ಸಹಕಾರಿ ಸಂಘಗಳ ಬಲ ಹೆಚ್ಚಿಸಿ: ಸಾಂಗ್ಲಿಕರ

ಲೋಕದರ್ಶನವರದಿ

ಮಹಾಲಿಂಗಪುರ21 : ಪ್ರತಿಯೊಬ್ಬರೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಠೇವಣಿ ಹಾಗೂ ಇತರೆ ವ್ಯವಹಾರ ಮಾಡಿ ಸಹಕಾರಿ ಸಂಘಗಳ ಬಲ ಹೆಚ್ಚಿಸಿ ಎಂದು ಬಾಗಲಕೋಟೆ ಜಿಲ್ಲಾ ಪಂಚಮಸಾಲಿ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ಹೇಳಿದರು.  

     ಸಮೀಪದ ರನ್ನಬೆಳಗಲಿಯ ಬಂದ ಲಕ್ಷ್ಮೀ ದೇವಿ ಸಾಂಸ್ಕೃತಿಕ ಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2018-19 ನೇ ಸಾಲಿನ 75 ನೇ ವಾಷರ್ಿಕ ಸರ್ವ ಸಾಧಾರಣ ಸಭೆಯ ಸಮಾರಂಭದಲ್ಲಿ ಅವರು ಮಾತನಾಡಿದರು .  

ಪಂಡಿತ ಪೂಜಾರಿಯವರು  ಸದಸ್ಯರ ಕುಂದು ಕೊರತೆಗಳ ಬಗ್ಗೆ ಮಾತನಾಡಿ ಅಧ್ಯಕ್ಷರ ಗಮನಕ್ಕೆ ತಂದರು.  

    ಸ್ಥಳೀಯ ಸಿದ್ಧರಾಮ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಿ ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆ ಉದಾಹರಿಸಿ ನಮ್ಮ ಸಹಕಾರಿ ಸಂಘ ಕೋಳಿಯಂತಾಗದೇ ಬಹು ಕಾಲ ಉಳಿಯುವಂತಾಗಲು ಸರ್ವರ ನಿಸ್ವಾರ್ಥ ಸೇವೆ ಅಗತ್ಯ ಎಂದರು.  

     ಸಂಘದ ಅಧ್ಯಕ್ಷ ಮುತ್ತಪ್ಪ ಸಿದ್ದಾಪುರ, ಉಪಾಧ್ಯಕ್ಷ ಸುಭಾಸ್ ಪುರಾಣಿಕ ಸಂಘದ ಕಾರ್ಯಸೂಚಿಯ ಬಗ್ಗೆ ಸುದೀರ್ಘವಾಗಿ ಚಚರ್ಿಸಿ ಮಾತನಾಡಿದರು.  

ದುಂಡಪ್ಪ ಭರಮನಿ, ಲಕ್ಕಪ್ಪ ಹಾರೂಗೇರಿ, ನಿಂಗಪ್ಪ ಆರೇನಾಡ ಮಲ್ಲಪ್ಪ ಸಂಕ್ರಟ್ಟಿ, ವೆಂಕಪ್ಪ ಲಾಲಿಬುಡ್ಡಿ, ಮಹಾದೇವಿ ಕುಂಬಾಳಿ, ಮಹಾದೇವ ಹಳ್ಳೂರ, ಯಮನಪ್ಪ ದೊಡಮನಿ, ಸತ್ಯಪ್ಪ ಬೀಳಗಿ, ಬ್ಯಾಂಕ್ ಪ್ರತಿನಿಧಿ ಶಿಲ್ಪಾ ಬೆಳಗಲಿ ಇತರರು ಇದ್ದರು.  

       ಬಿವಿವಿಎಸ್ ಪ್ರೌಢ ಶಾಲೆಯ ವಿದ್ಯಾಥರ್ಿಗಳು ಪ್ರಾಥರ್ಿಸಿ, ಸಂಘದ ಸಿಬ್ಬಂದಿ ವಿಠ್ಠಲ ಬಿರಾಜನವರ ಸ್ವಾಗತಿಸಿ, ವಂದಿಸಿದರು. ದ್ಯಾವಪ್ಪ ಹಾರೂಗೇರಿ ಮಾಲಾರ್ಪಣೆ ನೆರವೇರಿಸಿದರು .ಸಂಘದ ಮುಖ್ಯ ಕಾರ್ಯದಶರ್ಿ ಬಸವರಾಜ ಹಿಕಡಿ ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ವಾಚನ ಮಾಡಿದರು.  

ರನ್ನಬೆಳಗಲಿ ಪಟ್ಟಣದ ವ್ಯಾಪ್ತಿಯ ಪ್ರೌಢ ಶಾಲೆಗಳ 2018-19 ನೇ ಸಾಲಿನ ಎಸ್ ಎಸ್ ಎಲ್ ಸಿ ವಾಷರ್ಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸ್ಥಳೀಯ ಬಿವಿವಿಎಸ್ ಪ್ರೌಢ ಶಾಲೆಯ ವಿದ್ಯಾಥರ್ಿ ಪ್ರೇಮಾ ಪಂಡಿತ ಪೂಜಾರಿ, ಮೊರಾಜರ್ಿ ದೇಸಾಯಿ ಪ್ರೌಢ ಶಾಲೆಯ ಚೇತನ ಹಿಪ್ಪರಗಿ,  ಜ್ಞಾನ ಗುರುಕುಲ ಬಸವ ಪ್ರೌಢ ಶಾಲೆಯ ಹಷರ್ಿತಾ ಉತ್ತಂಗಿ ಇವರನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು ಮತ್ತು  ದಿ. ಗುರುಪಾದಪ್ಪ ಮಿಜರ್ಿಯವರ ಮರಣೋತ್ತರ ಸಹಾಯ ಧನ ವಿತರಿಸಲಾಯಿತು. ಶಿಕ್ಷಕ ರಾಘವೇಂದ್ರ ನೀಲಣ್ಣವರ ಹಾಗೂ ಶಿಕ್ಷಕ ಕೆ. ಬಿ. ಕುಂಬಾಳಿ ನಿರೂಪಿಸಿದರು.