ದ್ಯಾಮಮ್ಮಾದೇವಿ ದೇವಸ್ಥಾನದ ಸಭಾ ಮಂಟಪ ಉದ್ಘಾಟನೆ: ಶಾಸಕ ವಿಶ್ವಾಸ ವೈದ್ಯ
Inauguration of the assembly hall of Dyamamma Devi Temple: MLA Vishwas Vaidya
ಲೋಕದರ್ಶನ ವರದಿ
ಯರಗಟ್ಟಿ 29: ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಸಭಾ ಮಂಟಪಗಳ ನಿರ್ಮಾಣದಿಂದ ಸಾರ್ವಜನಿಕ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಭೆ-ಸಮಾರಂಭಗಳನ್ನು ಹಮ್ಮಿಕೊಳ್ಳಲು ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ಯರಝರ್ವಿ ಗ್ರಾಮದಲ್ಲಿ ಬುದವಾರ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಲಾದ ದ್ಯಾಮಮ್ಮಾದೇವಿ ದೇವಸ್ಥಾನದ ಸಭಾ ಮಂಟಪ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಪ್ರತಿಯೊಂದು ಗ್ರಾಮವೂ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಹೊಂದಬೇಕು. ಸಭಾ ಮಂಟಪಕ್ಕೆ ಇನ್ನು ಬೇಕಾಗುವ ಮೂಲಭೂತ ಸೌಕರ್ಯ ಸೌಲಬ್ಯಗಳನ್ನು ಸಿಗ್ರದಲ್ಲಿ ಕಲ್ಪಿಸಲಾಗುವುದು ಎಂದು ಹೇಳಿದರು. ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರ ಕೊಡುಗೆ ಅನನ್ಯ ಎಂದು ಹೇಳಿದರು.
ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಯಲ್ಲಾಲಿಂಗ ಮಠದ ಚಿದಾನಂದ ಸ್ವಾಮೀಜಿ, ಮುರಗಯ್ಯಸ್ವಾಮಿ ಹಿರೇಮಠ, ಜಿಪಂ ಎಇಇ ಎಚ್.ಎ.ಕದ್ರಾಪೂರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಮುಖಂಡ ಪ್ರಕಾಶ ವಾಲಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ದೇವಸ್ಥಾನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸುರೇಶ ಮುರಗೋಡ, ಆರ್.ಕೆ.ಪಟಾತ, ಡಾ.ಎ.ಎಂ.ಶಂಕರಲಿಂಗಪ್ಪ, ಎಂ.ಬಿ.ಪೂಜೇರ, ಸಿದ್ದಪ್ಪ ಮಾಳಗಿ, ದುಂಡಪ್ಪ ಕೊಡೆಳ್ಳಿ, ಪ್ರಕಾಶ ಮುರಗೋಡ, ಅಶೋಕ ಗಡಮ್ಮನ್ನವರ, ಭೀಮಶಿ ಕಡಬಿ, ಮಹಾದೇವ ದಾಸಪ್ಪನ್ನವರ, ಪ್ರಕಾಶ ಲಿಂಗರಡ್ಡಿ, ಅರ್ಜುನ ದಳವಾಯಿ, ಬಸವರಾಜ ಹಾರುಗೊಪ್ಪ, ರಮೇಶ ದುಂಡಪ್ಪನವರ, ಸುಬಾಷ ಕಲ್ಲನ್ನವರ, ಬಸವರಾಜ ಕತ್ತಿ, ಸಿದ್ಧಾರೂಡ ಪುಜೇರ ಸೇರಿದಂತೆ ಮುಖಂಡರು, ಸಮಾಜದ ಪ್ರಮುಖರು ಹಾಗೂ ಕಾರ್ಯಕರ್ತರು ಇದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 