ವಿಜ್ಞಾನ ಮತ್ತು ಆರೋಗ್ಯ ಮಂಟಪವು ಆಯೋಜಿಸಿದ್ದ ಮಂಪಟದ ಉದ್ಘಾಟನೆ
Inauguration of the fair organized by the Science and Health Pavilion
ಧಾರವಾಡ 25 : ಇಂದಿನ ತಂತ್ರಜ್ಞಾನದ ಕಾಲದಲ್ಲಿ ಜನರು ಮನೆಮದ್ದುಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿಲ್ಲ ಈ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಬೇಕಾದ ಅಗತ್ಯವಿದೆ. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಹಿರಿಯರು ಹೇಳುವ ಅನುಭವದ ನುಡಿಗಳಲ್ಲಿ ಆರೋಗ್ಯದ ಮಹತ್ವವಿದೆ ಈ ಸತ್ಯವನ್ನು ಅರಿತು ವಿದ್ಯಾರ್ಥಿಗಳಾದವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ, ಮಾನ್ಯ ಕುಲಪತಿಗಳಾದ ಪ್ರೊ. ಪಿ. ಎಲ್. ಪಾಟೀಲ ಅವರುಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮತ್ತು ಆರೋಗ್ಯ ಮಂಟಪವು ಆಯೋಜಿಸಿದ್ದ ಮಂಪಟದ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಸಮಾರಂಭವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಂದುವರಿದು ಮಾನತಾಡುತ್ತಾ, ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆರೋಗವಿಲ್ಲ’ ಎಂಬ ನಾಣ್ಣುಡಿಯನ್ನು ನೆನಪಿಸುತ್ತಾ, ಈ ಜಗತ್ತಿನಲ್ಲಿ ಆರೋಗ್ಯಕ್ಕಿಂತ ಮಿಗಿಲಾದದ್ದುಯಾವುದುಇಲ್ಲ, ವಿದ್ಯಾರ್ಥಿಗಳು ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ನಿಮ್ಮ ಅಭಿರುಚಿಯ ಕ್ಷೇತ್ರಗಳನ್ನು ಆಯ್ದುಕೊಂಡು ಉನ್ನತ ಮಟ್ಟದ ಸಾಧನೆಯನ್ನು ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ‘ಸಮಗ್ರಆರೋಗ್ಯದ ಪರಿಕಲ್ಪನೆ’ಯ ಕುರಿತು ಮನಗುಂಡಿಯ ಗುರು ಬಸವ ಮಹಾಮನೆಯ ಬಸವಾನಂದ ಸ್ವಾಮಿಗಳು ಉಪನ್ಯಾಸ ನೀಡಿ ಮಾತನಾಡುತ್ತಾ, ಸಮಾಜದಅಭಿವೃದ್ಧಿಯಲ್ಲಿಎಲ್ಲ ವ್ಯಕ್ತಿಗಳ ಆರೋಗ್ಯದ ಪಾತ್ರವು ಬಹು ಮುಖ್ಯವಾಗುತ್ತದೆ. ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ವ್ಯಕ್ತಿಯುದೈಹಿಕವಾಗಿ, ಮಾನಸಿಕವಾಗಿ, ಆಧಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿಉತ್ತಮಆರೋಗ್ಯವನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ.
