ರೈತರು ಆರ್ಥಿಕ ಪ್ರಗತಿಗೆ ಕೃಷಿಯ ಜೊತೆಗೆ ಹೈನುಗಾರಿಕೆ ಅಳವಡಿಸಿಕೊಳ್ಳಿ

ಲೋಕದರ್ಶನವರದಿ

ರಾಣೇಬೆನ್ನೂರು30: ಹೈನುಗಾರಿಕೆ ಕೃಷಿಗೆ ಪೂರಕವಾಗಿದೆ. ರೈತರು ಕೃಷಿಯ ಜೊತೆಗೆ ವೈಜ್ಞಾನಿಕ ರೀತಿಯಲ್ಲಿ ಹೈನುಗಾರಿಕೆ ನಡೆಸಿದರೆ ಉತ್ತಮ ಲಾಭ ಪಡೆದು ಆಥರ್ಿಕ ಅಭಿವೃದ್ಧಿ ಹೊಂದಬಹುದು ಎಂದು ಶಾಸಕ ಅರುಣಕುಮಾರ  ಪೂಜಾರ ಹೇಳಿದರು.

  ತಾಲ್ಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿ ಗುರುವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕುಮಾರಪಟ್ಟಣಂ ಗ್ರಾಸಿಂ ಇಂಡಸ್ಟ್ರೀಸ್ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  ಮಿಶ್ರತಳಿ ಮತ್ತು ದೇಶಿ ಹಸುಗಳು, ಎಮ್ಮೆಗಳು, ಮಣಕಗಳು ಹಾಗೂ ಕರುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದಲ್ಲಿ ಹೊಸ ಪಶು ಚಿಕಿತ್ಸಾಲಯ ತೆರೆಯಲು ಅಗತ್ಯ ಪ್ರಸ್ತಾವ ಸಿದ್ಧಪಡಿಸಿರಿ, ಇಲಾಖೆ ಸಚಿವರನ್ನು ಭೇಟಿ ಮಾಡಿ ಪಶು ಚಿಕಿತ್ಸಾಲಯ ಮಂಜೂರಾತಿಗೆ ಪ್ರಯತ್ನಿಸುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

  ಸಹಾಯಕ ನಿದರ್ೆಶಕ ಡಾ.ಬಸವರಾಜ ಡಿ.ಸಿ. ಮಾತನಾಡಿ, ಹೈನುಗಾರಿಕೆ ಹಾಗೂ ಕೃಷಿಗೆ ಪರಸ್ಪರ ಅವಲಂಬನೆ ಇದೆ. ಹೈನುಗಾರಿಕೆಯನ್ನು ಉಪಕಸುಬು ಮಾಡಿಕೊಂಡರೆ ಆಥರ್ಿಕ ಸಬಲತೆ ಕಾಣಬಹುದು. ಪಶುಪಾಲನಾ  ಇಲಾಖೆ ಸಿಬ್ಬಂದಿ ಕೊರತೆಯ ನಡುವೆಯೂ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಗ್ರಾಮದಲ್ಲಿ ಮಿಶ್ರತಳಿ ರಾಸುಗಳ ಸಂಖ್ಯೆ ಹೆಚ್ಚಿದ್ದು, ನೂತನ ಪಶು ಚಿಕಿತ್ಸಾಲಯ ತೆರೆಯಲು ಪ್ರಸ್ತಾವ ಸಲ್ಲಿಸಬೇಕೆಂದು ಶಾಸಕರು ಸೂಚಿಸಿದ್ದಾರೆ. ಪಶು  ಚಿಕಿತ್ಸಾಯಕ್ಕೆ 10 ಗುಂಟೆ ನಿವೇಶನ ನೀಡುವ ಬಗ್ಗೆ ಗ್ರಾಮ ಪಂಚಾಯ್ತಿ ಠರಾವು ಹಾಗೂ ನಿವೇಶನದ ಉತಾರ ನೀಡಿದರೆ ತಕ್ಷಣ ಸಕರ್ಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

