ಲೋಕದರ್ಶನ ವರದಿ
ಬ್ಯಾಡಗಿ16: ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಶಬರಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪ ಸ್ವಾಮಿ, ಗಣಪತಿ ಹಾಗೂಅನ್ನಪೂರ್ಣೆಶ್ವರಿ ದೇವಿಯ ದೇವಸ್ಥಾನಗಳ ಉದ್ಘಾಟನೆಯು ಫೆಬ್ರುವರಿ ತಿಂಗಳ 6 ಮತ್ತು 7 ರಂದು ಜರುಗಲಿದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಗೌರವಾಧ್ಯಕ್ಷ ಜಯಣ್ಣ ಶಿರೂರು ಹೇಳಿದರು.
ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ದಿ. 6 ರಂದು ಮೂರೂ ದೇವರುಗಳ ಮೆರವಣಿಗೆಯು ಬಹು ವಿಜೃಂಭಣೆಯಿಂದ ನಡೆಯಲಿದೆ. ದಿ. 7 ರಂದು ಹೋಮ, ಕಳಸಾರೋಹಣ ಹಅಾಗೂ ದೇವರ ಮೂರ್ತಿ ಗಳಿಗೆ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚರ್ಚೆಸಲಾಯಿತು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಮೋಹನ ಕತ್ತಿ, ಉಪಾಧ್ಯಕ್ಷ ಸುರೇಶಗೌಡ ಪಾಟೀಲ, ರಾಜು ಮೊರಗೇರಿ, ಬಸಣ್ಣ ಕಡೇಕೂಪ್ಪ, ಮಾಲತೇಶ ಅರಳಿಮಟ್ಟಿ, ವೆಂಕಟೇಶ, ಎಸ್.ಜಿ. ಮಂಜಣ್ಣ, ಎಸ್.ಎಸ್. ಹಿರೇಮಠ, ರಾಮಾಂಜನೇಯ, ಸುರೇಶ ಡಂಬಳ, ರಾಜು ಗೊಂದಿಮಲ್ಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.