ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಡಾ. ಅಶೋಕ

ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಕಲಿಕೆ ಅಗತ್ಯವಾಗಿದ್ದು ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಡಾ. ಅಶೋಕ ಡಿಸೋಝಾ ಹೇಳಿದರು. 

ಅವರು ಇಲ್ಲಿನ ಭರತೇಶ ಬಿಬಿಎ ಕಾಲೇಜಿನ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕರ ವೇದಿಕೆ ಆಯೋಜಿಸಿದ್ದ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಂಗ್ಲಿಷ್ ಬೋಧನೆಯ ಮಹತ್ವ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಜಿ.ಕೆ. ಬಡಿಗೇರ ಮಾತನಾಡಿ, ಆಧುನಿಕ ಹತ್ತು ಹಲವು ತಂತ್ರಜ್ಞಾನಗಳನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾಥರ್ಿಗಳು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿರುವುದರಿಂದ ಉಪನ್ಯಾಸಕರು ಅವರವರ ಅಭಿರುಚಿ, ಕಲಿಕಾ ಸಾಮಥ್ರ್ಯಗಳನ್ನು ಅಳೆದು ಬೋಧನೆ ಮಾಡಬೇಕು ಎಂದರು. 

ಪ್ರೊ.ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಶಾಂತ ಕಾಂಬಳೆ,  ಪ್ರೊ.ಎಸ್.ಬಿ. ಖೋತ್, ಪ್ರೊ.ಎಂ.ಸಿ.ಕಾರಬಾರಿ, ಡಾ.ಎಂ.ಎಂ. ಹುರಳಿ, ರವಿ ಹಾವಿನಾಳೆ, ರಾಜು ಶೇಗುಣಸಿ, ಎಲ್ಲ ಇಂಗ್ಲಿಷ್ ಉಪನ್ಯಾಸಕರು ಉಪಸ್ಥಿತರಿದ್ದರು. 

ವಿ.ಎಂ.ತಿಲರ್ಾಪುರ ಸ್ವಾಗತಿಸಿದರು. ಪ್ರೊ.ಮೆಹಬೂಬ್ ಪ್ರಾಥರ್ಿಸಿದರು. ಡಾ.ಜ್ಯೋತಿ ಯಮಕನಮರಡಿ ನಿರೂಪಿಸಿದರು. ಬಿ.ಎನ್.ಶಾಡದಳ್ಳಿ ವಂದಿಸಿದರು.