ಇಂಡಿ ಮತಕ್ಷೇತ್ರದ ಪ್ರಗತಿ ಪರೀಶೀಲನಾ ಸಭೆ

Ind Constituency Progress Review Meeting

ಇಂಡಿ ಮತಕ್ಷೇತ್ರದ ಪ್ರಗತಿ ಪರೀಶೀಲನಾ ಸಭೆ 

ಇಂಡಿ 05: ನಗರದ ಪ್ರವಾಸಿ ಮಂದಿರದಲ್ಲಿ ಇಂಡಿ ಮತಕ್ಷೇತ್ರ ಶಾಸಕ ಯಶವಂತರಾಯಗೌಡ ಪಾಟೀಲ ಅವರ ನೇತೃತ್ವದಲ್ಲಿ ಪ್ರಗತಿ ಪರೀಶೀಲನಾ ಸಭೆ ನಡೆಯಿತು. 

ಶಾಸಕರು ಜನರ ಹಾಗೂ ರೈತರ ಅಗತ್ಯ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು. ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ​‍್ಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಗ್ರಾಮೀಣ ಪ್ರದೇಶದ ಜನರು ಕಛೇರಿ ಬಂದ ಎಲ್ಲರ ಕೆಲಸವನ್ನು ಸರಿಯಾಗಿ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಸಭೆಯಲ್ಲಿ ವಿಜಯಪೂರ ಜಿಲ್ಲಾ ಅಧಿಕಾರಿ ಟಿ ಬುಬಾಲನ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೀಷಿ ಆನಂದ , ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಹಶೀಲ್ದಾರ ಎಸ್ ಬಿ ಕಡಕಬಾವಿ ಡಿ ವಾಯ್ ಎಸ್ ಪಿ ನಟರಾಜ, ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ್ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಗುತ್ತರಗಿಮಠ ಇಂಡಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಾದೇವ ಏವೂರ, ತೋಟಗಾರಿಯ ಇಲಾಖೆ ಅಧಿಕಾರಿ ಎಚ್ ಎಸ್ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಅಧಿಕಾರ ರಾಹುಲ್ ಲಮಾಣಿ ಶಿಕ್ಷಣ ಇಲಾಖೆ ಅಧಿಕಾರಿ ಎಚ್ ಎಸ್ ಆಲಗೂರ, ಅಬಕಾರಿ ಇಲಾಖೆ ರಾಹುಲ್ ನಾಯಕ ಜಿಲ್ಲಾ ಪಂಚಾಯತ್ ಇಲಾಖೆ ಅಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿ ಮೆಡೆಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.