ಡಿಜಿ ಫೋಟೋ ಎಕ್ಸಪೋ ಉದ್ಘಾಟನೆ

ಲೋಕದರ್ಶನ ವರದಿ

ಹುಬ್ಬಳ್ಳಿ01: ನಗರದ ಕುಸಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್ನಲ್ಲಿಂದು 2ನೇ ರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನ ಮೇಳ ಮತ್ತು ಡಿಜಿ ಫೋಟೋ ಎಕ್ಸ್ಪೋವನ್ನಿಂದು ಮೂರುಸಾವಿರಮಠದ ಜಗದ್ಗುರುಗಳಾದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು  ಉದ್ಘಾಟಿಸಿದರು.

 ಹುಬ್ಬಳ್ಳಿ ಪೋಟೊಗ್ರಾಪಸರ್್ ಮತ್ತು ವಿಡಿಯೋಗ್ರಾಪಸರ್್ ಅಸೊಶಿಯೇಶನ್ ಹಾಗೂ ಕನರ್ಾಟಕ  ಪೋಟೊಗ್ರಾಪಸರ್್ ಮತ್ತು ವೀಡಿಯೋಗ್ರಾಪಸರ್್ ಅಸೊಶಿಯೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪ್ರದರ್ಶನದಲ್ಲಿಪ್ಯಾನಾಸೋನಿಕ್, ಸೋನಿ, ನಿಕಾನ್, ಕೆನಾನ್, ಜೆವಿಸಿ ಸೇರಿದಂತೆ  ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಮನುಷ್ಯ ಅತ್ಯಂತ ಪ್ರೀತಿಸುವುದು ತನ್ನ ಬಿಂಬವನ್ನು.ಎರಡನೆಯದಾಗಿ ಪ್ರತಿಬಿಂಬವನ್ನು ಹೆಚ್ಚು ಪ್ರೀತಿಸುತ್ತಾನೆ .ಪ್ರತಿಬಿಂಬ ನೀಡುವ ಕಾಯಕವನ್ನು ಮಾಡುವ ಛಾಯಾಗ್ರಾಹಕರನ್ನು ಮುಕ್ತವಾಗಿ ಪ್ರಶಂಸಿದರಲ್ಲದೇ ವಿವಿಧ ಮಾಹಿತಿಗಳನ್ನು ಒಂದೇ ಸೂರಿನಡಿ ಪೂರೈಸುವ ಇಂತಹ  ಪ್ರದರ್ಶನ ಮೇಳಗಳು ಉಪಯುಕ್ತ ಎಂದರು

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಸ್ವರ್ಣ ಸಮೂಹದ ಚೇರಮನ್ ಡಾ.ವಿ.ಎಸ್.ವಿ.ಪ್ರಸಾದ ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು  ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ಇಂತಹ ಮೇಳಗಳನ್ನು ಆಯೋಜಿಸುತ್ತಿರುವುದು ಸ್ವಾಗತಾರ್ಹ.ಛಾಯಾಗ್ರಾಹಕರ ಉದ್ದೇಶಿತ ಛಾಯಾ ಭವನಕ್ಕೆ ನೆರವು ನೀಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಶಶಿ ಸಾಲಿ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಲ್ಲದೇ 15 ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಹುಬ್ಬಳ್ಳಿ ಸಂಘದ ಅಧ್ಯಕ್ಷ ಕಿರಣ ಬಾಕಳೆ ಸಂಘ ನಡೆದು ಬಂದ ದಾರಿಯನ್ನು ವಿವರಿಸಿಪೋಟೊಗ್ರಫಿ ಹಾಗೂ ವಿಡಿಯೋಗ್ರಫಿಯನ್ನು ಉತ್ತೇಜಿಸುವ ಕಾರಣದಿಂದ ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗುತ್ತಿದ್ದು ಉತ್ತರ ಕನರ್ಾಟಕದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಛಾಯಾಗ್ರಾಹಕರಿಗೆ ಇದರ ಪ್ರಯೋಜನ ದೊರೆಯಲಿದೆ ಎಂದರಲ್ಲದೇ ಛಾಯಾ ಭವನ ನಿಮರ್ಿಸುವ ಯೋಜನೆ ಹೊಂದಿರುವುದಾಗಿ ಹೇಳಿದರು. 

ಕನರ್ಾಟಕ  ಪೋಟೊಗ್ರಾಪಸರ್್  ಸಂಘದ ಅಧ್ಯಕ್ಷ ಶ್ರೀನಿವಾಸ, ಜಯೇಶ ಇರಕಲ್, ದಿನೇಶ ದಾಬಡೆ, ಜಗದೀಶ, ಗುರುರಾಜ ಕುಲಕಣರ್ಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಇದ್ದರು. ಡಾ.ಗಂಗೂಬಾಯಿ ಹಾನಗಲ್ ಪ್ರತಿಷ್ಠಾನದ ಮನೋಜ ಹಾನಗಲ್ ನಿರೂಪಿಸಿದರು.