ವಿಶ್ವಆರೋಗ್ಯ ಸಂಸ್ಥೆಯು ವ್ಯಕ್ತಿಯ ಸಮಗ್ರಆರೋಗ್ಯದ ಪರಿಕಲ್ಪನೆಯನ್ನು ತಿಳಿಸಿದ್ದು, ಎಲ್ಲ ಮಕ್ಕಳು ಅವುಗಳನ್ನು ತಪ್ಪದೇ ಪಾಲಿಸಬೇಕು.ಈ ಜಗತ್ತಿನಲ್ಲಿ ಜನ್ಮತಳೆದ ಯಾವ ಮಗುವು ದಡ್ಡನಲ್ಲ. ಪ್ರತಿ ಮಗುವಿನಲ್ಲೂಅದ್ಭುತ ಶಕ್ತಿ ಸಾಮರ್ಥ್ಯಗಳು ಅಡಕವಾಗಿರುತ್ತವೆ. ಪ್ರತಿ ಮಗು ತಮ್ಮ ನಾಲಿಗೆಯರುಚಿ ಬಯಸುವ ಪದಾರ್ಥಗಳಿಂದ ದೂರವಿದ್ದುಉತ್ತಮಆರೋಗ್ಯವನ್ನು ಹೊಂದುವ ಮೂಲಕ ಸಮಗ್ರ ವಿಕಾಸವನ್ನು ಸಾಧಿಸಬೇಕಾಗಿದೆ. ಪ್ರತಿಯೊಬ್ಬರೂ ಬೆಳಗ್ಗೆ ಬೇಗನೇ ಏಳುವ, ಬೆಳಗ್ಗೆ ಎದ್ದುಕೂಡಲೇಚಹಾದ ಬದಲಾಗಿ ನೀರುಕುಡಿಯುವ, ಸ್ವಲ್ಪ ಶಾರೀರಿಕ ಪರಿಶ್ರಮ ಪಡುವ, ಕಾಲ ಕಾಲಕ್ಕೆ ಉತ್ತಮಆಹಾರ ಸೇವಿಸುವ, ಸೂಕ್ತ ಸಂದರ್ಭದಲ್ಲಿ ಉಪವಾಸ ಮಾಡುವ ಮತ್ತುದೃಢವಾದಆತ್ಮವಿಶ್ವಾಸವನ್ನು ರೂಢಿಸಿಕೊಂಡು ಬೆಳೆಯಬೇಕೆಂದು ಪೂಜ್ಯಶ್ರೀ ಬಸವಾನಂದ ಸ್ವಾಮಿಗಳು ಸಲಹೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದಉಪಾಧ್ಯಕ್ಷರಾದಡಾ.ಸಂಜೀವಕುಲಕರ್ಣಿಅವರು ಮಾತನಾಡುತ್ತಾ, ನಾವೆಲ್ಲರೂಉತ್ತಮಆಹಾರವನ್ನು ಸೇವಿಸುವ ಜೊತೆಗೆ ನಾನು ಧರಿಸುವ ಬಟ್ಟೆ, ವಾಸಿಸುವ ಮನೆ, ಬಳಸುವ ವಾಹನ ಮುಂತಾದ ವಿಷಯಗಳು ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಹಾನಿ ಮಾಡದಂತಿರಬೇಕು.ಇಂದು ನಾವು ಬಳಸುತ್ತಿರುವ ಪಾಲಿಸ್ಟರ್ ಬಟ್ಟೆಗಳು ನೀರನ್ನು ಸೇರಿ ಪುನಃ ನಮ್ಮದೇಹವನ್ನು ಪ್ರವೇಶಿಸುತ್ತವೆ ಇದರಿಂದಾಗಿ ಮುಂದಿನ ತಲೆಮಾರುಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆಎಂದು ತಿಳುವಳಿಕೆ ನೀಡಿದರು.
ವಿಜ್ಞಾನ ಮತ್ತುಆರೋಗ್ಯ ಮಂಟಪದ ಸಂಚಾಲಕರಾದ ಶಶಿಧರ ತೋಡಕರಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇಂದು ವಿಜ್ಞಾನ ಮತ್ತುತಂತ್ರಜ್ಞಾನವುತುಂಬಾ ವೇಗವಾಗಿ ಬೆಳೆಯುತ್ತಿದ್ದು ಆ ವೇಗಕ್ಕೆ ಅನುಗುಣವಾಗಿ ನಾವು ನಮ್ಮಆರೋಗ್ಯದಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದರು.
ಪ್ರೊ. ಸಿ. ಎನ್. ಆರ್. ರಾವ್‌ರಾಷ್ಟ್ರೀಯ ಶಿಕ್ಷಕ ಬಹುಮಾನ ವಿಜೇತರಾದಡಾ. ಲಿಂಗರಾಜರಾಮಾಪೂರಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಉಪಸ್ಥಿತರಿದ್ದರು. ಡಾ. ಈರಣ್ಣ ಇಂಜಗನೇರಿ ಸ್ವಾಗತಿಸಿದರು.ಡಾ. ರಾಜಶೇಖರ ಬಶೆಟ್ಟಿ ವಂದಿಸಿದರು. ಚಂದ್ರಶೇಖರ ಬಶೆಟ್ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಶಿವಾನಂದ ಭಾವಿಕಟ್ಟಿ, ಸತೀಶತುರುಮರಿಡಾ.ಶೈಲಜಾ ಅಮರಶೆಟ್ಟಿ, ವಿಜ್ಞಾನ ಮತ್ತುಆರೋಗ್ಯ ಮಂಟಪದ ಸಲಹಾ ಸಮಿತಿಯ ಸದಸ್ಯರು ಆರ್.ಎಲ್. ಎಸ್. ಹಾಗೂ ಎಲ್. ಇ. ಎ. ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 