ಬಹು ನಿರೀಕ್ಷೆ ಮೂಡಿಸಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಿಲೀಸ್ಗೆ ಮೂರು ದಿನ ಬಾಕಿ (ಡಿ. 27) ಉಳಿದಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಬರೋಬ್ಬರಿ ಮೂರು ವರ್ಷದ ಬಳಿಕ ನಾರಾಯಣ ದರ್ಶನ ಕೊಡುತ್ತಿದ್ದಾನೆ. ಟೀಸರ್, ಟ್ರೇಲರ್ ಹಾಗೂ 'ಹ್ಯಾಡ್ಸಪ್ ...' ಹಾಡಿಗೆ ಈಗಾಗಲೇ ಜನರಿಂದ ಒಳ್ಳೆ ರೆಸ್ಪಾನ್ಸ್ ಬಂದಿದ್ದು, ಈ ಯಶಸ್ಸಿನ ಹಿಂದೆ ಹಲವಾರು ಕಾನದ ಕೈಗಳು ಕೆಲಸ ಮಾಡಿವೆ. ಹೌದು ಚಿತ್ರದ ಪ್ರತಿಯೊಂದು ಶಾಟ್, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ವಿಎಫ್ಎಕ್ಸ್ ಎಲ್ಲವೂ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿವೆ. ಚಿತ್ರದಲ್ಲಿ ಎರಡು ಸಾವಿರ ವಿಎಫ್ಎಕ್ಸ್ ಶಾಟ್ಸ್ಗಳು ಇವೆಯಂತೆ. ಸಂಗೀತ ನಿರ್ದೇಶಕರಾಗಿ ಚರಣ್ ರಾಜ್ ಹಾಗೂ ಅಜನೀಶ್ ಲೋಕನಾಥ್, ಸಾಹಸ ನಿದರ್ೇಶಕರಾಗಿ ವಿಕ್ರಮ್ ಮೋರ್, ನೃತ್ಯ ಸಂಯೋಜಕರಾಗಿ ಇಮ್ರಾನ್ ಸರ್ಧಾರಿಯಾ ಸೇರಿದಂತೆ ಅನೇಕರು ಕೆಲಸ ಮಾಡಿದ್ದಾರೆ. ಇನ್ನು, ವಿಎಫ್ಎಕ್ಸ್ ಹೊಣೆಯನ್ನು ಸ್ವತಃ ನಿರ್ದೇಶಕ ಸಚಿನ್ ರವಿ ವಹಿಸಿಕೊಂಡಿದ್ದಾರೆ.
ನಾರಾಯಣನಿಗೆ ಅಜನೀಶ್ ಲೋಕನಾಥ್ ಹಾಗೂ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಚರಣ್ ರಾಜ್ ಎರಡು ಹಾಡುಗಳಿಗೆ ರಾಗ ನೀಡಿದರೆ, ಅಜನೀಶ್ ಎರಡು ಹಾಡುಗಳ ಜತೆಗೆ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಪ್ಲೇವರ್ನ ಸಂಗೀತ ಜನಮೆಚ್ಚುಗೆ ಗಳಿಸಿದೆ. ಇನ್ನು ಹ್ಯಾಂಡ್ಸಪ್ ಹಾಡಿನ ಕ್ರೇಜ್ ಎಷ್ಟಿದೆ ಅಂತ ನೋಡಬಹುದು. ವಿದೇಶಿಗರೂ ಸ್ಟೆಪ್ ಹಾಕುತ್ತಿದ್ದಾರೆ. ಇಮ್ರಾನ್ ಸರ್ದಾರಿಯಾ ಸ್ಟೆಪ್ ಕಮಾಲ್ ಮಾಡಿದೆ. 'ಇದು ಫ್ಯಾಂಟಸಿ ಚಿತ್ರ. ವೆಸ್ಟರ್ನ್ ಮಿಕ್ಸ್ ಇರುವ ಪಕ್ಕಾ ಭಾರತೀಯ ಕಥೆ. ಹಾಗಾಗಿ ಮ್ಯೂಸಿಕ್ ಕೂಡ ವಿದೇಶಿ ಪ್ಲೇವರ್ ಜತೆ ಇಂಡಿಯನ್ ಸ್ಟೈಲ್ನಲ್ಲಿ ಇದೆ. ಚಿತ್ರದಲ್ಲಿ ಇನ್ನೊಂದು ಸೆಲೆಬ್ರೇಷನ್ ಸಾಂಗ್ ಇದೆ. 250 ಜ್ಯೂನಿಯರ್ ಡಾನ್ಸರ್, 200 ಜನ ಜ್ಯೂನಿಯರ್ ಆರ್ಟಿಸ್ಟ್ ಕಾಣಿಸಿಕೊಂಡಿದ್ದಾರೆ. ಇದರಲ್ಲೂ ಫನ್ ಇರಬೇಕಿತ್ತು, ಕಥೆ ಹೇಳಬೇಕಿತ್ತು, ಹೀರೋ ಹೀರೊಯಿನ್ಗೆ ಲವ್ ಇದೆ ಅಂತ ಎಸ್ಟಾಬ್ಲಿಶ್ ಮಾಡಬೇಕಿತ್ತು. ಇದೆಲ್ಲಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಾಡನ್ನು ಸೆಟ್ನಲ್ಲಿ ಸಹಜವಾಗಿ ಕಾಣುವಂತೆ ಹಾಕುವುದು ಸುಲಭವಲ್ಲ. ಅದನ್ನೆಲ್ಲಾ ಸೆಟ್ನಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ' ಎಂಬ ಮಾಹಿತಿ ನೀಡುತ್ತದೆ ಚಿತ್ರತಂಡ.
