ಕನರ್ಾಟಕ ನಿಯತ್ ಪಕ್ಷದ ಕಾಯರ್ಾಲಯ ಉದ್ಘಾಟನೆ

ನೂತನ ಕನರ್ಾಟಕ ನಿಯತ್ ಪಕ್ಷವನ್ನು ಪಕ್ಷದ ಅಧ್ಯಕ್ಷ ಚಂದ್ರಶೇಖರಯ್ಯ ಕುಲಕಣರ್ಿ ಉದ್ಘಾಟಿಸಿದರು.

ಲೋಕದರ್ಶನ ವರದಿ

ರಾಣಿಬೆನ್ನೂರ19: ರಾಜ್ಯದ ಸವರ್ಾಂಗೀಣ ಅಭಿವೃದ್ದಿಯ ಜೊತೆಗೆ ನಾಗರೀಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು.  ಪ್ರಜೆಗಳ ಸೇವೆ ಮಾಡಿ ಅವರುಗಳ ಋಣ ತೀರಿಸುವುದು, ರೈತ ಮತ್ತು ಬಡವರ ಏಳ್ಗೆಗೆ ಶೃಮಿಸುವುದು. ಮತದಾನದ ಸಂದರ್ಭದಲ್ಲಿ ಹಣದಾಸೆ ಬಿಟ್ಟು ಮತದಾರರಿಗೆ ನಿಯತ್ನಿಂದ ಮತದಾನ ಮಾಡಲು ಜಾಗೃತಿ ಮೂಡಿಸುವ ಧ್ಯೇಯವನ್ನು ಹೊತ್ತು ಕನರ್ಾಟಕ ನಿಯತ್ ಪಕ್ಷ [ಕೆ.ಎನ್.ಪಿ] ವನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ನೂತನ  ಕನರ್ಾಟಕ ನಿಯತ್ ಪಕ್ಷ [ಕೆ.ಎನ್.ಪಿ]ದ  ಅಧ್ಯಕ್ಷ ಚಂದ್ರಶೇಖರಯ್ಯ ಕುಲಕಣರ್ಿ(ಕನವಳ್ಳಿಮಠ) ಹೇಳಿದರು.

    ನಗರದ ನೇಕಾರ ಕಾಲೋನಿಯಲ್ಲಿ ಗುರುಲಿಂಗ ಜಂಗಮ ರಾಜ ನಾರಾಯಣಸ್ವಾಮಿ ಹಾಗೂ ಕಾಶಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ  ಕನರ್ಾಟಕ ನಿಯತ್ ಪಕ್ಷ [ಕೆ.ಎನ್.ಪಿ]ದ  ಕಾಯರ್ಾಲಯವನ್ನು ಉದ್ಘಾಟಿಸಲಾಯಿತು. 

ನಂತರ ಮಾತನಾಡಿದ ಅವರು ಪ್ರಜೆಗಳಿಗೋಸ್ಕರ ದುಡಿಯವ ಸಲುವಾಗಿ ಈ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ರಾಜ್ಯವನ್ನು ಅಭಿವೃದ್ದಿಯತ್ತ ಗಮನಹರಿಸುವ ಉದ್ದೇಶದಿಂದ ನಾಗರೀಕರಿಗೆ ಜಾಗೃತಿ ಮೂಡಿಸಿ ನಾಡಿನ ನೆಲ-ಜಲದ ಬಗ್ಗೆ ಅಭಿಮಾನ  ಮೂಡಿಸಲು ಈ ನಿಯತ್ ಪಕ್ಷವು ಸದಾ ಶೃಮಿಸಲಿದೆ ಎಂದರು.

    ರೈತರ ಕಷ್ಟ ನೋವುಗಳನ್ನು ಯಾವುದೇ ಸಕರ್ಾರ ಇವರೆಗೂ ಬಗೆಹರಿಸುತ್ತಿಲ್ಲ, ರೈತರು ಹಲವಾರು ತೊಂದರೆ ಅನುಭವಿಸಿ ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಉಭಯ ಸಕರ್ಾರಗಳು  ಮಾತ್ರ ರೈತರ ಕಡೆ ಎಂದೂ ಸ್ವಂದಿಸುತ್ತಿಲ್ಲ. ರಾಜ್ಯದಲ್ಲಿ ಸತತ 4 ವರ್ಷಗಳ ಕಾಲ ಬರಗಾಲ ಛಾಯೆ ಆವರಿಸಿದ್ದು, ರೈತರು ತಿಶಂಕು ಸ್ಥಿತಿಯಲ್ಲಿ ಸಿಲುಕಿ ನರಳಾಡುತ್ತಿದ್ದಾರೆ. ಈ ಬಗ್ಗೆ ರೈತರನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಪಕ್ಷದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದರ ಮೂಲಕ ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

   ಪಕ್ಷದ ಪ್ರಧಾನ ಕಾರ್ಯದಶರ್ಿ ಚಂದ್ರನಾಥ ಬಳಿಗಾರ ಮಾತನಾಡಿ  ರಾಜ್ಯವನ್ನು ಭ್ರಷ್ಟಾಚಾರ ರಹಿತ ಆಡಳಿತ ತರುವ ಉದ್ದೇಶದಿಂದ ಭ್ರಷ್ಠ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸಲಾಗುವುದು.

  ಮುಂದಿನ ದಿನಗಳಲ್ಲಿ ಸ್ತ್ರೀಯರಿಗೆ ಸಮಾನತೆ ವೇತನ, ನೂರಕ್ಕೆ ನೂರರಷ್ಟು ಉದ್ಯೋಗದಲ್ಲಿ ಅವಕಾಶ ದೊರಕಿಸುವುದು, ರೈತರ ಸಾಲ ಮನ್ನಾ, 24 ಗಂಟೆ ಕರೆಂಟ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಶೀಘ್ರವೇ ಪಕ್ಷದಿಂದ ಹೋರಾಟ ಮಾಡಲು ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದರು.

    ಉಪಾಧ್ಯಕ್ಷ ಪ್ರಕಾಶ ಮಡಿವಾಳರ, ಖಜಾಂಚಿ ಸುನೀಲ ನಾಯಕ, ಇಸ್ಮಾಯಿಲಸಾಬ ಬುಡಮ್ಮನವರ, ಪಿ.ಕೆ ಕಳಸನಗೌಡ್ರ, ಎಚ್ಆರ್ ಸಿರಿಗೇರಿ, ಬಸವರಾಜ ಕಾನಬಸಣ್ಣನವರ, ಗಂಗಣ್ಣ ಮಡಿವಾಳರ, ಬಸವಣ್ಣೆಪ್ಪ ಕಡೇಮನಿ, ಬಸವಣ್ಣೆಪ್ಪ ಪೂಜಾರ, ಮಲ್ಲಯ್ಯ ಹಿರೇಮಠ,  ಗುಡ್ಡಪ್ಪ ಕಡೇಮನಿ, ರೇವಣೆಪ್ಪ ಕುರುಬರ, ಶಿವಮೂತರ್ೆಪ್ಪ ಕೋಟಿಹಾಳ, ಗುಡ್ಡಪ್ಪ ಕರಗೇರ, ದೊಡ್ಡವೀರಪ್ಪ ಕರೇಮಣಿ, ರತ್ನಮ್ಮ ಆಲದಗೇರಿ, ಶಾಂತವ್ವ ಬೆಳಕೇರಿ ಸೇರಿದಂತೆ ಮತ್ತಿತರು ಇದ್ದರು.