ಮಕ್ಕಳಲ್ಲಿ ಜಾನಪದ ಕಲೆಯನ್ನು ತಿಳಿಹೇಳಿ ಕಲೆಯನ್ನು ಬೆಳೆಸಿ: ವಲ್ಲೇಪ್ಪನವರ

Inculcate folk art in children and cultivate art: Valleppanavara

ಧಾರವಾಡ 17: ಇಂದಿನ ದಿನದಲ್ಲಿ ಆಧುನಿಕತೆಯ ಪ್ರಭಾವವು ನಮ್ಮನೆ ನಾವು ಮರೆತುಕೊಳ್ಳುವಷ್ಠರ ಮಟ್ಟಿಗೆ ಹಾಸುಹೊಕ್ಕಾಗಿದೆ. ಹಾಗಾಗಿ ಅದನ್ನು ಅವಶ್ಯಕೆಗೆ ತಕ್ಕಷ್ಟು ಮಾತ್ರ ಬಳಸಿಕೊಳ್ಳಬೇಕು. ತಾಯಿ ಹುಟ್ಟಿನಿಂದ ತಮ್ಮ ಮಕ್ಕಳನ್ನು ಹಾಲುಣಿಸಿ ಬೆಳೆಸುತ್ತಾಳೆ ಹಾಗೇಯೇ ಜನಪದ ಕಲೆಯು ಸಹ ಮನೆಯಿಂದಲೇ ಬೆಳೆದಿದ್ದು ಪ್ರತಿಯೊಬ್ಬರಲ್ಲಿಯೂ ಹುಟ್ಟಿನಿಂದ ಒಂದು ಪ್ರತಿಭೆ ಇರುತ್ತದೆ ಆ ಅಸಾಧರಣ ಪ್ರತಿಭೆಯನ್ನು ಹೊರಹಾಕೊಣ ಮಕ್ಕಳಲ್ಲಿ ಜಾನಪದ ಕಲೆಯನ್ನು ತಿಳಿಹೇಳಿ ಕಲೆಯನ್ನು ಬೆಳೆಸಿ ಎಂದು ಹಿರಿಯ ಜಾನಪದ ಕಲಾವಿದರಾದ ಇಮಾಮಸಾಬ್ ವಲ್ಲೇಪ್ಪನವರ ಹೇಳಿದರು. 

ಅವರು ದಿ. 15 ರಂದು ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘ (ರಿ,) ಧಾರವಾಡ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾಭವನದಲ್ಲಿ ಜರುಗಿದ ಜಾನಪದ ಸಂಭ್ರಮ ಹಾಗೂ ಶಹನಾಯಿ ವಾದನ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡಿ,  ಇಂತಹ ಸಂದರ್ಭದಲ್ಲಿ ಪ್ರಜ್ವಲ ಹವ್ಯಾಸಿ ಕನ್ನಡ ಹಾಗು ಕೊಂಕಣಿ ಕಲಾ ಸಂಘ ಸುಮಾರು ಇಪ್ಪತೈದು ವರ್ಷಗಳಿಂದ ತನ್ನ ಕಾರ್ಯವನ್ನು ಮಾಡುತ್ತಾ ಜಾನಪದ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. 

