ಪಾಂಡುರಂಗ ಭಾಗವತ ಸಪ್ತಾಹ ಉತ್ಸವ ಸಂಪನ್ನ
Panduranga Bhagavata Saptaha Utsav Sampanna
ಲೋಕದರ್ಶನ ವರದಿ
ಯರಗಟ್ಟಿ 24 : ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ಪಾಂಡುರಂಗ ದಿಂಡಿ ಭಾಗವತ ಸಪ್ತಾಹ ಉತ್ಸವ 5 ದಿನಗಳ ಕಾಲ ಸಡಗರದಿಂದ ಜರುಗಿತು. ಬೆಳಗ್ಗೆ ಕಾಕಡಾರತಿ, ಪಾರಾಯಣ ಸೇರಿದಂತೆ ಇತರ ಧಾರ್ಮಿಕ ಕೈಂಕರ್ಯ ನೆರವೇರಿದವು. ಬಳಿಕ ಅಲಂಕೃತ ಪಾಂಡುರಂಗ ವಿಠಲ ದೇವರ ಭಾವಚಿತ್ರವನ್ನು ಕಳಸ-ಕುಂಭದೊಂದಿಗೆ ಮೆರವಣಿಗೆ ಮಾಡಲಾಯಿತು. ಸಾಮೂಹಿಕ ಭಜನೆ, ವಾದ್ಯವೃಂದ ಮೇಳೈಸಿದವು. ದೇವಸ್ಥಾನದಲ್ಲಿ ಕೀರ್ತನೆ ಮತ್ತು ಯಲ್ಲಮ್ಮನ ಕಥೆ ಹೇಳಲಾಯಿತು. ಮಂಗಳಾರತಿ ಬಳಿಕ ದಿಂಡಿ ಭಾಗವತ ಸಪ್ತಾಹ ಸಂಪನ್ನಗೊಂಡಿತು.
ಹಭಪ ಸಂದೀಪ ರಾಯರ, ಸುರೇಶ ಕಾಮಕಾರ, ಸಂತಾಜಿ ಘಾಟಗೆ, ಎನ್. ಕೆ. ಹುಚ್ಚರಡ್ಡಿ, ವಿಠ್ಠಲಗೌಡ ದೇವರಡ್ಡಿ, ಹನಮಂತ ಗಲಬಿ, ವಿಶಾಲಗೌಡ ಪಾಟೀಲ, ಸಂತೋಷ ದೇವರಡ್ಡಿ, ನಿಂಗಪ್ಪ ಪೂಜೇರ, ಸುರೇಶಗೌಡ ಪಾಟೀಲ, ರಮೇಶ ಮಿಕಲಿ, ಯಲ್ಲಪ್ಪ ಕರಿಗೊಣ್ಣವರ, ನಾಗಪ್ಪ ವಜ್ರಮಟ್ಟಿ, ಭೀಮಶಿ ದೇವರಡ್ಡಿ, ರಾಜೇಂದ್ರ ಪಾಟೀಲ, ಗಂಗಪ್ಪ ಗಂಗರಡ್ಡಿ, ಪುಂಡಲೀಕ ಶಿವಾಪೂರ, ಶೇಖರ ಕಿಲಾರಿ, ರಾಮನಗೌಡ ಪಾಟೀಲ, ಗೋವಿಂದಪ್ಪ ಹೂಗಾರ, ಅಭಿಷೇಕ ಗಲಬಿ, ವಿಠ್ಠಲ ಮೆಟಗುಟ್ಟ, ಬಾಬು, ಗಲಬಿ, ರಾಮಣ್ಣಾ ಕೊರಡ್ಡಿ, ಹನಮಂತ ಕಡಕೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಂತ ಸದ್ಭಕ್ತ ಮಂಡಳಿಯವರು ಇದ್ದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 