ಹಾಲು ಉತ್ಪಾದಕರ ಪತ್ತಿನ ಸಹಕಾರ ಸಂಘ ಉದ್ಘಾಟನೆ

ಹಾಲು ಉತ್ಪಾದಕರ ಪತ್ತಿನ ಸಹಕಾರ ಸಂಘ ಉದ್ಘಾಟನೆ  Inauguration of the Patna Milk Producers Cooperative Society

ಭೂಮಿಯ ಫಲವತ್ತತೆ, ಆರ್ಥಿಕ ಲಾಭಕ್ಕೆ ರೈತರು ದನ, ಕರು, ಕೋಳಿ ಸಾಕಾಣಿಕೆ ಮಾಡಿ:  ಸಾಂಗ್ಲಿಕರ 

ಮಹಾಲಿಂಗಪುರ: ಭೂಮಿಯ ಫಲವತ್ತತೆ ಮತ್ತು ಆರ್ಥಿಕ ಲಾಭಕ್ಕಾಗಿ ಒಕ್ಕಲುತನದ ಉಪ ಕಸುಬುಗಳಾದ ದನ, ಕರು ಹಾಗೂ ಕೋಳಿ ಸಾಕಾಣಿಕೆಗಳನ್ನು ಕೈಗೊಳ್ಳಲು ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ರೈತರಿಗೆ ಒತ್ತಿ ಹೇಳಿದರು. 

ಶುಕ್ರವಾರ ಮುಂಜಾನೆ ಹಾಲು ಉತ್ಪಾದಕರ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಘದ ಮುಖ್ಯ ಉದ್ದೇಶ ಕೃಷಿಕ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ ಎನ್ನುವುದೆ ಆಗಿದೆ. ಈ ರಂಗದಲ್ಲಿ ರೈತ ಕುಟುಂಬ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕ್ಕೊಳ್ಳಬೇಕು. ಆಗ ಸಮಯದ ಉಳಿತಾಯ ದೊಂದಿಗೆ ಶ್ರಮ ವಿಕೇಂದ್ರೀಕರಣಗೊಂಡು, ಯಾರಿಗೂ ಆಯಾಸ ಎನ್ನುವುದಿರದೆ ಸಲಿಸಾಗಿ ಆರ್ಥಿಕ ಬಲ ಪರಿವಾರದಾಗುತ್ತದೆ. ತಮಗಾಗಿಯೇ ಇರುವ ಈ ಪತ್ತಿನ ಸಂಘದಿಂದಲೂ ತಾವು ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಜೀವನ ನಿರ್ವಹಣೆ ಮಾಡಿಕೊಳ್ಳಬಹುದೆಂದರು. 

ಸಾನಿಧ್ಯ ವಹಿಸಿದ ಬೆಳಗಲಿ ಸಿದ್ಧಾರೂಢ ಮಠದ ಶ್ರೀಗಳು ಮಾತನಾಡಿ, ಲಾಭದಾಯಕ ವಿಚಾರದಿಂದ ಸಾವಯವ ಕೃಷಿ ಮೂಲೆಗುಂಪಾಗಿದೆ. ತಮ್ಮ ಪರಿವಾರದ ಆರೋಗ್ಯ ದೃಷ್ಟಿಯಿಂದಲಾದರೂ ಇರುವಷ್ಟು ಜಮೀನಿನಲ್ಲಿ ಸ್ವಲ್ಪ ಮಟ್ಟಿನ ಭೂಮಿಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಹೇಳಿ, ಇಂದು ಆರಂಭಗೊಂಡಿರುವ ಪತ್ತಿನ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ತಾವು ಆರ್ಥಿಕವಾಗಿ ಮುಂದೆ ಬರಲು ಹೇಳಿದರು. 

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ ಮತ್ತು ಹಾಗೂ ಕೆವಿಜಿ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಎಲ್‌.ವಿ.ಪಾಟೀಲ್ ಮಾತನಾಡಿ, ಹೈನುಗಾರಿಕೆಗೆ ಸರ್ಕಾರಗಳು ಆರ್ಥಿಕ ನೆರವು ಮತ್ತು ಕಸುಬಿಗೆ ಬೇಕಾದ ಆಧುನಿಕ ಪರಿಕರಗಳನ್ನು ಒದಗಿಸಿ ರೈತನ ಬದುಕಿಗೆ ಆಸರೆ ನೀಡುತ್ತಿವೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಹೇಳಿದರು.  

