ಲೋಕದರ್ಶನ ವರದಿ
ಗಂಗಾವತಿ 12: ಯುವಕರಲ್ಲಿ ವಾಲಿಬಾಲ್, ಕಬಡ್ಡಿ, ಖೋಖೊ ಮುಂತಾದ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಸಬೇಕು ಎಂದು ನಗರ ಪೊಲೀಸ್ ಠಾಣೆ ಆರಕ್ಷ ನಿರೀಕ್ಷಕ ಉದಯ ರವಿ ಹೇಳಿದರು.
ಭಾನುವಾರ ನಗರದ ಪಬ್ಲಿಕ್ ಕ್ಲಬ್ ಆವರಣದಲ್ಲಿ ಪಬ್ಲಿಕ್ ವಲಿಬಾಲ್ ಕ್ಲಬ್ ಆಯೋಜಿಸಿದ್ದ ಗಂಗಾವತಿ ಐಪಿಎಲ್ 2019 ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಾಲಿಬಾಲ್ ಕ್ಲಬ್ನ ಅಧ್ಯಕ್ಷ ನಾಗರಾಜಗೌಡ ಹೊಸಳ್ಳಿ ಮಾತನಾಡಿ, ಗಂಗಾವತಿಯಲ್ಲಿ ಬಲಿಷ್ಟ ವಾಲಿಬಾಲ್ ತಂಡ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ನಗರದಲ್ಲಿನ ಯುವಕರನ್ನು ವಾಲಿಬಾಲ್ ಕ್ರೀಡೆಯಲ್ಲಿ ಹೆಚ್ಚು ಸಕ್ರೀಯಗೊಳಿಸುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಿದೆ. ಆನೆಗೊಂದಿ ಉತ್ಸವ ಸೇರಿದಂತೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುವ ವಾಲಿಬಾಲ ಪಂದ್ಯಾವಳಿಯಲ್ಲಿ ಗಂಗಾವತಿಯ ಯುವಕರ ತಂಡ ಭಾಗವಹಿಸಿ ಸಾಧನೆ ಮಾಡಬೇಕೆಂಬುದೇ ನಮ್ಮ ಉದ್ದೇಶವಾಗಿದೆ. ನಗರದ ನಾಗರೀಕರು ಸಹಕಾರ ನೀಡಬೇಕು ಎಂದರು. ಕ್ಲಬ್ನ ಪ್ರಮುಕ ಎಸ್.ಆರ್.ಕುಲಕಣರ್ಿ ಪಂದ್ಯಾವಳಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಯುವ ಮುಖಂಡ ಆನಂದ ಅಕ್ಕಿ, ನಿವೃತ್ತ ಜಿಲ್ಲಾ ಕ್ರೀಡಾಧಿಕಾರಿ ಸುದರ್ಶನರಾವ್, ದೈಹಿಕ ಕ್ರೀಡಾ ಶಿಕ್ಷಕ ಭೋಗೇಶರಾವ್, ದೀಪಕ್ ಬಾಂಠೀಯಾ ಮತ್ತಿತರು ಇದ್ದರು. ಸುಮಾರು 7 ತಂಡಗಳು ಭಾಗವಹಿಸಿ ಮದ್ಯಾಹ್ನ 11 ಗಂಟೆಯಿಂದ ಮದ್ಯರಾತ್ರಿಯವರೆಗೂ ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಸ್ಪಧರ್ಿಸಿ ಬಹುಮಾನ ಪಡೆದರು.