ಲೋಕದರ್ಶನ ವರದಿ
ರಾಯಬಾಗ 08: ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಅಂದಿನ ಎಂಪಿ ಬ್ಯಾರಿಸ್ಟರ್ ಹರಡೆಕರ್ ಮತ್ತು ಎಮ್ಎಲ್ಎಎಮ್.ಆರ್. ದೇಸಾಯಿ ಅವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿ ಶಿಕ್ಷಣ ಪ್ರಸಾರಕ್ಕಾಗಿ ಮಾಡಿರುವ ಅವರ ಸೇವೆ, ತ್ಯಾಗ ಸದಾ ಸ್ಮರಣೀಯವಾದದ್ದು ಎಂದು ಮಾಜಿ ಸಂಸದ ಬ್ಯಾರಿಸ್ಟರ್ ಅಮರಸಿಂಹ ಪಾಟೀಲ ಹೇಳಿದರು.
ಇತ್ತಿಚೆಗೆ ಪಟ್ಟಣದ ಎಸ್ಪಿಎಮ್ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಯಬಾಗ ವಿದ್ಯಾಲಯ ರಾಯಬಾಗ ಇದರ ಮರಾಠಿ ವಿಭಾಗದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಪ್ರೇಮಿ, ಮಾಜಿ ಸಚಿವ ವಸಂತರಾವ್ ಪಾಟೀಲ ಅವರು ಈ ಭಾಗದಲ್ಲಿ ಶಿಕ್ಷಣ ಪ್ರಸಾರಕ ಮಂಡಳವನ್ನು ಸ್ಥಾಪಿಸಿ ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡಿದ್ದರು. ಅಂದಿನ ಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಅನೇಕ ಉನ್ನತ ಹುದ್ದೆ ಪಡೆದಿರುವುದು ಶಿಕ್ಷಣ ಪ್ರಸಾರಕ ಮಂಡಳಕ್ಕೆ ಹೆಮ್ಮೆ ತಂದಿದೆ ಎಂದರು.ಇಂದು ಎಲ್ಲ ಹಳೆ ವಿದ್ಯಾರ್ಥಿಗಳು ಸ್ನೇಹ ಸಮ್ಮೇಳನದ ಮೂಲಕ ಗುರುಗಳಿಗೆ ನಮನ ಸಲ್ಲಿಸುತ್ತಿರುವುದು ಸಂತೋಷತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಪ್ರಗತಿಪರ ರೈತ ಕಲ್ಯಾಣ ದೇಶಪಾಂಡೆ ಅವರು ವಹಿಸಿದ್ದರು. ಹಳೆ ವಿದ್ಯಾರ್ಥಿ ಪ್ರತಿನಿಧಿ, ಪ್ರಾಧ್ಯಾಪಕ ಸಿಕಂದರ ಡಾಂಗೆ, ಸಕಾಲ ಪತ್ರಿಕೆ ಸಂಪಾದಕ ಉತ್ತಮ ಕಾಂಬಳೆ, ಮನೋಹರ ಮುಚ್ಚಂಡಿ, ಮುನಾಫ ಮುಲ್ಲಾ, ಮುಮತಾಜ ಮುಲ್ಲಾ, ನವೀನ ಪಟೇಲ, ಟಿ.ಜಿ.ಪಾಟೀಲ, ಸುರ್ಯೋಬಾ ವಾಘಮೋಡೆ, ಮಹಾವೀರ ಘೋಸರವಾಡೆ, ವಿಜಯಕುಮಾರ ಭೋಸಲೆ, ರಾಜು ದೇಶಪಾಂಡೆ ಸೇರಿದಂತೆ ಅನೇಕರು ಉಪಸ್ಥತರಿದ್ದರು
ಗುರುಗಳಾದ ಎಮ್.ಬಿ.ಘೋಡಕೆ, ಕೆ.ಆಯ್.ಪಾಟೀಲ, ಮಹಾದೇವ ಹೊಂಕಳೆ ಅವರಿಗೆ ಸತ್ಕರಿಸಲಾಯಿತು. ಹಳೆ ವಿದ್ಯಾರ್ಥಿಗಳು ಉಚಿತ ಬೊರ್ಡಿಂಗ ವಿದ್ಯಾರ್ಥಿಗಳಿಗೆ ಟಿವ್ಹಿಯನ್ನು ನೀಡಿದರು.
ಅಲಕಾ ಶೆಂಡಗೆ ಸ್ವಾಗತಿಸಿದರು, ವಟಾಯಿ ಸುತಾರ ನಿರೂಪಿಸಿ, ವಂದಿಸಿದರು.