ಆದಾಯ ತೆರಿಗೆ: ನಿಗದಿತ ಸಮಯಕ್ಕೆ ಪಾವತಿ ಮುಖ್ಯ

ಗದಗ  23:  ದೇಶದ  ಪ್ರತಿಯೊಬ್ಬ  ವ್ಯಕ್ತಿಯ   ಆದಾಯದ  ಮೇಲೆ  ಕೇಂದ್ರ  ಸರ್ಕಾರವು ವಿಧಿಸುವ ತೆರಿಗೆಯೇ ಆದಾಯ ತೆರಿಗೆಯಾಗಿದೆ  ಎಂದು  ಗದಗ ಜಿಲ್ಲಾಧಿಕಾರಿ  ಎಂ.ಜಿ. ಹಿರೇಮಠ ಅವರು ಮಾತನಾಡಿದರು.

ನಿಗದಿತ ಸಮಯದೊಳಗೆ ಆದಾಯ ತೆರಿಗೆ  ಪಾವತಿ ಮಾಡುವುದು  ಪ್ರತಿಯೊಬ್ಬರ   ಕರ್ತವ್ಯವಾಗಿದೆ.  ಸರ್ಕಾರಿ  ಅಧಿಕಾರಿಗಳ, ಸಿಬ್ಬಂದಿಗಳ  ವೇತನ ಪಾವತಿ ಸಂದರ್ಭದಲ್ಲಿ  ಎಲ್ಲ ಹಣ ಸೆಳೆಯುವ ಅಧಿಕಾರಿಗಳಿಗೆ,    ಲೆಕ್ಕಾಧಿಕಾರಿಗಳಿಗೆ, ವಿಷಯ ನಿರ್ವಾಹಕರುಗಳಿಗೆ  ತಮ್ಮ ಕರ್ತವ್ಯ ನಿರ್ವಹಣೆ ಕುರಿತಂತೆ  ಈ ಕಾರ್ಯಾಗಾರವು ಉಪಯುಕ್ತವಿದ್ದು  ಏನಾದರೂ  ಸಮಸ್ಯೆಗಳಿದ್ದಲ್ಲಿ  ಪರಿಹರಿಸಿಕೊಳ್ಳಬಹುದಾಗಿದೆ ಎಂದು   ಜಿಲ್ಲಾಧಿಕಾರಿಗಳು  ತಿಳಿಸಿದರು.    

ಗದಗ  ಜಿಲ್ಲಾಡಳಿತ ಭವನದ  ಮುಖ್ಯ ಸಭಾಂಗಣದಲ್ಲಿಂದು  ಆದಾಯ ತೆರಿಗೆ ಇಲಾಖೆಯ  ಹುಬ್ಬಳ್ಳಿ ಕಚೇರಿ  ಆಯೋಜಿಸಿದ  ಕಾರ್ಯಾಗಾರವನ್ನು   ಉದ್ದೇಶಿಸಿ ಅವರು  ಮಾತನಾಡಿದರು. 

ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ  ಆರ್.ಬಿ. ಬಲವಡೆಯವರು ಮಾತನಾಡಿ     ಸರ್ಕಾರವು  ಹಲವಾರು ಅಭಿವೃದ್ಧಿ ಕಾರ್ಯ ಹಾಗೂ ಇತರ ಉದ್ದೇಶಗಳಿಗೆ   ಆದಾಯ ತರುವ    ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ  ತೆರಿಗೆಯನ್ನು ಸಂಗ್ರಹಿಸುತ್ತದೆ.  ಆದಾಯ ತೆರಿಗೆ  ಸಂಬಂಧಿಸಿದಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳ ವೇತನದಲ್ಲಿ  ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಎಟ್ ಸೋರ್ಸ)  ಕುರಿತು  ಜಾಗೃತಿ ಮೂಡಿಸುವುದೇ ಈ ಕಾಯರ್ಾಗಾರದ ಉದ್ದೇಶವಾಗಿದೆ ಎಂದರು. 

ಸಹಾಯಕ  ತೆರಿಗೆ ಆಯುಕ್ತ ಮನೀಶ ಕಸೋಡೆಕರ್   ಟಿಡಿಎಸ್   ಸಕರ್ಾರಕ್ಕೆ   ಸುಧಾರಿತ ಹಣದ ಹರಿವು ಕಲ್ಪಿಸುತ್ತದೆ ಹಾಗೂ ತೆರಿಗೆ ನಿವ್ವಳ  ವಿಸ್ತರಣೆಗೆ ಸಹಾಯವಾಗುತ್ತದೆ ಎಂದು   ತೆರಿಗೆ  ಕಟಾವಣೆ ಕುರಿತು ವಿವರಣೆ ನೀಡಿದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ,  ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿದರ್ೇಶಕ ರುದ್ರೇಶ  ಎಸ್.ಎನ್,   ಆದಾಯ ತೆರಿಗೆ ಇಲಾಖೆಯ   ಪಿ.ಎಲ್. ಕುಂದಾಪುರ,  ವಿವಿಧ ಇಲಾಖೆಯ  ಬಟವಾಡೆ ಅಧಿಕಾರಿಗಳು,  ಲೆಕ್ಕ ಅಧಿಕಾರಿಗಳು, ವ್ಯವಸ್ಥಾಪಕರು, ಲೆಕ್ಕ ವಿಷಯ ನಿರ್ವಾಹಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.