ಲೋಕದರ್ಶನ ವರದಿ
ಯರಗಟ್ಟಿ: ಅರಣ್ಯ ನಾಶದಿಂದ ಮಳೆ ಪ್ರಮಾಣ ಕ್ಷೀಣಿಸುತ್ತಿದ್ದು ಜೀವಕುಲ ಸಂಕಷ್ಟದಲ್ಲಿದೆ ಮತ್ತು ಪಕ್ಷಿಗಳ ಸಂತತಿ ಕ್ಷೀಣಿಸುತ್ತಿದೆ. ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಇದರಿಂದ ಪಕ್ಷಿಕುಲ ಸಂತತಿಯನ್ನು ಹೆಚ್ಚಿಸಬಹುದು ಎಂದು ಉಪ ಅರಣ್ಯ ಅಧಿಕಾರಿ ಎಸ್.ಬಿ.ಪಾವಟೆ ಹೇಳಿದರು.
ಸಮೀಪದ ಸತ್ತಿಗೇರಿ ಗ್ರಾಮದ ಮಹಾತ್ಮಾ ಗಾಂಧೀಜಿ ಉದ್ಯಾನವನದಲ್ಲಿ ಶ್ರೀ ಜಗದ್ಗುರು ವೀರ ಗಂಗಾಧರ ಹಿರಿಯ ಪ್ರಾಥಮಿಕ ಶಾಲೆ ಹಮ್ಮಿಕೊಂಡಿರುವ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ಬಹದ್ಧೂರ ಶಾಸ್ತ್ರಿಯವರ ಜಯಂತೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಸತ್ತಿಗೇರಿ ಗ್ರಾಮದಲ್ಲಿ ಸರಕಾರದ ಗೈರಾಣಿ 40 ಎಕರೆ ಜಮೀನಿನಲ್ಲಿ ಮೂರು ವರ್ಷಗಳ ಹಿಂದೆ ಸುಮಾರು ನಾಲ್ಕು ಸಾವಿರ ಮರಗಳನ್ನು ನೆಟ್ಟಿದ್ದರಿಂದ ಉದ್ಯಾನವನಕ್ಕೆ ಹಲವಾರು ಸಂತತಿಯ ಪಕ್ಷಿಗಳು ವಲಸೆ ಬರುತ್ತಿವೆ ಎಂದರು.
ಈ ಸಮಯದಲ್ಲಿ ಶ್ರೀ ಜಗದ್ಗುರು ವೀರ ಗಂಗಾಧರ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ರಾಮಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ, ಶ್ರೀ ಮಳಿಮಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಡ ಶಾಲೆ, ಸರಕಾರಿ ಆಂಗ್ಲ ಮಾದ್ಯಮ ಶಾಲೆ, ಸರಕಾರಿ ಉದರ್ು ಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜಿನ ಸಾವಿರಾರು ವಿದ್ಯಾಥರ್ಿಗಳು ಮಹಾತ್ಮಾ ಗಾಂಧೀಜಿ ಕನಸಿನ ಸ್ವಚ್ಚಭಾರತ ಸಲುವಾಗಿ ಮಹಾತ್ಮಾ ಗಾಂಧೀಜಿ ಉದ್ಯಾನವನದಲ್ಲಿ ಶ್ರಮದಾನ ಮಾಡಿದರು.
ಈ ಸಂಧರ್ಭದಲ್ಲಿ ಬಸವಣ್ಣೆಪ್ಪ ನಾರಗುಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಶ್ರೀಶೈಲ ಯರಗಣವಿ, ಬಿ.ಎಲ್.ಅರಬಾವಿ, ಶ್ರೀಕಾಂತ ಕರಲಿಂಗಪ್ಪನವರ, ಗುರು ವಾಲಿ, ಬಸಲಿಂಗಪ್ಪ ಯರಗಣವಿ, ಶಿವಪ್ಪ ಬಳಿಗೇರ, ಬಸವರಾಜ ಹೂಗಾರ, ಎಫ್.ಬಿ.ಬಾಗವಾನ, ಬಸಯ್ಯ ಹಿರೇಮಠ ಮುಂತಾದವರಿದ್ದರು.