  ಪಶುವೈದ್ಯಾಧಿಕಾರಿ ಡಾ.ನೀಲಕಂಠ ಅಂಗಡಿ ಮಾತನಾಡಿ, ಗ್ರಾಮವು ನದಿ ತೀರದ ಪ್ರದೇಶವಾಗಿರುವುದರಿಂದ ಹೈನುಗಾರಿಕೆಗೆ ಸಾಕಷ್ಟು ಅನುಕೂಲಗಳಿವೆ. ಭೂಮಿಯ ಫಲವತ್ತತೆಗೆ ಜೈವಿಕ ಗೊಬ್ಬರ ಅಗತ್ಯ. ಜಾನುವಾರುಗಳ  ಸೆಗಣಿಯಿಂದ ಉತ್ತಮ ಗೊಬ್ಬರ ದೊರಕಿ ಭೂಮಿಯ ಫಲವತ್ತತೆ ಹೆಚ್ಚಾಗಿ ಇಳುವರಿ ಹೆಚ್ಚುತ್ತದೆ. ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು. 

ಕರುಗಳ ಪೋಷಣೆ ನಿರ್ಲಕ್ಷ್ಯ ಮಾಡದೇ ಪೋಷಕಾಂಶ, ಆಹಾರ ನೀಡಿದಾಗ ಅವು ಬೆಳೆದು ಫಲಕ್ಕೆ ಬಂದಾಗ ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದರು.

  ಪಶು ವೈದ್ಯಾಧಿಕಾರಿ ಡಾ.ರಾಘವೇಂದ್ರ ಕಿತ್ತೂರ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗುತ್ತೆಮ್ಮ ಕೋಲಕಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ, ತಾಪಂ ಅಧ್ಯಕ್ಷೆ ಗೀತಾ ವಸಂತ ಲಮಾಣಿ, ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ತಾ.ಪಂ. ಉಪಾಧ್ಯಕ್ಷೆ ಕಸ್ತೂರಮ್ಮ ಹೊನ್ನಳ್ಳಿ, ಲಕ್ಷ್ಮಪ್ಪ ಮೇಗಳಮನಿ, ಶೀಲಾ ಕುರುಬರ, ಚಂದ್ರಪ್ಪ ಬೇಡರ, ಮಂಜಪ್ಪ ಆನ್ವೇರಿ, ದ್ರಾಕ್ಷಾಯಣಮ್ಮ ಬುಳ್ಳನಗೌಡ್ರ, ಕೆಂಚಮ್ಮ ನಲವಾಗಲ,  ಹನುಮಗೌಡ ಕೋಟೆಗೌಡ್ರ, ರಾಜುಗೌಡ ಚನ್ನಗೌಡ್ರ, ಹೊನ್ನಪ್ಪ ಬೇಡರ, ವೀರನಗೌಡ ಪಾಟೀಲ, ಗಂಗಾಧರ ಬೂದನೂರ, ಚನ್ನಗೌಡ ಕೂನಬೇವು, ದಿನೇಶ ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

     ನಿಣರ್ಾಯಕರಾಗಿ ತಜ್ಞ ಪಶುವೈದ್ಯರಾದ ಡಾ.ಕಿರಣ ಎಲ್., ಡಾ.ನಾಗರಾಜ ಕೂನಬೇವು, ಡಾ.ಉಮೇಶ ಕವಲಿ, ಡಾ.ರವಿ ದಾಸರ, ಡಾ.ಸುಮಂತಕುಮಾರ ಬಿ.ಕೆ., ಡಾ.ಉಮೇಶ ಹೊನ್ನತ್ತಿ, ಡಾ.ಮಹೇಶ ಸವಣೂರ,  ಡಾ.ಮಂಜುನಾಥ ಗಂಗಿಮಾಳಮ್ಮನವರ, ಡಾ.ಕವಿರಾಜ ಐರಣಿ, ಡಾ.ಬಾಲಾಜಿ ಟಿ., ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಎಚ್.ಆರ್.ನಾಯಕ, ಲಕ್ಷ್ಮಣ, ರವಿ ನಾಯಕ, ಕುಮಾರ ಬಿ.ವಿ., ಬಲರಾಮ, ಎಸ್.ಜೆ.ಜಡಿಮಠ,  ಎನ್.ಎಸ್.ಹೀಲದಹಳ್ಳಿ, ಮಾರುತಿ ಕೊಪ್ಪದ, ಮಲ್ಲೇಶ ತೋಟದ, ಅರುಣ ಕಂಬಳಿ ಉಪಸ್ಥಿತರಿದ್ದರು.