ಕಬಡ್ಡಿ ಪಂದ್ಯಾವಳಿಯಲ್ಲಿ ಗೆದ್ದು ಕರುನಾಡ ಕೀತರ್ಿ ಹೆಚ್ಚಿಸಿ

ಲೋಕದರ್ಶನ ವರದಿ

ಮಹಾಲಿಂಗಪುರ  : ಜಾರ್ಖಂಡ್ ನಲ್ಲಿ  ನಡೆಯಲಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ಗೆದ್ದು ಕರುನಾಡ ಕೀತರ್ಿ ಹೆಚ್ಚಿಸಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.  

  ಸಮೀಪದ ಕೆಸರಗೊಪ್ಪ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕನರ್ಾಟಕ ರಾಜ್ಯ ಮಹಿಳಾ ಕಬಡ್ಡಿ ತಂಡಕ್ಕೆ ಶುಭ ಕೋರಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಟನೆ,  ಸಂಗೀತ ಮುಂತಾದ ಕ್ಷೇತ್ರಗಳ ಉನ್ನತ ತರಬೇತಿಗಾಗಿ ಉತ್ತರ ಕನರ್ಾಟಕದ ಕಲಾವಿದರು ದಕ್ಷಿಣ ಕನರ್ಾಟಕಕ್ಕೆ ಹೋಗುತ್ತಾರೆ. ಆದರೆ ಇಂದು ದಕ್ಷಿಣ ಕನರ್ಾಟಕದ ಮೈಸೂರು, ಮಂಡ್ಯ, ಶಿವಮೊಗ್ಗ ಮುಂತಾದ ಜಿಲ್ಲೆಗಳಿಂದ ಕನರ್ಾಟಕ ತಂಡಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಡಾ. ಸಿ. ಹೊನ್ನಪ್ಪ ಅಕಾಡೆಮಿ ಕೆಸರಗೊಪ್ಪದ ಹಾಗೂ ಬಾಗಲಕೋಟೆ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಧರೆಪ್ಪ ಬ್ಯಾಕೋಡ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವುದು ನಮ್ಮ ಉತ್ತರ ಕನರ್ಾಟಕದ ಹೆಮ್ಮೆ ಎಂದರು.  

       ಡಿವೈಎಸ್ಪಿ ಅಶೋಕ ಪೂಜಾರಿ ಮಾತನಾಡಿ ಅತ್ಯಂತ ಶ್ರದ್ಧೆ ಮತ್ತು ಶ್ರಮದಿಂದ ಮಾತ್ರ ಸಾಧನೆ ಸಾಧ್ಯ,  ಅದೇ ಮುಂದೆ ಸಿಹಿ ನೆನಪಾಗಿ ಉಳಿಯುತ್ತವೆ ಆದ್ದರಿಂದ ಬಾಲ್ಯದಲ್ಲಿ ಗುರು ಹಿರಿಯರಿಗೆ ವಿನೀತರಾಗಿ ಉನ್ನತವಾದದ್ದನ್ನು ಸಾಧಿಸಿ ಎಂದರು.  

         ಉಪವಿಭಾಗಾಧಿಕಾರಿ ಮಾರುತಿ ಬ್ಯಾಕೋಡ ಮಾತನಾಡಿ ಶಕ್ತಿ ಮತ್ತು ಬುದ್ಧಿವಂತಿಕೆ ಎರಡನ್ನೂ ಯಾವಾಗ ಹೇಗೆ ಬಳಸಬೇಕು ಎನ್ನುವ ಚಾಣಾಕ್ಷತೆಯೇ ಗೆಲುವಿನ ಗುಟ್ಟು,  ಅದನ್ನು ಸಮರ್ಥವಾಗಿ ಉಪಯೋಗಿಸಿ ಜೀವನದಲ್ಲಿ ಗೆಲ್ಲಿ ಎಂದು ಶುಭ ಹಾರೈಸಿದರು.  

       ಜಾರ್ಖಂಡ್ ನಲ್ಲಿ ನಡೆಯಲಿರುವ 19 ವರ್ಷದೊಳಗಿನ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಕನರ್ಾಟಕ ತಂಡವನ್ನು ಡಾ.  ಸಿ. ಹೊನ್ನಪ್ಪ ಕಬ್ಬಡ್ಡಿ ಅಕಾಡೆಮಿ ಕೆಸರಗೊಪ್ಪ ವತಿಯಿಂದ ಬಾಗಲಕೋಟೆ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಧರೆಪ್ಪ ಬ್ಯಾಕೋಡ ಇವರ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತಿದೆ.  

     ನೂತನವಾಗಿ ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿರುವ ಮಾರುತಿ ಬ್ಯಾಕೋಡ, ಡಿವೈಎಸ್ಪಿಯಾಗಿ ಆಯ್ಕೆಯಾಗಿರುವ ಅಶೋಕ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.   ಶಿಕ್ಷಕ ಹನಮಂತ ಬ್ಯಾಕೋಡ ನಿರೂಪಿಸಿದರು. 

     ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಶಿರೋಳ, ತೇರದಾಳ ಮತ ಕ್ಷೇತ್ರದ ಬಿಜೆಪಿ ಮುಖಂಡ ಆನಂದ ಕಂಪು, ಚಿಮ್ಮಡ ಗ್ರಾಪಂ ಸದಸ್ಯ ಹುಲೆಪ್ಪ ಬ್ಯಾಕೋಡ, ಹಾವೇರಿ ಜಿಲ್ಲಾ ಕಾರ್ಯದಶರ್ಿ ಯಲ್ಲಪ್ಪ,ಫಕ್ಕೀರೇಶ, ಶಂಕರ, ಮಾಜಿ ಸೈನಿಕ ಕೃಷ್ಣಾ ಮಾದರ,  ಪ್ರೀತಮ್ ಶೆಟ್ಟಿ, ಸೂರತ್, ಮಲ್ಲು ಪೂಜಾರಿ, ಶಿವಾನಂದ ಕಸ್ತೂರಿ, ಎನ್ಐಸಿ ತರಬೇತುದಾರರಾದ ರೂಪಶ್ರೀ, ಭಾಷಾ ನದಾಫ್, ಶಿಕ್ಷಕ ಹನಮಂತ ಬ್ಯಾಕೋಡ, ನಿಣರ್ಾಯಕ ಸಿ. ಎಸ್. ಹರಳಹಳ್ಳಿ ಇತರರು ಇದ್ದರು.