ಧಾರವಾಡ03: ಇಂದಿನಿಂದ ಜೂನ್ 17 ರ ವರೆಗೆ ಜಿಲ್ಲೆಯಾದ್ಯಂತ ನಡೆಯುವ ಅತಿಸಾರ ಭೇದಿಯ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ: ಬಿ.ಸಿ. ಸತೀಶ್ ಚಾಲನೆ ನೀಡಿದರು.
ನಗರದ ಜಿಲ್ಲ್ಲಾಸ್ಪತ್ರೆ ಚಿಕ್ಕ ಮಕ್ಕಳ ತಜ್ಞ ಡಾ|| ಚಂದ್ರಕಾಂತ ನಾಡಗೌಡ ಮಾತನಾಡಿ, ಅತಿಸಾರ ಭೇದಿ ತೀವ್ರತರ ನಿಯಂತ್ರಣಕ್ಕಾಗಿ 5 ವರ್ಷದೊಳಗಿನ ಮಕ್ಕಳಿಗೆ ಓ.ಆರ್.ಎಸ್ ನೀಡಬೇಕು.
ಭೇದಿಯ ಸಂದರ್ಭದಲ್ಲಿ ಆರೋಗ್ಯ ಸಹಾಯಕಿಯರಿಂದ ಝಿಂಕ್ ಮಾತ್ರೆಗಳನ್ನು ಪಡೆದು ಮಗುವಿಗೆ 14 ದಿನಗಳವರೆಗೆ ನೀಡಬೇಕು, ಕುದಿಸಿ ಆರಿಸಿದ ನೀರಿಗೆ ಒಂದು ಓ.ಆರ್.ಎಸ್ ಪೊಟ್ಟಣ ಹಾಕಿ ತಯಾರಿಸಿದ ಓ.ಆರ್.ಎಸ್ ಅನ್ನು 24 ಗಂಟೆ ಮಾತ್ರ ಉಪಯೋಗಿಸಬೇಕು. 6 ತಿಂಗಳವರೆಗೆ ತಾಯಿ ಎದೆಹಾಲನ್ನು ಮಾತ್ರ ಕುಡಿಸಬೇಕೆಂದು ತಿಳಿಸಿದರು.
ರೆಡಕ್ರಾಸ್ ಉಪಾಧ್ಯಕ್ಷ ಡಾ|| ವಿ.ಡಿ.ಕಪರ್ೂರಮಠ ಮಾತನಾಡಿ, ಪೌಷ್ಠಿಕ ಆಹಾರದ ಬಗ್ಗೆ ಮತ್ತು ಮಗುವಿಗೆ ಆಹಾರವನ್ನು ಕೊಡುವಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು. ಝಿಂಕ್ ಮಾತ್ರೆ ಉಪಯೋಗ ಮಾಡುವುದರಿಂದ ಮತ್ತೆ ಮತ್ತೆ ರೋಗ ಬರುವಿಕೆಯನ್ನು ತಡೆಯಬಹುದು ಎಂದರು.
ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಪುಷ್ಪಾ ಹೆಚ್.ಆರ್. ಅಧ್ಯಕ್ಷತೆ ವಹಿಸಿದ್ದರು. ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ|| ಶಿವಕುಮಾರ್ ಮಾನಕರ, ಜಿಲ್ಲಾ ಸಮಿಕ್ಷಣಾಧಿಕಾರಿ ಡಾ|| ಸುಜಾತಾ ಹಸವಿಮಠ, ಜಿಲ್ಲಾ ಕುಷ್ಠರೋಗ ನಿಮರ್ೂಲನಾಧಿಕಾರಿ ಡಾ|| ಶಶಿ ಪಾಟೀಲ, ಹೆರಿಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ಶೋಭಾ ಮೂಲಿಮನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್. ಅಗಡಿ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಬಾಡಗಿ ವಂದಿಸಿದರು.