ಪಶು ಸಂಗೋಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಪ್ರಕಟಿಸಿದ್ದು, ಅನೇಕ ರೈತರು ಮಾಹಿತಿ ಕೊರತೆಯಿಂದಾಗಿ ಯೋಜನೆಗಳನ್ನು ಪಡೆಯುತ್ತಿಲ್ಲ. ರೈತರು ಸಂಘದಿಂದ ಮಾಹಿತಿ ಪಡೆದುಕ್ಕೊಂಡು ಆನ್ಲೈನ್ ಮೂಲಕ ಅರ್ಜಿ ಹಾಕಿ ಸಾಲ ಪಡೆದು ಹೈನುಗಾರಿಕೆಗೆ ಹೆಚ್ಚಿನ ಪಶುಗಳನ್ನು ಖರಿದಿಸಲು ಅನುಕೂಲಕರವಾಗಲಿದೆ. ನೂತನ ಬ್ಯಾಂಕ್ ಏಳ್ಗೆ ಸಲುವಾಗಿ ರೈತರು ಠೇವಣಿ ಮಾಡಿ ತಮಗೆ ಬೇಕಾದಾಗ ಕಡಿಮೆ ಬಡ್ಡಿ ದರದಲ್ಲಿ ಹಣ ಪಡೆದುಕ್ಕೊಂಡು ತಮ್ಮ ಮತ್ತು ಈ ಸಹಕಾರ ಸಂಘದ ಅಭಿವೃದ್ಧಿಗೆ ಕಾರಣಿಭೂತರಾಗಬೇಕು ಎಂದರು. 

ಗಣ್ಯರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮದ ಆರಂಭಕ್ಕೆ ಚಾಲನೆ ನೀಡಿದರೆ,ಶಾಲಾ ಮಕ್ಕಳು ಗೀತೆಯೊಂದಿಗೆ ಕಾರ್ಯಕ್ರಮದ ಗಣ್ಯರನ್ನು ಸ್ವಾಗತಿಸಿದರು. ನೂತನವಾಗಿ ಆರಂಭಗೊಂಡ ಈ ಬ್ಯಾಂಕ್ ನಿಂದ ಗಣ್ಯರ ಸಮ್ಮುಖದಲ್ಲಿ 5 ಜನ ಹಾಲು ಉತ್ಪಾದಕ ರೈತರಿಗೆ ತಲಾ 50 ಸಾವಿರ ಸಾಲದ ಚೆಕ್‌ಗಳನ್ನು ಬ್ಯಾಂಕ್ ಅಧ್ಯಕ್ಷ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾದೇವ ಮಾರಾಪೂರ ವಿತರಣೆ ಮಾಡಿದರು. 

ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಸ್ಥಳೀಯ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ, ಕಾನಿಪ ಅಧ್ಯಕ್ಷ ಮಹೇಶ ಮಣ್ಣಯ್ಯನವರಮಠ, ಶ್ರೀಶೈಲ ಹಿಪ್ಪರಗಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಸ್ಥಳೀಯ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ, ಕಾನಿಪ ಅಧ್ಯಕ್ಷ ಮಹೇಶ ಮಣ್ಣಯ್ಯನವರಮಠ, ಶ್ರೀಶೈಲ ಹಿಪ್ಪರಗಿ, ಕವಿತಾ. ಸಿದ್ದು. ಕೊಣ್ಣೂರ, ಈರಣ್ಣ ಬುದ್ನಿ, ಪುಂಡ್ಲೀಕ್ ವಣ್ಣೂರ ಮುಂತಾದವರಿದ್ದರು. ಇವರೆಲ್ಲರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪತ್ರಕರ್ತ ಚಂದ್ರಶೇಖರ ಮೋರೆ ನಿರೂಪಿಸಿ, ವಂದಿಸಿದರು.