ಜಾನಪದ ಹರಿಕಾರರಾದ ಹಿರಿಯ ಜಾನಪದ ತಜ್ಞ ಡಾ. ರಾಮೂ ಮೂಲಗಿ ತಮ್ಮ ಅಧ್ಯಕ್ಷತೆಯ ನುಡಿಗಳಲ್ಲಿ ಮಾತನಾಡಿ ಜಾನಪದ ಸಂಭ್ರಮ ಹಾಗೂ ಶಹನಾಯಿ ವಾದನ ಈ ಕಾರ್ಯಕ್ರಮ ವೈಶಿಷ್ಠತೆಯನ್ನು ಹೊಂದಿದ್ದು ಗೀಗಿ ಪದ-ಹಂತಿ ಪದಗಳ ಮೆಲಕನ್ನು ಹಾಕುತ್ತಾ ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಸಂಘದ ಮೇಲೆ ಬರೆದಂತಂಹ ಹಾಡನ್ನು ಹಾಡಿ ಇಂದು ಸ್ಫರ್ಧಾತ್ಮಕ ಜಗತ್ತಿನಲ್ಲಿ ಅನೇಕ ಪಾಶ್ಚಾತ್ಯ ಸಂಸ್ಕತಿಗಳು ಚಾಲನಗಳಲ್ಲಿ ಹರಿದಾಡುತ್ತೀವೆ ಆದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಮೆಟ್ಟಿ ನಿಲ್ಲುವಂತಂಹ ಶಕ್ತಿ ನಮ್ಮ ಜಾನಪದ ಕಲೆಗೆ ಮಾತ್ರ ಇದೆ, ಯುವಕರಲ್ಲಿ ಜಾನಪದದ ಕುರಿತು ತಿಳುವಳಿಕೆ ಮತ್ತು ಅದರ ಪ್ರಾಯೋಗಿಕ ತರಬೇತಿಯ ಅವಶ್ಯಕತೆ ಇದೆ ಆದರೆ ಇಂದು ಇಡೀ ಕರ್ನಾಟಕದಲ್ಲಿ ಜಾನಪದ ಕಲೆ ಉಳಿದಿದ್ದು ಮಾತ್ರ ಉತ್ತರ ಕರ್ನಾಟಕದಲ್ಲಿ ಮಾತ್ರ ಇಂದು ಜಾನಪದ ಸಂಸ್ಕೃತಿಯ ಉಳಿವಿನ ಕಾರ್ಯದ ಜತೆಯಲ್ಲಿಯೆ ಸಾಮಾಜಿಕ ಕಾರ್ಯವನ್ನು ಸಹ ರೂಡಿಸಿಕೊಳ್ಳಬೇಕಾಗಿದೆ ಅದರ ಜೊತೆಗೆ ಗಂಡುಮೆಟ್ಟಿನ ನಾಡಿನಲ್ಲಿ ಜಾನಪದ ಕಲೆಯನ್ನು ಭಧ್ರವಾಗಿ ಬೆಳೆಸೋಣ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಡಾ. ಪ್ರಕಾಶ ಮಲ್ಲಿಗವಾಡ ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿಯನ್ನು ಮೆಟ್ಟಿ ನಿಲ್ಲುವಂತಂಹ ಶಕ್ತಿ ಜಾನಪದ ಕಲೆಗೆ ಮಾತ್ರ ಇದೆ ಆದರೆ ಕಲಾವಿದರಿಗೆ ನಿಜವಾದ ಕಲಾವಿದರಿಗೆ ಜಾನಪದ ವಿಶ್ವವಿದ್ಯಾಲಯದಲ್ಲಿ ಗೌರವ ತಕ್ಕಮಟ್ಟಿಗೆ ಸಿಗುತ್ತಿರುವುದು ಬೇಸರ ತರುವಂತದ್ದಾಗಿದೆ ಇದರಿಂದ ನಿಜ ಜಾನಪದ ಕಲಾವಿದರಿಗೆ ಅಲ್ಲಿ ಗೌರವ ಸಿಗಬೇಕು ಇಂದು ಬರೇ ಉನ್ನತ ವ್ಯಾಸಂಗ ಮಾಡಿದಂತವರಿಗೆ, ಪಠ್ಯೇತರ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಮಾತ್ರ ಸೂಕ್ತವಾದ ಬೆಂಬಲ ಸಹಕಾರ ಅಲ್ಲಿ ಸಿಗುತ್ತಿದ್ದು ಬೇಸರ ತರುವಂತಹದ್ದಾಗಿದೆ ಎಂದರು, ನಿಜವಾದ ಜಾನಪದ ಕಲಾವಿದರು ಇಂದು ಜಾನಪದ ಹಾಡುಗಳ ಮೂಲಕ ಪ್ರಚಲಿತ ಪಡೆದುಕೊಂಡು ತಮ್ಮದೆ ಆದೆ ವೈಶಿಷ್ಠತೆಯಿಂದ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ ಆ ನಿಟಟ್ಟಿನಲ್ಲಿ ಧಾರವಾಡ ಹೆಚ್ಚು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವನ್ನು ಪಡೆದ ಕ್ಷೇತ್ರವಾಗಿದೆ ಎಂದರು. 

ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಸಹಾಯಕ ಕುಲಸಚಿವರು ಜಾನಪದ ವಿಶ್ವವಿದ್ಯಾಲಯ ಗೊಟಗೊಡಿ ಶಿಗ್ಗಾಂವಿಯ ಶಹಜಹಾನ ಮುದಕವಿ ಮಾತನಾಡಿ ನಮ್ಮ ಜಾನಪದ ವಿಶ್ವವಿದ್ಯಾಲಯ ಎಲ್ಲರಿಗೂ ಅನುಕೂಲವಾಗಿದ್ದು, ಇಲ್ಲಿ ಎಲ್ಲ ಕಲಾವಿದರಿಗೆ ಗೌರವ ನೀಡುವ ನಿಟ್ಟಿನಲ್ಲಿ ದೇಶದಲ್ಲಿಯೇ ನಮ್ಮ ಜಾನಪದ ವಿಶ್ವವಿದ್ಯಾಲಯ ಗುರುತಿಸಿಕೊಂಡಿದ್ದು, ರಾಜ್ಯದ ಹಲವಾರು ಕಡೆಗಳಲ್ಲಿ ನಮ್ಮ ವಿಶ್ವವಿದ್ಯಾಲಯದಿಂದ ಕಾಲೇಜುಗಳಿದ್ದು ಅದರ ಉಪಯೋಗವನ್ನು ಯುವ ಕಲಾವಿದರು ಪ್ರವೇಶವನ್ನು ಪಡೆದು ಜಾನಪದ ಕಲೆಗಳ ಬಗ್ಗೆ ಅಧ್ಯಯನ ಮಾಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ನಾವುಗಳು ಪೂರ್ತಿಯಾದ ಸಹಕಾರ ನೀಡುವುದಾಗಿ ಹೇಳಿದರಲ್ಲದೆ ಡಾ. ಪ್ರಕಾಶ ಮಲ್ಲಿಗವಾಡ ಕೇಳಿದ ಪ್ರಶ್ನೆಗೆ ಉತ್ತರಿಸಿ ಇವರು ನಿಜವಾದ ಜಾನಪದ ಕಲಾವಿದರಿಗೆ ನಮ್ಮ ವಿಶ್ವವಿದ್ಯಾಲಯ ಮುಂಬರುವ ದಿನಗಳಲ್ಲಿ ಸೂಕ್ತ ಗೌರವವನ್ನು ನೀಡುವುದರ ಜೊತೆಗೆ ಅವರಿಗೆ ಆದರ ಆತಿಥ್ಯದ ಜೊತೆಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದರು. 

ಇದೇ ಸಂದರ್ಭದಲ್ಲಿ ಯುವ ಕಲಾವಿದ ಶ್ರೀಧರ ಭಜಂತ್ರಿ ರವರನ್ನು “ಮೋಹರಿ ಸಾಧಕ” ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇಮಾಮಸಾಬ್ ವಲ್ಲೇಪ್ಪನವರ ರವರಿಗೆ “ಜಾನಪದ ಜಂಗಮ” ಬಿರುದನ್ನು ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ಸಂತೋಷ ಗಜಾನನ ಮಹಾಲೆ ಪ್ರಾಸ್ತಾವಿಕ ಹಾಗೂ ಕಲಾವಿದರನ್ನು ಸ್ವಾಗತಿಸಿದರು, ಬದರಿನಾಥ ಕೊರ್ಲಹಳ್ಳಿ ಸ್ವಾಗತಗೀತೆ ಹಾಡಿದರು. ವೇದಿಕೆಯ ಮೇಲೆ ಅಪೂರ್ವಾ ಕೃಷ್ಣಾನಂದ ಮಹಾಲೆ, ಸ್ನೇಹಾ ಮಹಾಲೆ, ಸುಭಾಶ ಭಜಂತ್ರಿ, ಪ್ರಣವ ಮಹಾಲೆ ನಾಗಲಿಂಗ ಪಾಟೀಲ ಹಾಗೂ ಸೋಹನ ಮಹಾಲೆ ಉಪಸ್ಥಿತರಿದ್ದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು,  

ನಂತರ ನಂತರ ಯುವ ಕಲಾವಿದ ಶ್ರೀಧರ ಭಜಂತ್ರಿ ರವರಿಂದ ಶಹನಾಯಿ ವಾದನ ಹಾಗೂ ಇಮಾಮಸಾಬ್ ವಲ್ಲೇಪ್ಪನವರ ಸಂಗಡಿಗರಿಂದ ಜಾನಪದ ಗೀತೆಗಳು ನಡೆದು ಪ್ರೇಕ್ಷಕರನ್ನು ರಂಜಿಸಿದವು.