ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ
ಕೊಟ್ಟೂರು 12: ಕೊಟ್ಟೂರಿನ ತಾಲ್ಲೂಕು ಕಛೇರಿ ಮುಂದೆ ಟೆಂಟ್ ಹಾಕಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಆಧಿಕಾರಿಗಳ ಹಾಗೂ ನೌಕರರ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಹೋರಾಟದಲ್ಲಿ, ತಾಲ್ಲೂಕು ಗ್ರಾಮ ಆಡಳಿತ ಅಧ್ಯಕ್ಷರಾದ ಜ್ಯೋತಿಬಾಯಿ, ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿಯಾದ ತಿಪ್ಪಜ್ಜಿ ಶರಣಪ್ಪ ಖಜಾಂಚಿ ಮಲ್ಲೇಶ , ಉಪಾಧ್ಯಕ್ಷರಾದ ಸುಧಾ ಬೆಟ್ಟಪ್ಪನವರ್, ಕಂದಾಯ ನೌಕರರ ಸಂಘದ ಅಧ್ಯಕ್ಷರಾದ ಹೆಚ್. ಹರೀಶ್, ಸೇರಿದಂತೆ ರಾಜ್ಯಪರಿಷತ್ ಸದಸ್ಯ ಎಸ್.ಎಂ. ಗುರುಬಸವರಾಜ, ಹಾಗೂ ಕಾರ್ಯದರ್ಶಿಗಳಾದ ಕೆ. ರಮೇಶ, ಸೇರಿದಂತೆ ಕೋಗಳಿ ಕಂದಾಯ ನೀರೀಕ್ಷರಾದ ಡಿ.ಶಿವಕುಮಾರ್ ಸೇರಿದಂತೆ ಸಂಘದ ಎಲ್ಲಾ ಪಧಾಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿ ತಮ್ಮಗಳ ಬೇಡಿಕೆ ಈಡೇರಲು ಹಕ್ಕು ಮಂಡನೆ ಮಾಡಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ರಾಜಯ ಪರಿಷತ್ ಸದಸ್ಯರು ಹಾಗೂ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾದ ಯೋಗೀಶವರ ದಿನ್ನೆಯವರು ನಾವು ಈಗಾಗಲೇ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು ನಮ್ಮ ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ತಿಳಿಸುತ್ತಾ ನಮ್ಮ ಬೇಡಿಕೆಗಳಾದ ಹೆಚ್ಚಿನ ಕಾರ್ಯದ ಒತ್ತಡ, ಹಾಗೂ ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ - ಪೌತಿ ಖಾತಾ ಆಂದೋಲನ ಕೈಬಿಡುವಂತೆ ಕೋರಿ, ಹಾಗೂ ಪ್ರಮುಖ 8-10 ಬೇಡಿಕೆಗಳಿದ್ದು ಅವುಗಳನ್ನು ಈಗಾಗಲೇ ಮನವಿ ಪತ್ರದಲ್ಲಿ ತಿಳಿಸಲಾಗಿದ್ದು, ಮನವಿ ಸಹ ಕೊಟ್ಟಿರುತ್ತೇವೆ.
ನೌಕರರ ಕೌಟಂತಿಕ ಸಮಸ್ಯೆ , ಸಣ್ಣ ಸಣ್ಣ ಮಕ್ಕಳ ಪಾಲನೆ ಪೋಷಣೆ ಮಾಡಲು, ಮಕ್ಕಳ ವಿದ್ಯಾಭಾಸ್ಯದ ಸಮಸ್ಯೆ, ದೂರ ದೂರದ ಊರಿನಲ್ಲಿರುವ ತಮ್ಮ ವಯಸ್ಸಾಗಿರುವ ತಂದೆ ತಾಯಿಗಳನ್ನು ಪೋಷಣೆ ಮಾಡಲು ಎದುರಿಸುತ್ತಿರುವ ಸಮಸ್ಯೆ, ಬಾಣಂತಿಯರ , ಗರ್ಭಿಣಿ ನೌಕರರ ಸಮಸ್ಯೆ, ಪತಿ ಪತ್ನಿ ಬೇರೆ ಬೇರೆ ದೂರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಬಿರುಕು ಮಾಡುತ್ತಿರುವ ಸಮಸ್ಯೆ, ಅಂಗವಿಕಲ ನೌಕರರು ಎದುರುಸಿತ್ತಿರುವ ಕಷ್ಟಕರ ಸಮಸ್ಯೆಗಳು, ಸೇರಿದಂತೆ ಅನೇಕ ಸಮಸ್ಯೆ ಗಳನ್ನು ಎದುರಿಸುತ್ತಿದ್ದು, ಕೂಡಲೇ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಹಾಗೂ ಕಂದಾಯ ಸಚಿವರು ಸೇರಿದಂತೆ ಸಂಭಂಧಪಟ್ಟ ಎಲ್ಲರಿಗೂ ಮನವಿ ಪತ್ರ ಸಲ್ಲಿಸಿದ್ದು, ಇದೇ ರೀತೀ ತಾತ್ಸರ ಮನೋಭಾವ ತಳೆದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.