ರಾಜ್ಯಾದ್ಯಂತ ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ
Indefinite strike by civic workers across the state
ಮಹಾಲಿಂಗಪುರ 03; ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನಿರ್ಧೇಶನದಂತೆ ಡಿ.4 ರಂದು ಲೇಖನಿ ಸ್ಥಗಿತ, ಮತ್ತು ಡಿ.5 ರಂದು ಮುನ್ಸಿಪಾಲ್ಟಿಯ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೋಳಿಸಿ ಅನಿರ್ಧಿಷ್ಟ ಮುಷ್ಕರ ಆರಂಬಿಸುವುದಾಗಿ ಪೌರ ಕಾರ್ಮಿಕರ ಸಂಘದ ಸ್ಥಳೀಯ ಅಧ್ಯಕ್ಷ ಎಂ.ಕೆ ದಳವಾಯಿ ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂದರ್ಭದದಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ನಡೆಯುವ ಮುಷ್ಕರದಲ್ಲಿ ಸರ್ಕಾರದ ತಾರತಮ್ಮ ಮತ್ತು ಸ್ಪಂದನೆ ಇಲ್ಲದೆ ಇರುವುದರಿಂದ ಮತ್ತೆ ಅನಿರ್ಧಿಷ್ಟ ಮುಷ್ಕರಕೆಕ ಅನಿಯಾಗುತ್ತಿದ್ದೇವೆ, ನಮ್ಮ ಕರ್ನಾಟಕ ರಾಜ್ಯ ಪೌರನೌರಕರ ಸಂಘವು ರಾಜ್ಯಾದ್ಯಂತ ಎಲ್ಲ ಮುನ್ಸಿಪಾಲ್ಟಿಗಳ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗೀತಗಳಿಸುವ ತಿರ್ಮಾಣ ಕೈಗೊಂಡಿದ್ದು, ಸರ್ಕಾರ ಮತ್ತು ಸಂಬಂದಿಸಿದ ಇಲಾಖೆಗೆ ತಿಳಿಸಲಾಗಿದೆ, ಮಹಾಲಿಂಗಪುರ ಪುರಸಭೆಯು ಕೂಡಾ ಡಿ.4-5 ರಿಂದ ಅನಿರ್ಧಿಷ್ಟ ಮುಷ್ಕರ ಕೈಗೋಳ್ಳಲಾಗಿದೆ ಎಂದರು.
ನೌಕರ ಸಂಘದ ಬೇಡಿಕೆಗಳು : ರಾಜ್ಯದ ಎಲ್ಲಾ ನಗರ ಸ್ಥಳೀಯ ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಿ ಜ್ಯೋತಿ ಸಂಜೀವಿನಿ ಕೆ.ಜಿ.ಐ.ಸಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. 2022-23 ರಲ್ಲಿ ನೇಮಕಾರಿ ಹೊಂದಿರುವ ಪೌರ ಕಾರ್ಮಿಕರಿಗೆ ಎಸ್.ಎಫ.ಸಿ ಅನುದಾನದಲ್ಲಿ ವೇತನ ನೀಡುವುದು. ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರು, ವಾಹನ ಚಾಲಕರು, ಲೋಡರ್ಸ, ಕ್ಲೀನರ್ಸ, ಗಾರ್ಡಿನರ್,ಸ್ಯಾನಿಟರಿ ಸುಪ್ರವೈಜರ, ಸುಪ್ರವೈಜರ್, ಕಂಪ್ಯೂಟರ್ ಆಪರೇಟರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನಗರ ಸ್ಥಳೀಯ ಸಂಸ್ಥೇಗಳಿಂದ ನೇರ ಪಾವತಿಗೆ ಒಳಪಡಿಸುವುದು. ರವಿ ಹಲಸಪ್ಪಗೋಳ, ಎಂ.ಎಂ ಮುಗಳಕೋಡ, ಪಿ.ವಾಯ್ ಸೊನ್ನದ, ಎಸ್.ಎನ್.ಪಾಟೀಲ, ಚಂದ್ರು ಚಿತ್ತರಗಿ, ರಾಜೇಶ್ವರಿ ಸೋರಗಾಂವಿ, ಮನೋಜ ಹಂಚಾಟೆ, ಸಿ.ಎಸ್ ಮಠಪತಿ, ರಾಮು ಮಾಂಗ, ಮಹಾಲಿಂಗ ಮಾಂಗ, ಎಸ್.ಜಿ ಕತ್ತಿ. ವಿಕ್ರಮ ಹವಾಲ್ದಾರ ಸೇರಿದಂತೆ ಪೌರ ನೌಕರರು, ಕಾರ್ಮಿಕರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 