ಕನಕಪುರದಲ್ಲಿ ಹೆಚ್ಚಿದ ಸೋಂಕು: ಸಂಸದ ಡಿ.ಕೆ. ಸುರೇಶ್

ಬೆಂಗಳೂರು,ಜೂ 21,ಕನಕಪುರದಲ್ಲಿ ಸೋಂಕು ಹೆಚ್ಚುತ್ತಿದ್ದು, ವೈದ್ಯರಿಂದ ಹಿಡಿದು ವ್ಯಾಪಾರಿಗಳ ತನಕ ಎಲ್ಲರಿಗೂ ಸೋಂಕು ಹರಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.ಕನಕಪುರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕೊರೋನಾ ತಡೆಗೆಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ  ಕನಕಪುರ ದ ಟೌನ್ ಮುನಿಸಿಪಾಲಿಟಿ ಯಲ್ಲಿ ತುರ್ತು ಸಭೆ ಕರೆದಿದ್ದಾರೆ.ನಗರದಲ್ಲಿಂದು ಮಾತನಾಡಿದ ಅವರು,ಜಿಲ್ಲಾ ಮಂತ್ರಿಗಳು ಪ್ರವಾಸದ ವೇಳೆ ಸಭೆ ಮಾಡಿದ್ದಾರಾದರೂ  ಸಭೆಗಳಿಗೆ ತಮ್ಮನ್ನಾಗಲೀ ಶಾಸಕರನ್ನಾಗಲೀ ಯಾರನ್ನೂ ಕರೆದಿಲ್ಲ.ನಾವು ಸಭೆಗೆ ಬೇಡ ಎಂದರೆ ಪರವಾಗಿಲ್ಲ.ಅವರೇ ಬೇಕಾದರೆ ಸಭೆಯನ್ನುಮಾಡಿಕೊಳ್ಳಲಿ.

ಆದರೆ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರ ಸಹಕಾರ ಮುಖ್ಯ.ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ರಾಮನಗರ ಉಸ್ತುವಾರಿಗಳೂ ಆಗಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ವಿರುದ್ಧಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.ಚೀನಾ- ಭಾರತ ಗಡಿಭಾಗದಲ್ಲಿ ಸೈನಿಕರ ಘರ್ಷಣೆ ವಿಚಾರವಾಗಿ ಮಾತನಾಡಿದ ಅವರು,ಚೀನಾ ಗಡಿಯನ್ನು ದಾಟಲಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರಲ್ಲ.ಹಾಗಾದರೆ ನಮ್ಮ ಸೈನಿಕರು ಸಾವನ್ನಪ್ಪಿದ್ದು ಹೇಗೆ? ಚೀನಾ ಗಡಿಯಲ್ಲಿ ಸಾವನ್ನಪ್ಪಿರುವ, ಭಾರತದ ಗಡಿಯಲ್ಲಿ ಯಾರು ಹುತಾತ್ಮರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಬೇಕು.ಇದರಲ್ಲೇನೋ ಮಸಲತ್ತು ನಡೆಯುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದರು. ಸೈನಿಕರ ಸಾವಿನ ಕಾರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆಯೇ?20  ಸೈನಿಕರು ಹುತಾತ್ಮರಾಗಿದ್ದು ಹೇಗೆ? ಇದನ್ನೇ ಎಐಸಿಸಿ ನಾಯಕರು ಕೇಂದ್ರವನ್ನು ಕೇಳುತ್ತಿದ್ದಾರಾದರೂ ಪ್ರಧಾನಿ ಮೋದಿ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಜುಲೈ 2 ರಂದು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ  ಕಾರ್ಯಕ್ರಮ ನಿಗದಿಯಾಗಿದೆ.ಮುಖ್ಯಮಂತ್ರಿಗಳು ಯಾವಾಗ ಬೇಕಾದರೂ ಕಾರ್ಯಕ್ರಮ ಮಾಡಿಕೊಳ್ಳಿ ಎಂದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ.ಸುರೇಶ್ಉ ತ್ತರಿಸಿದರು.