ಇನ್ನು ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಂ ಮೋರ್ 'ಕೆಜಿಎಫ್' ಚಿತ್ರಕ್ಕೂ ಕೆಲಸ ಮಾಡಿದ್ದವರು. 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕಾಗಿ 40 ದಿನಗಳ ಕಾಲ ಫೈಟ್ ದೃಶ್ಯಗಳ ಚಿತ್ರೀಕರಣ ಮಾಡಿದ್ದಾರೆ. ವಿಭಿನ್ನವಾಗಿ ಹೊಸ ರೀತಿಯಲ್ಲಿ ಫೈಟ್ ಸೀಕ್ವೆನ್ಸ್ ಶೂಟ್ ಮಾಡಲಾಗಿದೆ. ಜೊತೆಗೆ ಚಿತ್ರದಲ್ಲಿ ವಿಎಫ್ಎಕ್ಸ್ ಶಾಟ್ಸ್ಗಳನ್ನು ಬಳಸಲಾಗಿದ್ದು, ರಕ್ಷಿತ್ ಶೆಟ್ಟಿ, ನಿರ್ದೇಶಕ ಸಚಿನ್ ವಿಎಫ್ಎಕ್ಸ್ ವಿಭಾಗದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ತೆಲುಗಿನ 'ರಂಗಸ್ಥಲಂ' ಚಿತ್ರಕ್ಕೆ ಕೆಲಸ ಮಾಡಿರುವ ಎಂ.ಆರ್. ರಾಜಾಕೃಷ್ಣನ್ ಈ ಚಿತ್ರಕ್ಕೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿರುವುದು ವಿಶೇಷ. ಕರಮ್ ಚಾವ್ಲಾ ಈ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಅವರು ದಶಕಗಳ ಹಿಂದಿನ ಅಮರಾವತಿಯನ್ನು ತೆರೆ ಮೇಲೆ ಹೊಸ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಅಂದಂಗೆ ಚಿತ್ರದಲ್ಲಿ ಸೆಟ್ಗಳು ಹೈಲೈಟ್ ಆಗಿದ್ದು, ಇದನ್ನು ಡಿಸೈನ್ ಮಾಡಿದ್ದಾರೆ ಕಲಾ ನಿರ್ದೇಶಕ ಉಲ್ಲಾಸ್. ಹಳೆಯ ಕಾಲದ ಕಾಲ್ಪನಿಕ ಅಮರಾವತಿಯನ್ನು ಸೆಟ್ನಲ್ಲಿ ಸೃಷ್ಟಿಸುವುದರಲ್ಲಿ ತಮ್ಮ ಪರಿಣಿತಿಯನ್ನು ತೋರಿಸಿದ್ದಾರೆ. ಕೌವ್ ಬಾಯ್ ಪಬ್, ಕೋಟೆಯ ಹೊರ, ಒಳಂಗಾಣ ವಿನ್ಯಾಸ, ಸುರಂಗಗಳನ್ನು ವಿಶೇಷವಾಗಿ ಕಾಣುವಂತೆ ಮಾಡಿದ್ದಾರೆ. ಅರುಂಧತಿ ಅಂಜನಪ್ಪ 80ರ ದಶಕವನ್ನು ನೆನಪಿಗೆ ತರುವಂತೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಫನ್ ಮತ್ತು ಫ್ಯಾಂಟಸಿ ಸ್ಟೈಲ್ ಅನ್ನು ಬೆರೆಸಿ ವಿಶೇಷವಾಗಿ ಕಾಣುವಂತೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಮೇಕಿಂಗ್ ತುಂಬಾ ಹೊಸ ರೀತಿಯಲ್ಲಿದೆ. ಡಿಫರೆಂಟ್ ಎನ್ನುವ ಪದಕ್ಕೆ ಈ ಟೀಮ್ ಅರ್ಥ ಕೊಟ್ಟಿದ್ದಾರೆ. ಇನ್ನು ಚಿತ್ರವೊಂದು ಜನರಿಗೆ ತಲುಪಲು ಮುಖ್ಯವಾಗಿ ಪೋಸ್ಟರ್ಗಳು ಕಾರಣ ಆಗುತ್ತವೆ. ಅದನ್ನು ಕಾಣಿ ಸ್ಟುಡಿಯೋ ಅಚ್ಚುಕಟ್ಟಾಗಿ ನಿರ್ವಯಿಸುತ್ತಿದೆ. ಉಳಿದಂತೆ ಸ್ಕ್ರೀನ್ ಪ್ಲೇ, ಎಕ್ಸಿಕ್ಯುಷನ್, ಲೈಟಿಂಗ್, ಸೆಟ್, ಮೇಕಿಂಗ್ ಎಲ್ಲವೂ ಚಿತ್ರಕ್ಕೆ ಹೊಸ ರೀತಿಯಲಿ ಫಿಲ್ ಕೊಡಲಿವೆ.