ಆದಾಯ ತೆರಿಗೆ ಇಲಾಖೆಯಿಂದ ಕಾರ್ಯಾಗಾರ

ಲೋಕದರ್ಶನ ವರದಿ

ಕೊಪ್ಪಳ 01: ನಗರದ ಶ್ರೀಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ ಅಡಿಯಲ್ಲಿ ಬರುವ ಶಾರದಮ್ಮ ವ್ಹಿ.ಕೊತಬಾಳ ಬಿ.ಬಿ.ಎ, ಬಿ.ಸಿ.ಎ ಮತ್ತು ಬಿ. ಕಾಂ ಪದವಿ ಮಹಾವಿದ್ಯಾಲಯದಲ್ಲಿ ದಿ. 31ರಂದು ಬೆಳಿಗ್ಗೆ 10.30ಕ್ಕೆ  ಆದಾಯ ತೆರಿಗೆ ಇಲಾಖೆ ಕೊಪ್ಪಳ ಇವರು "ನಾಗರಿಕರು ಆದಾಯ ತೆರಿಗೆ ತುಂಬುವದರಿಂದ ಆಗುವ ಲಾಭಗಳು" ಎನ್ನುವ ವಿಷಯದ ಕುರಿತು ಒಂದು ದಿನದ ಕಾರ್ಯಗಾರ ನಡೆಸಿಕೊಟ್ಟರು.

ಮುಖ್ಯ ಅಥಿತಿಗಳಾಗಿ ಬಳ್ಳಾರಿ ವಿಭಾಗದ ಡೆಪ್ಯೂಟೀ ಐ.ಟಿ ಕಮಿಷನರ್ ಆದ ರತ್ನಾಕರ್ ನಾಯಕ್ ಇವರು ದೀಪ ಬೆಳಗಿಸುವದರ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಆದಾಯ ತೆರಿಗೆಯನ್ನು ಕಟ್ಟಿ ನಾವೆಲ್ಲಾ ಈ ದೇಶವನ್ನು ಹೇಗೆ ಸಬಲ ಹಾಗೂ ಸದೃಢಗೊಳಿಸಬೇಕೆಂದು ಸಮಗ್ರವಾಗಿ ವಿವರಣೆ ನೀಡಿದರು.  ಮುಂದುವರೆದು ವಿದ್ಯಾರ್ಥಿಗಳಿಗೆ ಇಂದಿನ ಯುವಕರೇ ನಾಳಿನ ದೇಶದ ಶಕ್ತಿ. ನೀವುಗಳು ಈಗಿಂದಲೇ ದೇಶಕ್ಕೆ ಸರಿಯಾಗಿ ತೆರಿಗೆ ಕಟ್ಟುವ ಹಾಗೂ ಅದನ್ನು ರೂಢಿಸಿಕೊಳ್ಳುವ ಮನಸ್ಥಿತಿಯನ್ನು ಹೊಂದಬೇಕು. ಇದರಿಂದ ದೇಶವು ಆರ್ಥಿಕವಾಗಿ ಸಬಲವಾಗಬಲ್ಲದೆಂದರು.  ಇದಲ್ಲದೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ತಯಾರಿ ಮಾಡಿಕೊಳ್ಳಬೇಕು ಎನ್ನುವುದರ ಕುರಿತು ಮಾರ್ಗದರ್ಶನ ಸಹ ನೀಡಿದರು. 

ಮತ್ತೋರ್ವ ಅತಿಥಿಯಾದ ಹೊಸಪೇಟೆಯ ಐ.ಟಿ ಆಫಿಸರ್ ಡಿ ಪಾಂಡುರಂಗ ಇವರು ತೆರಿಗೆಯನ್ನು ಹೇಗೆ ತುಂಬುವುದು ಮತ್ತು ಏನೆಲ್ಲಾ ನಿಯಮಾವಳಿಗಳನ್ನು ಪಾಲಿಸುವದನ್ನು ವಿದ್ಯಾಥಿಗಳಿಗೆ ತಿಳಿಸಿಕೊಟ್ಟರು. ಮತ್ತು ಕೊಪ್ಪಳ ವಿಭಾಗದ ಐ.ಟಿ ಆಫಿಸರ್ ಆದ ಹೆ.ಚ್ ಎಸ್ ಗುರುನಾಥ ಇವರು ಸಹ ಮಾತನಾಡಿ ತೆರಿಗೆ ತುಂಬುವದರಿಂದ ಸರ್ಕಾರಕ್ಕೆ ಆಗುವ ಆಥರ್ಿಕಲಾಭ ಮತ್ತು ಅದರಿಂದ ಸರ್ಕಾರವು ಮರಳಿ ಸಮಾಜದ ಏಳಿಗೆಗಾಗಿ ಕೊಡುವ ಲಾಭದ ಕುರಿತು ತಿಳಿಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಸಂಜಯ್ ವಿ ಕೊತಬಾಳ ವಹಿಸಿ ಮಾತನಾಡಿದರು. 

ಈ ಸಮಾರಂಭದಲ್ಲಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ರಾಜರಾಜೇಶ್ವರರಾವ್, ಹಾಗು ಎಲ್ಲ ಸಿಬ್ಬಂದಿಗಳು, ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.