ಲೋಕದರ್ಶನ ವರದಿ
ರಾಣೇಬೆನ್ನೂರು24: ಬೆಳಗಾವಿ ಜಿಲ್ಲಾ ಸವದತ್ತಿ ತಾಲೂಕ ಇಚಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದಲ್ಲಿ ಜ.26 ರಿಂದ ಜ.31 ವರೆಗೆ ನಡೆಯಲಲಿರುವ ಮಹಾರಥೋತ್ಸವದ ಅಂಗವಾಗಿ ಸೇವಾರ್ಥವಾಗಿ ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾಶ್ರಮದ ಗುರು ನಾಗರಾಜಾನಂದ ಸ್ವಾಮಿಜಿಗಳು ಸಹಸ್ರಾರು ಭಕ್ತರೊಂದಿಗೆ ಜ.26 ರಂದು ಶ್ರೀ ಮಠದಿಂದ ತೆರಳಲಿದ್ದಾರೆ.
ಇಚಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಶ್ರೀಮಠದ ಪೀಠಾಧಿಪತಿ ಡಾ. ಶಿವಾನಂದಭಾರತಿ ಸ್ವಾಮಿಜಿಗಳವರ 80 ನೇಯ ವರ್ಷದ ಹುಟ್ಟು ಹಬ್ಬ, 50ನೇಯ ವರ್ಷದ ಪೀಠಾರೋಹಣ, ಅಖಿಲ ಭಾರತ ವೇದಾಂತ್ ಪರಿಷತ್ ಸುವರ್ಣಮಹೋತ್ಸವ, ಅಮೃತ ಶಿಲೆಯಲ್ಲಿ ನಿಮರ್ಿಸಿರುವ ಶ್ರೀ ಅಂಬಾ ಪರಮೇಶ್ವರಿ ಮಂದಿರ ಉದ್ಘಾಟನೆ, ಈ ಎಲ್ಲ ಕಾರ್ಯಕ್ರಮಗಳ ಮತ್ತು ಗುರು ಹರ ಚರಮೂರ್ತಿ ಗಳ ಸೇವೆ ಸಲ್ಲಿಸಲು ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ದಾಶ್ರಮದ ಗುರು ನಾಗರಾಜಾನಂದ ಸ್ವಾಮಿಜಿಗಳು ಸಹಸ್ರಾರು ಭಕ್ತರೊಂದಿಗೆ ಜ.26 ರಂದು ಶ್ರೀ ಮಠದಿಂದ ತೆರಳಲಿದ್ದಾರೆ.
ಆದಕಾರಣ ಸರ್ವಭಕ್ತರು ಗುರು ಸೇವೆ ಹಾಗೂ ಗುರು ದರ್ಶನ ಪಡೆದು ಹಿಂದಿನ ಜನ್ಮದ ಕರ್ಮಗಳ ಪರಿಹಾರ ಪಡೆಯಲು ಭಾಗವಹಿಸಿ ಗುರು ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.