ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

ಪೌರ ಕಾರ್ಮಿಕರಿಗೆ ಕಿಟ್ ವಿತರಣೆ Distribution of kits to civic workers

ಲೋಕದರ್ಶನ ವರದಿ 

ಕಂಪ್ಲಿ 24 : ಪೌರ ಕಾರ್ಮಿಕರು ದಿನನಿತ್ಯದ ದುಡಿಮೆಯಲ್ಲಿ ಅಲ್ಪಸ್ವಲ್ಪ ಹಣವನ್ನು ಕೂಡಿಟ್ಟು, ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಬಳಸಿ, ಭವಿಷ್ಯ ರೂಪಿಸಬೇಕು. ಮತ್ತು ದುಶ್ಚಟಗಳಿಂದ ದೂರವಿರುವ ಮೂಲಕ ನಗರದ ಸ್ವಚ್ಚತೆಗೆ ಮುಂದಾಗಬೇಕು ಎಂದು ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಹೇಳಿದರು.  ಪಟ್ಟಣ ಪುರಸಭೆ ಕಛೇರಿ ಆವರಣದಲ್ಲಿ ಬುಧವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ದಿನನಿತ್ಯದಲ್ಲಿ ಕೈಗೊಂಡಿರುವ ಸ್ವಚ್ಚತೆ ಕಾರ್ಯ ಮೆಚ್ಚುವಂತಾಗಿದ್ದು, ಇದರ ಯಶಸ್ಸಿಗೆ ಪೌರ ಕಾರ್ಮಿಕರ ಶ್ರಮ ಮಹತ್ವದ್ದಾಗಿದೆ. ಪೌರ ಕಾರ್ಮಿಕರು ವರ್ಷಪೂರ್ತಿ ನಗರವನ್ನು ಸ್ವಚ್ಛವಾಗಿಡಲು ಆರೋಗ್ಯವನ್ನು ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ ಎಂದರು. ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. 

ವೇದಿಕೆ ಸಮಾರಂಭದ ಮುಂಚಿತವಾಗಿ ನಗರದುದ್ದಕ್ಕೂ ಪೌರ ಕಾರ್ಮಿಕರ ದಿನಾಚರಣೆ ಆಚರಿಸುವ ಜೊತೆಗೆ ಧ್ವನಿ ವರ್ಧಕದ ಹಾಡುಗಳಿಗೆ ಪೌರ ಕಾರ್ಮಿಕ ಹೆಜ್ಜೆ ಹಾಕಿದರು. ನಂತರ ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಪೌರ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು. ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ರೀಜನ್ ಅಧ್ಯಕ್ಷ ಡಿ.ಮೌನೇಶ್ ಮಾತನಾಡಿ, ಪೌರ ಕಾರ್ಮಿಕರ ಆರೋಗ್ಯ ಕಾಪಾಡಿಕೊಂಡು, ನಗರದ ಸ್ವಚ್ಚತೆಗೆ ಮುಂದಾಗಬೇಕು. ನಗರವನ್ನು ಸ್ವಚ್ಚವಾಗಿಡಲು ಕಾರ್ಮಿಕರ ಪಾತ್ರ ದೊಡ್ಡದಿದೆ. ಅವರಿಗೆ ಗೌರವ ನೀಡುವ ಮೂಲಕ ಸಹಕರಿಸಬೇಕಾಗಿದೆ ಎಂದರು.  ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕ ಅಧ್ಯಕ್ಷ ಡಾ.ಭರತ್ ಪದ್ಮಸಾಲಿ, ಆರೋಗ್ಯ ಹಿರಿಯ ನೀರೀಕ್ಷಕ ಪ್ರಕಾಶಬಾಬು, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ರುದ್ರ​‍್ಪ ಆಚಾರ್, ಶಾಂತಿಲಾಲ್, ಪೌರ ಕಾರ್ಮಿಕರಾದ ಹೆಚ್‌.ರವಿ, ಹನುಮಂತ, ಓಬಳೇಶ, ಸುಂಕಪ್ಪ, ರಾಮಪ್ಪ, ಸುಜಾತ, ನಾಗಮ್ಮ, ಲಕ್ಷ್ಮಿದೇವಿ, ಅನಂತಮ್ಮ ಸೇರಿದಂತೆ ಸಿಬ್ಬಂದಿಗಳು, ಪೌರ ಕಾರ್ಮಿಕರು ಇದ್ದರು.