ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ

ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ Inauguration of the activities of the current triennial period

ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ 

ಧಾರವಾಡ, 10 ; ಯುವ ಜನಾಂಗದಲ್ಲಿ ಅಡಗಿದ ಅಗಾಧ ಶಕ್ತಿ ಸದ್ಬಳಸಿ,  ಉನ್ನತ ಸಾಧನೆ ಮಾಡಬೇಕು. ಈ ಮೂಲಕ ತಂದೆ-ತಾಯಿ, ಕಲಿಸಿದ ಗುರು, ಸಮಾಜ ಹಾಗೂ ದೇಶದ ಋಣ ತೀರಿಸಬೇಕು ಎಂದು ಧಾರವಾಡ ಐಐಟಿ ನಿರ್ದೆಶಕ ಹಾಗೂ ಹಿರಿಯ ವಿಜ್ಞಾನಿ ಡಾ. ಎಸ್‌.ಎಂ.ಶಿವಪ್ರಸಾದ ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮತ್ತು ಕ್ರೀಡಾ ಮಂಟಪವು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಸಸಿಗೆ ನೀರೆರುವುದು ಮುಖಾಂತರ ಚಾಲನೆ ನೀಡಿ ಅವರು ಮಾತನಾಡಿದರು. 

ಮನುಷ್ಯನ ಜೀವಿತ ಅವಧಿಯಲ್ಲಿ ಯೌವನದ ಬದುಕು ಬಹಳ ಸುಂದರ. ದುಶ್ಚಟಗಳಿಂದ ಈ ಯೌವನ ವ್ಯರ್ಥ ಮಾಡದೆ, ಸದ್ಗುಣಗಳು ಬೆಳೆಸಿಕೊಳ್ಳಬೇಕು. ಮತ್ತೊಬ್ಬರಿಗೆ ಮಾದರಿ ಆಗುವ ರೀತಿಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಸಲಹೆ ನೀಡಿದರು.  

ಕ್ರೀಡೆಗಳು ಮನುಷ್ಯನ ಬದುಕಿಗೆ ಉಲ್ಲಾಸ, ಉತ್ಸಾಹ ತುಂಬಲಿವೆ. ಹೀಗಾಗಿ ಸೋಲು-ಗೆಲವು ಸಮ ಚಿತ್ತದಿಂದ ಸ್ವೀಕರಿಸಬೇಕು. ಸ್ಪರ್ಧಾ ಮನೋಭಾವ ಉತ್ತಮ ಕ್ರೀಡಾರ್ಥಿ ಲಕ್ಷಣ. ಉನ್ನತ ಗುರಿಯೊಂದಿಗೆ ಸಾಧನೆ ಹಾದಿಯಲ್ಲಿ ಸಾಗಿದರೆ ಮಾತ್ರವೇ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.  

ಹು-ಧಾ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್, ಯುವಜನಾಂಗದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಏಕೆಂದರೆ, ಯುವ ಜನಾಂಗವೇ ಈ ದೇಶದ ಆಸ್ತಿ. ಇದು ಎಂದಿಗೂ ವ್ಯರ್ಥ ಆಗಬಾರದು. ಹೀಗಾಗಿ ಯುವಜನಾಂಗ ತಮ್ಮ ಜವಾಬ್ದಾರಿ ಅರಿತು, ಬದುಕಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆಯೂ ಕಿವಿಮಾತು ಹೇಳಿದರು.  

ವಿದ್ಯಾರ್ಥಿಗಳು ಸಮಯ, ಶ್ರಮ, ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತು ನೀಡಬೇಕು. ದೊಡ್ಡ ದೊಡ್ಡ ಕನಸು  ಕಂಡು, ನನಸು ಮಾಡಿಕೊಳ್ಳುವ ಕಡೆಗೂ ಸಹ ಚಿತ್ತ ಹರಿಸಬೇಕು. ತಂದೆ-ತಾಯಿ, ಗುರು ಮತ್ತು ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 

ಪ್ರೇಮಾ ಬೂದಿಹಾಳ ಮಲ್ಲಕಂಬ, ಕೆ.ಇ.ಬೋರ್ಡ್‌ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಹಾಗೂ ಜಿಗಳೂರು ಮಹಿಳಾ ಮಹಾವಿದ್ಯಾಲಯದ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು. ಸರಕಾರಿ ಪದವಿ ಪೂರ್ವ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಸಮೂಹಗಾನ ಹಾಡಿದರು ಮತ್ತು ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ನೀಡಿದರು.  

ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ವಸಂತ ಮುರ್ಡೇಶ್ವರ ಇದ್ದರು.  

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಟಪದ ಸಲಹಾ ಸಮಿತಿ ಸದಸ್ಯರಾದ ವೀಣಾ ಹೊಸಮನಿ ಸ್ವಾಗತಿಸಿದರು. ಡಾ. ವಿಜಯಶ್ರೀ ಅಂಗಡಿ ಪ್ರಾರ್ಥಿಸಿದರು. ಯುವಜನ ಮತ್ತು ಕ್ರೀಡಾ ಮಂಟಪದ ಸಂಚಾಲಕಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಡಾ. ಬಾಬು ಬೆಣ್ಣಿ ವಂದಿಸಿದರು. 

ಸಮಾರಂಭದಲ್ಲಿ ಸತೀಶ ತುರಮರಿ, ಡಾ. ಜಿನದತ್ತ ಹಡಗಲಿ, ಡಾ. ಶೈಲಜಾ ತ. ಅಮರಶೆಟ್ಟಿ, ಡಾ. ಸುರೇಶ ಹೊರಕೇರಿ, ಸಿಪಿಐ ನಾಗಯ್ಯ ಕಾಡದೇವರ, ಪತ್ರಕರ್ತ ಲಿಂಗರಾಜ ಪಾಟೀಲ, ಡಾ ಬಾಬು ಬೆಣ್ಣಿ, ಶಿವನಯ್ಯ ಹಿರೇಮಠ, ದೀಪಕ ಬಾಣದ, ಡಾ. ಪ್ರಭಾ ನೀರಲಗಿ, ನೀಲಾ ಶಿಗ್ಲಿ, ಶಿವಲೀಲಾ, ಆಶಾ ಸಯ್ಯದ್, ನಂದಾ ಗುಳೇದಗುಡ್ಡ, ಬಸವರಾಜ ಮುರಗೋಡ ಸೇರಿದಂತೆ ಮುಂತಾದವರಿದ್ದರು.