ರಾಣೇಬೆನ್ನೂರು13: ಬಡವರಿಗಾಗಿ ಶ್ರೀಸಾಮಾನ್ಯರಿಗಾಗಿ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಅವರುಗಳ ಆಥರ್ಿಕ ಮಟ್ಟ ಸುಧಾರಣೆಗೆ ಹೆಚ್ಚಿನ ಒಲವು ನೀಡುತ್ತಿದೆ. ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳೂ ಸಹ ಬಡತನವನ್ನು ನಿಮರ್ೂಲನೆಗೊಳಿಸಿ ಅವರ ಜೀವನ ಮಟ್ಟ ಹೆಚ್ಚಿಸಲು ಸ್ವಯಂ ಉದ್ಯೋಗದ ಮೂಲಕ ಸಾಲ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಹೇಳಿದರು.
ಸೋಮವಾರ ನಗರದ ಪಿ.ಬಿ.ರಸ್ತೆಯ ಎಂ.ಎಂ ಮೋಟಾರ್ಸನ್ ಬಜಾಜ್ ಆಟೋ ಶೋ ರೂಂ ಆಶ್ರಯದಲ್ಲಿ ಸಿಎನ್ಜಿ ಬಂಕ್ನಲ್ಲಿ ಗ್ರಾಹಕರಿಗಾಗಿ ಏರ್ಪಡಿಸಿದ್ದ ಮಾಹಿತಿ ಕಾಯರ್ಾಗಾರ ಮತ್ತು ಪ್ರಯಾಣಿಕರ ನೂತನ ಮಾದರಿ ನಂ1 ಸಿಎನಜಿ ಆಟೋ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತವು ಬಡತನದಿಂದ ಕೂಡಿದ್ದರೂ ಸಹ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ನಿರುದ್ಯೋಗಿ ಯುವಕರಿಗಾಗಿ ಸ್ವಯಂ ಉದ್ಯೋಗ ಕಲ್ಪಿಸಿ ಅವರ ಕುಟುಂಬ ನಿರ್ವಹಣೆಯ ಜವಾಬ್ದಾರಿಗಾಗಿ ಅನೇಕ ರೀತಿಯ ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಸಮಾಜದಲ್ಲಿ ನಿರುದ್ಯೋಗ ಯುವಕರ ಸಂಖ್ಯೆ ಹೆಚ್ಚಿಸುತ್ತಲಿದೆ. ಕಡಿಮೆ ಮತ್ತು ಹೆಚ್ಚು ಓದಿದವರು ಸ್ವಯಂ ಉದ್ಯೋಗ ಹೊಂದಲು ಅನೇಕ ಸೌಲಭ್ಯಗಳು ಖಾಸಗಿ ಮತ್ತು ಸರಕಾರಗಳು ಮಾಡುತ್ತಿವೆ. ಅವುಗಳ ಮಾಹಿತಿ ಪಡೆದು ತಮಗೆ ಅನುಕೂಲತೆಗಳಾಗುವ ಉದ್ಯೋಗ ಕಲ್ಪಿಸಿಕೊಳ್ಳಬೇಕು. ಇದರಿಂದ ನಿರುದ್ಯೋಗದ ಜೊತೆಗೆ ಕುಟುಂಬದ ನಿರ್ವಹಣೆಯೂ ಸರಳವಾಗಿ ಆಗುತ್ತಿದೆ. ಗ್ರಾಹಕರು ಸಿಎನ್ಜಿ ವಾಹನ ಬಳಕೆಯಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದರು.
ಚನ್ನಬಸವರಾಜ ಬಾಳಿಕಾಯಿ ಮಾತನಾಡಿ ಸಿಎನಜಿ ಆಟೋಮೈಲೇಜನಲ್ಲಿ ನಂ1 ಆಗಿದ್ದು, ವಿಶ್ವದಲ್ಲಿಯೇ ಹೆಚ್ಚು ಮಾರಾಟವಾಗುವ ವಾಹನವಾಗಿದೆ, ಸದ್ಯ ಜಗತ್ತಿನಲ್ಲಿಯೇ 65 ಲಕ್ಷಕ್ಕೂ ಅಧಿಕ ತ್ರಿವಿಲರ್ ವಾಹನಗಳನ್ನು ಮಾರಾಟ ಮಾಡಿದ ಕೀತರ್ಿ ಈ ಸಿಎನ್ಜಿ ವಾಹನಕ್ಕಿದೆ ಎಂದರು. ಯುನಿಯನ್ ಬ್ಯಾಂಕ್ ಮ್ಯಾನೇಜರ, ಶರಶ್ಚಂದ್ರ ದೊಡ್ಡಮನಿ, ರಮೇಶ ಜೆ, ಮುರುಗೇಶ ಅಂಗಡಿ, ಇಸ್ಮಾಯಲ್ ಅತ್ತಾರ, ಈಶ್ವರ ಗುಂಡೇರ, ಬಸವರಾಜ ಹುಚ್ಚಗೊಂಡರ, ರಾಜು ಎಂಎಂ, ಎಂಕೆ ಮೊಹಿದ್ದೀನ, ಮಹೇಶ ಹಾವೇರಿ, ಸುಲ್ತಾನ ಕಿಲ್ಲೇದಾರ, ಎಂ.ಕನಗರಾಜ, ಪ್ರಶಾಂತ ಜೋಶಿ, ಆನಂದ ಗುತ್ತಲ, ಕೊಟ್ರೇಶ ಎಮ್ಮಿ ಸೇರಿದಂತೆ ಮತ್ತಿತರರು ಇದ್ದರು.