೇ್ರಮಿಗಳಿಗೆ ಸಂತಸ ನೀಡಿದ್ದಾನೆ. ಭಯೋತ್ಪಾದಕರು ಯಾವ ಯಾವ ಅಡಗುತಾಣ ಸೇರಿದ್ದಾರೋ ಅಲ್ಲಿಗೆ ನಮ್ಮ ಸೈನಿಕರನ್ನು ಕಳಿಸಿ ಸರ್ಜಿಕಲ್ ವಾರ್ ಮುಖಾಂತರ ಅವರ ಹುಟ್ಟು ಅಡಗಿಸಿದ ವಜ್ರಮನುಷ್ಯ ನಮ್ಮ ನರೇಂದ್ರ ಮೋದಿ.
ರಾಮರಾಜ್ಯದ ಕನಸನ್ನು ನನಸು ಮಾಡಲು ಬಂದ ದೇವ ಮಾನವ ಎಂದರೆ ತಪ್ಪಾಗದು. ಬಡ ಜನರಿಗೆ ಆರೋಗ್ಯ ಅಭಿಯಾನ, ಮಹಿಳೆಯರಿಗೆ ಎಲ್.ಪಿ.ಜಿ ಸಂಪರ್ಕ, ಅಮರನಾಥ ಯಾತ್ರೆಗೆ ತಡೆ ಒಡ್ಡುತ್ತಿದ್ದ ಲಜ್ಜಿಗೇಡಿ ಪಾಕಿಸ್ತಾನದ ಉಗ್ರರರನ್ನು ಹೊಡೆದುರುಳಿಸಲು 40 ಸಾವಿರ ಮಿಲಿಟರಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಚೀನಾ ಅಧ್ಯಕ್ಷನನ್ನು ಒಪ್ಪಿಸಿ ಕೈಲಾಸ ಪರ್ವತಕ್ಕೆ ಮತ್ತು ಮಾನಸ ಸರೋವರ ಯಾತ್ರೆಗೆ ಅನುಕೂಲವಾಗುವಂತೆ ಮಾಡಿದ್ದು, ಬಡಜನರಿಗಾಗಿ ಜನ ಓಷಧಿ ಕೇಂದ್ರಗಳನ್ನು ಸ್ಥಾಪಿಸಿ ಸುಮಾರು 800ಕ್ಕಿಂತಲೂ ಹೆಚ್ಚು ಓಷಧಿಗಳನ್ನು 40ಅ ದಿಂದ 70ಅ ರಿಯಾಯತಿ ದರದಲ್ಲಿ ಮಾರಾಟ ಮಾಡುವ ಕೇಂದ್ರಗಳನ್ನು ತೆರೆದಿದ್ದು ಸಾಮಾನ್ಯ ಕೆಲಸವಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ದೇಶವನ್ನು ಸ್ವಚ್ಛ ಭಾರತ, ಶ್ರೇಷ್ಠ ಭಾರತ, ಸ್ವಾಭಿಮಾನಿ ಭಾರತ, ಸದೃಢ ಭಾರತ, ಆತ್ಮನಿರ್ಭಿರ ಭಾರತ, ಸಶಕ್ತ ಭಾರತ ಮತ್ತು ಜಗತ್ತಿಗೆ ಯೋಗ ನೀಡಿದ ಭಾರತವನ್ನಾಗಿ ಮಾಡಿದ ಮೋದಿ ಈ ಕರೋನಾ ಹೆಮ್ಮಾರಿಯ ಅಟ್ಟಹಾಸದ ಸಂದರ್ಭದಲ್ಲಿ ದೇಶವನ್ನು ಸ್ಥೈರ್ಯದಿಂದ ಮುನ್ನಡೆಸಿದ್ದು, ವಿರೋಧಿಗಳ ಬೊಗಳಿಕೆಗೆ ಸೊಪ್ಪು ಹಾಕದೆ ನಿಭಾಯಿಸಿದ್ದು ಶ್ಲಾಘನೀಯವಾದುದು.
75ನೇ ಸ್ವಾತಂತ್ರ್ಯ ಉತ್ಸವದ ಸ್ಮರಣೆಯಲ್ಲಿ ನಾವು ನೀವು ಮೀಯೊಣ. ಭಾರತ ಮಾತೆಗೆ ಶರಣು ಎನ್ನೋಣ. ದೇಶದ ಪ್ರಗತಿಗಾಗಿ, ಸ್ವಾಭಿಮಾನದ ಸಂಕೇತವಾದ ಸ್ವಾತಂತ್ರ್ಯಕ್ಕಾಗಿ ಒಂದಾಗಿ ನಮ್ಮ ನಮ್ಮಲ್ಲಿಯ ತಾರತಮ್ಯ ಮರೆತು ರಾಷ್ಟ್ರ ಪ್ರೇಮಿಗಳಾಗಿ ಬಾಳೋಣ.
|| ಭಾರತ ಮಾತಾ ಕೀ ಜೈ ||
|| ಜೈ ಹಿಂದ್, ಜೈ ಕರ್ನಾಟಕ ||