ಮಾಂಜರಿ: ನೂತನ ಹಸಿರು ಸೇನೆ ಶಾಖೆ ಉದ್ಘಾಟನೆ

ಲೋಕದರ್ಶನ ವರದಿ

ಮಾಂಜರಿ 09:  ರಾಜ್ಯ ಕೇಂದ್ರ ಸಕರ್ಾರ ರೈತರ ಏಳ್ಗಿಗೆಗಾಗಿ ಸಮರ್ಪಕ ಯೋಜನೆಗಳನ್ನು ಜಾರಿಗೆ ತಂದು ರೈತರ ಹಿತವನ್ನು ಕಾಪಾಡಬೇಕೆಂದು ಕನರ್ಾಟಕ ರಾಜ್ಯ ರೈತ ಸಂಘದ  ಜಿಲ್ಲಾಧ್ಯಕ್ಷ  ಬಸವಂತ ಕಾಂಬಳೆಯವರು ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಇಂದು ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಹಸೀರು ಸೇನೆಯ ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿ ಅವರು ರೈತರು ಕಷ್ಟ ಪಟ್ಟು ಒಳ್ಳೆಯ ಬೆಳೆಗಳನ್ನು ಬೆಳೆದು ಖಾಲಿ ಕೈಯಿಂದ ಮನೆಗೆ ಬರುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸಮರ್ಪಕ ಬೆಂಬಲ ಬೆಲೆ ನೀಡದೆ ಇರುವುದು ರಾಜ್ಯ ಕೇಂದ್ರ ಸಕರ್ಾರಗಳು ಬೆಳೆಗಳಿಗೆ ಉತ್ತಮವಾದ ಬೆಳೆಗೆ ಪರಿಹಾರವನ್ನು ನಿಡುತ್ತಿಲ್ಲ. ಇದಕ್ಕಾಗಿ ಸಕರ್ಾರ ಅಧಿಕಾರಿಗಳ ವಿರುಧ್ಧ ರಸ್ತೆಗಿಳಿಯುವ ಅವಶ್ಯಕತೆವಿದೆ.ಇದರಿಂದ ರೈತರಿಗೆ  ಬೇಕಾದ ಸೌಲಭ್ಯಗಳನ್ನು ಪಡೆಯುವು ನಿಟ್ಟಿನಲ್ಲಿ ಒಬ್ವಂಟಿಯಾಗಿ ಸಾಧ್ಯವಿಲ್ಲ. ಅದಕ್ಕಾಗಿ ಸಂಘದ ಅವಶ್ಯಕತೆ ವಿದೆ. ಒಗ್ಗಟಿನಲ್ಲಿ ಬಲವಿದೆ ಎನ್ನುವಂತೆ ಎಲ್ಲಾ ರೈತರು ಸೇರಿದಾಗ ಮಾತ್ರ ಸರಕಾರಕ್ಕೆ ಅಧಿಕಾರಿಗಳಿಗೆ ಬಿ ಸಿ ಮುಟ್ಡಿಸಿಲು ಸಾಧ್ಯ ಎಂದು ಬಸವಂತ ಕಾಂಬಳೆ ಹೇಳಿದರು.

ನಂತರ ಅಥಣಿ ತಾಲೂಕಿನ ರೈತ ಸಂಘದ ಅಧ್ಯಕ್ಷ  ಮಂಜುನಾಥ ಪರಗೌಡ  ಮಾತನಾಡಿ  ಈ ಭಾಗದಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ಕಬ್ಬುನ್ನು ಬೇಳೆಯುತ್ತಾರೆ ಆದರೆ ಅವರಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಎಫ್ ಆರ್ ಫಿ ದರದ ಪ್ರಮಾಣವು ಸಹ ರೈತರಿಗೆ ಸಿಗುತ್ತಿಲ್ಲ. ಆದರೆ ಸಕ್ಕರೆ ಕಾಖರ್ಾನೆಗಳು ರೈತರಿಗೆ ಮೋಸವನ್ನು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ಎಚ್ಚೆತಗೊಂಡು ಕೂಡಲೆ ರೈತರಿಗೆ ವಂಚನೆಯನ್ನು ಮಾಡುತ್ತಿರುವ ಕಾಖರ್ಾನೆಗಳ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗವುದು ಎಂದರು.

ಈ ಸಂಧರ್ಭದಲ್ಲಿ ಚಂದ್ರಶೆಖರ ಚಿನಕೇಕರ, ಸತ್ಯಪ್ಪ ಮಲ್ಲಾಪೂರ, ರಾಜೇಂದ್ರ ಜಗದಾಳೆ, ಲಕ್ಷ್ಮಣ ಶಿಂಗಾಡೆ, ಸಂಜಯ ಸೂರ್ಯವಂಶಿ, ಮಲ್ಲಿಕಾಜರ್ುನ ಮಠಪತಿ, ಚಂದ್ರಕಾಂತ ಕಮತೆ,ಅಶೋಕ ಜಾಧವ, ಲಕ್ಷ್ಮಣ ಉಮರಾಣಿ, ಬಾಬು ವಾಳಕೆ ಸೇರಿದಂತೆ ಯಡೂರ ಗ್ರಾಮದ ರೈತರು ಉಪಸ್ಥಿತರಿದ್ದರು