ಹುನಗುಂದ 17: ಜಾನಪದ ಸಾಹಿತ್ಯದಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿ ಗಳು ಸಂಸ್ಕಾರವಂತರಾಗಬೇಕೆಂದು ಖ್ಯಾತ ಜಾನಪದ ಸಾಹಿತಿಗಳು ಹಾಗೂ ಗಾಯಕರಾದ ಶ್ರೀಕಾಂತ ಕೆಂಧೂಳಿಯವರು ಹೇಳಿದರು.
ಸ್ಥಳೀಯ ವ್ಹಿ.ಎಂ.ಕೆ.ಎಸ್.ಆರ್. ವಸ್ತ್ರದ ಕಲಾ,ವಿಜ್ಞಾನ ಹಾಗೂ ವ್ಹಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲದಲ್ಲಿ ಪರಂಪರೆಕೂಟ, ಐಕ್ಯೂಎಸಿ ಘಟಕ ಕರ್ನಾಟಕ ಸರಕಾರದ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ 'ಭಾರತೀಯ ಪರಂಪರೆ ಹಾಗೂ ಯುವ ಜನತೆ' ಎಂಬ ವಿಷಯದ ಮೇಲೆ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಮ್ಮ ಭಾರತ ದೇಶ ವಿವಿಧ ಧರ್ಮ, ಸಂಸ್ಕೃತಿ ಭಾಷೆಗಳನ್ನು ಹೊಂದಿದು,್ದ ಏಕತೆಯನ್ನು ಮೈಗೂಡಿಸಿ ಕೊಂಡಿದೆ. ಪಾಶ್ಯಾತ್ಯ ಸಂಸ್ಕೃತಿಗೆ ಮಾರು ಹೋಗಿ ಅಮೂಲ್ಯವಾದ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅನೇಕ ಜಾನಪದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಶ್ರೀ ಸಲೀಂ ಅವರು ತಬಲಾ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಅವರನ್ನು ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.
ವಿ.ಮ.ವಿ.ವ ಸಂಘದ ನಿರ್ದೇಶಕರಾದ ಡಾ.ಮಲ್ಲಣ್ಣ ನಾಗರಾಳ ಅವರುಮಾತನಾಡಿ ತಂತ್ರಜ್ಞಾನದ ಭರಾಟೆಯಲ್ಲಿ ಜಾನಪದ ಸಾಹಿತ್ಯವು ಸೊರಗುತ್ತಿದೆ ಎಂದು ವಿಷಾದಿಸಿದರು. ನಾಡಿನ ವಿದ್ಯಾಂಸರು ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕು ಎಂದು ಹೇಳಿದರು. ಅನೇಕ ಜಾನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳ ಮನಸ್ಸನ್ನು ಸೂರೆಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿ.ಮ.ವಿ.ವ ಸಂಘದ ನಿರ್ದೇಶಕರಾದ ಶ್ರೀ ಎಂ.ಎನ್. ತೆನಿಹಳ್ಳಿಯವರು ಜಾನಪದ ಸಾಹಿತ್ಯವು ಅಕ್ಷರ ಕಲಿತವರಿಂದ ನಿರ್ಮಾಣ ಗೊಂಡಿದ್ದಲ್ಲ ಆದರೆ ಅದು ಅನಕ್ಷರಸ್ತ ಜನಪದರ ಅನುಭವಗಳ ಮೂಶೆಗಳಿಂದ ಹೊರಬಂದ ಮಾತೃ ಸ್ವರೂಪಿ ಸುಂದರ ಸಾಹಿತ್ಯವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಜನ್ಮಕೊಟ್ಟ ತಂದೆ ತಾಯಿಗಳನ್ನು ಮತ್ತು ಸಂಸ್ಕಾರ ಕೊಟ್ಟ ಶಿಕ್ಷಕರನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಶಶಿಕಲಾ ಮಠ ಅವರು ಮಾತನಾಡುತ್ತಾ ಭಾರತವು ಭವ್ಯ ಪರಂಪರೆಯನ್ನು ಹೊಂದಿದ್ದು ಪ್ರಾಚೀನ ದೇವಾಲಯಗಳು, ಹಬ್ಬಗಳು, ಜಾತ್ರೆಗಳು, ಉತ್ಸವಗಳು ಕೇವಲ ಕಧಾರ್ಮಿಕ ಸಂಪ್ರದಾಯಗಳನ್ನು ಬೆಳೆಸುವುದಿಲ್ಲ ಮಾನವೀಯ ಮೌಲ್ಯಗಳನ್ನು, ಸೌಹಾರ್ಧತೆ, ಭಾವೈಕ್ಯತೆಯನ್ನು ಬಿಂಬಿಸುವ ಆಚರಣೆಗಳು ಮತ್ತು ಸ್ಮಾರಕಗಳಾಗಿವೆ ಎಂದು ಹೇಳುತ್ತಾ ಪರಂಪರಾ ಕೂಟದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಕು.ಪವಿತ್ರಾ ಕಿರೇಸೂರ ಜಾನಪದ ಗೀತೆ ಹಾಡಿದರು. ಪ್ರೊ.ಆರ್.ಎಂ.ಕುಲಕರ್ಣಿ , ಪರಂಪರಾ ಕೂಟದ ಸಂಚಾಲಕರಾದ ಪ್ರೊ.ಎಸ್.ಆರ್. ನಾಗಣ್ಣವರ ಹಾಗೂ ವಿದ್ಯಾಥರ್ಿ ಪ್ರತಿನಿಧಿ ರೋಹಿತ ಕಂಠಿ ಉಪಸ್ಥಿತರಿದ್ದರು.
ಕು. ಇಂದಿರಾ ದೇಶಪಾಂಡೆ ಸ್ವಾಗತಿಸಿದರು. ಕು. ಸರೋಜಾ ವಾಲೀಕಾರ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು. ವೈಷ್ಣವಿ ರಾಮವಾಡಗಿ ಅತಿಥಿಗಳನ್ನು ಪರಿಯಿಸಿದರು. ಕು.ಮಲ್ಲಮ್ಮ ಗಡದ ವಂದಿಸಿದರು. ಕು. ಶಕುಂತಲಾ ಸಂಗಮ ಹಾಗೂ ಕು. ಶರಣಪ್ಪ ಪರಸಾಪೂರ ಕಾರ್ಯಕ್ರಮ ನಿರೂಪಿಸಿದರು.