ಕೃಷಿ ಸಖಿ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಕೃಷಿ ಸಖಿ ತರಬೇತಿ ಕಾರ್ಯಕ್ರಮ ಉದ್ಘಾಟನೆ  Inauguration of the Krishi Sakhi training program

ಲೋಕದರ್ಶನ ವರದಿ 

ನೇಸರಗಿ 24: ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ವತಿಯಿಂದ ಕೃಷಿ ಸಖಿ ತರಬೇತಿ ಕಾರ್ಯಕ್ರಮದ , 4 ಮತ್ತು 5ರ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.  ಗ್ರಾಮೀಣ ಮಹಿಳೆಯರಲ್ಲಿ ಕೃಷಿ ಸಂಬಂಧಿತ ಜ್ಞಾನ ಹಾಗೂ ಕೌಶಲ ಹೆಚ್ಚಿಸಿ, ರೈತರಿಗೆ ಅಗತ್ಯವಿರುವ ಕೃಷಿ ತಾಂತ್ರಿಕ ಮಾಹಿತಿಯನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿತ್ತು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಪ್ರವೀಣ ಬಾಗೇವಾಡಿ ಮಾತನಾಡಿ, ಕೃಷಿ ಸಖಿ ತರಬೇತಿಯ ಮಹತ್ವವನ್ನು ವಿವರಿಸಿದರು. ಮಹಿಳೆಯರ ಸಬಲೀಕರಣದ ಜೊತೆಗೆ ಕೃಷಿ ಕ್ಷೇತ್ರದ ತಾಂತ್ರಿಕ ಜ್ಞಾನವನ್ನು ಗ್ರಾಮಮಟ್ಟಕ್ಕೆ ತಲುಪಿಸುವಲ್ಲಿ ಕೃಷಿ ಸಖಿಯರು ಪ್ರಮುಖ ಪಾತ್ರ ವಹಿಸಬಹುದು ಎಂದರು.

ರೈತರ ಸಮಸ್ಯೆಗಳನ್ನು ಅರಿತು ಕೃಷಿ ವಿಜ್ಞಾನಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಮಾರ್ಗದರ್ಶನದೊಂದಿಗೆ ಸೂಕ್ತ ತಾಂತ್ರಿಕ ಪರಿಹಾರಗಳನ್ನು ರೈತರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು. ಕೃ ಕಾರ್ಯಕ್ರಮದಲ್ಲಿ ಕೇಂದ್ರದ ಸಿಬ್ಬಂದಿಗಳಾದ ಡಾ. ಎಸ್‌.ಎಸ್‌. ಹಿರೇಮಠ, ಜಿ.ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ, ಡಾ. ಗುರುರಾಜ ಕೌಜಲಗಿ ಹಾಗೂ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು. ಬೆಳವಡಿಯ ಕೃಷಿ ಸಖಿ ಪ್ರಭಾವತಿ ಹಡಪದ ಸ್ವಾಗತಿಸಿದರು. ಮುರಕಿಭಾವಿ ಕೃಷಿ ಸಖಿ ಅಶ್ವಿನಿ ಉಳ್ಳವಿ ವಂದಿಸಿದರು. ನೇತ್ರಾವತಿ ಕುರಕುರೆ ಕಾರ್ಯಕ್ರಮ ನಿರೂಪಿಸಿದರು.