ವಿಜಯಪುರದಲ್ಲಿ ಹೆಚ್ಚಿದ ಕರೋನ ಸೋಂಕು : 200 ಜನರ ಸ್ಥಳಾಂತರ

ವಿಜಯಪುರ , ಏ 19,  ವಿಜಯಪುರ ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಂದೇ ಬಡಾವಣೆಯಲ್ಲಿ  20 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.ಹೀಗಾಗಿ  ಮುನ್ನೆಚ್ಚರಿಕಾ ಕ್ರಮವಾಗಿ 200ಕ್ಕೂ ಅಧಿಕ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ರಾಜ್ಯಾದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ಸೋಂಕಿತರ ಸಂಖ್ಯೆ ಈವರೆಗೆ 388ಕ್ಕೆ ಏರಿಕೆಯಾಗಿದೆ. ವಿಜಯಪುರದ ಒಂದೇ ಪ್ರದೇಶದ  5 ಕುಟುಂಬಗಳಿಗೆ ಕೊರೋನಾ ಸೋಂಕು ತಗುಲಿದೆ . ಹೀಗಾಗಿ ಈ 5 ಕುಟುಂಬಗಳ ಸಂಬಂಧಿಕರು, ಸೇರಿ 20ಕ್ಕೂ ಅಧಿಕ ಕುಟುಂಬಗಳನ್ನು   ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ
ಸರ್ಕಾರಿ ಬಸ್ಗಳಲ್ಲಿ 20 ಜನರನ್ನು ಸ್ಥಳಾಂತರ  ಮಾಡಲಾಗಿದೆ. ಕೊರೋನಾ ಪೀಡಿತರ ಸಂಪರ್ಕದಲ್ಲಿದ್ದ ಪ್ರೈಮರಿ ಹಾಗೂ ಸೆಕಂಡರಿ ಸಂಪರ್ಕದಲ್ಲಿರುವವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಈ ಪ್ರದೇಶದ ಸುತ್ತಮುತ್ತಲಿನ ಸುಮಾರು ಒಂದು ಸಾವಿರ  ಜನರ ಗಂಟಲು ದ್ರವ ಪರೀಕ್ಷೆ ಮಾಡಲು ವಿಜಯಪುರ ಜಿಲ್ಲಾಡಳಿತ ಮುಂದಾಗಿದೆ. ಈ ಮೂಲಕ ಕೊರೋನಾ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿರುವ ಕಾರಣ ವಿಜಯಪುರ ಜಿಲ್ಲಾಡಳಿತ ಚಪ್ಪರಬಂದ್ ಕಾಲನಿ ಸೇರಿದಂತೆ ಗೋಳಗುಮ್ಮಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ .